Peacock Viral Video :ಪ್ರಕೃತಿಗೆ ಜೀವ ಕಳೆ ತುಂಬುವ ಪ್ರಾಣಿ ಪಕ್ಷಿಯ ಸೊಬಗು ನೋಡಲು ಅದೇನೋ ಮನಸಿಗೆ ಹಿತವೆನಿಸುತ್ತೆ. ಹಾಗೆಯೇ ನವಿಲಿನ (peacock ) ನರ್ತನ ನೋಡಲು ಎರಡು ಕಣ್ಣು ಸಾಲುವುದಿಲ್ಲ. ನವಿಲಿನ ಮನೋಹರ ನರ್ತನಕ್ಕೆ ಒಂದು ಬಾರಿ ನಾವು ಮೈ ಮರೆತು ಹೋಗುವುದು ಖಂಡಿತ. ಆದರೆ ಇಲ್ಲಿ ನವಿಲಿನ ನರ್ತನವನ್ನು ಭಂಗ ಗೊಳಿಸಲು ವ್ಯಾಘ್ರ ಹುಲಿಯೊಂದು ನವಿಲಿನ ಮೇಲೆ ರಾಕ್ಷಸನಂತೆ ಒರಗಿದೆ. ನಂತರ ಏನಾಯಿತು ಬನ್ನಿ ನೋಡೋಣ.
ಕ್ರೂರ ಪ್ರಾಣಿಗಳಲ್ಲಿ ಹಿಂದು ಮುಂದು ನೋಡದೆ ದಾಳಿ ಮಾಡುವುದರಲ್ಲಿ ಹುಲಿ ಕೂಡ ಒಂದು. ಕಣ್ಣೆದುರು ಮನುಷ್ಯರಿದ್ದರೂ, ಪ್ರಾಣಿ, ಪಕ್ಷಿ ಇದ್ದರೂ ಹುಲಿ ದಾಳಿ ಮಾಡಲು ಯತ್ನಿಸುತ್ತವೆ. ಆದರೆ ಸುಂದರವಾದ ನವಿಲಿನ ಮೇಲೆ ಪ್ರಾಣಿಗಳು ದಾಳಿ ಮಾಡುವುದನ್ನು ನಾವು ನೋಡಿರುವುದು ಅತೀ ವಿರಳವಾಗಿದೆ. ಇದೀಗ ಹುಲಿ ನವಿಲಿನ ಮೇಲೆ ದಾಳಿ ಮಾಡಿರುವ ವಿಡಿಯೋ ವೈರಲ್ (Peacock Viral Video) ಆಗಿದೆ.
ಕೆಲವು ನವಿಲುಗಳು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಕಾಡಿನಲ್ಲಿ ಆಹಾರ ಸೇವಿಸುತ್ತಿದ್ದವು. ಸ್ವಲ್ಪ ಸಮಯದ ನಂತರ, ಅವುಗಳ ನಡುವೆ ಇದ್ದ ದೊಡ್ಡ ಗಂಡು ನವಿಲು ಇದ್ದಕ್ಕಿದ್ದಂತೆ ಪುಳಕಿತಗೊಂಡು ತನ್ನ ಗರಿಯನ್ನು ಬಿಚ್ಚಿ ನೃತ್ಯ ಮಾಡುತ್ತದೆ. ಈ ಸಂದರ್ಭದಲ್ಲಿ ಏಕಯೇಕಿ ನವಿಲಿನ ಹಿಂಭಾಗದ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ದೊಡ್ಡ ಹುಲಿಯೊಂದು ಸುಂದರವಾಗಿ ಗರಿ ಬಿಚ್ಚಿಕೊಂಡು ನೃತ್ಯ ಮಾಡುತ್ತಿದ್ದ ನವಿಲನ್ನು ಹಿಡಿಯಲು ದಾಳಿ ಮಾಡಿದೆ. ಸದ್ಯ ಹುಲಿಯು ನವಿಲಿನತ್ತ ದಾಳಿ ಮಾಡುತ್ತಿದ್ದಂತೆ ನವಿಲು ತಕ್ಷಣ ಜಾಗೃತವಾಗುತ್ತದೆ. ಆ ಕೂಡಲೇ ಗರಿಬಿಚ್ಚಿ ನಿಂತಿದ್ದ ಕುಣಿಯುತ್ತಿದ್ದ ಗಂಡು ನವಿಲು ಗಾಳಿಯಲ್ಲಿ ರೆಕ್ಕೆಗಳನ್ನು ಬಡಿಯುತ್ತಾ ಹಾರಿದ್ದು , ಜೊತೆಗೆ ಸಣ್ಣ ಮರಿ ನವಿಲುಗಳೂ ದೊಡ್ಡ ನವಿಲನ್ನು ಹಿಂಬಾಲಿಸುತ್ತವೆ. ಸದ್ಯ ಅಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media ) ವೈರಲ್ (viral ) ಆಗಿದ್ದು. ಇದುವರೆಗೆ ಹಲವು ಸಾವಿರಕ್ಕೂ ಹೆಚ್ಚು ಲೈಕ್’ಗಳನ್ನು ಮತ್ತು 2 ಮಿಲಿಯನ್’ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೀವು ಸಹ ಈ ವಿಡಿಯೋ ನೋಡಿದಾಗ ಒಂದು ಕ್ಷಣ ಮೈ ಜುಮ್ ಎನ್ನುವುದು ಖಂಡಿತಾ.
