Home » Mangalore cooker blast : ಕುಕ್ಕರ್ ಬಾಂಬ್ ಸ್ಫೋಟ, ಶಾರೀಕ್ ಗೆ ಮಂಗಳೂರಿನಲ್ಲಿ ಸ್ಥಳ ಮಹಜರು ಸಾಧ್ಯತೆ!

Mangalore cooker blast : ಕುಕ್ಕರ್ ಬಾಂಬ್ ಸ್ಫೋಟ, ಶಾರೀಕ್ ಗೆ ಮಂಗಳೂರಿನಲ್ಲಿ ಸ್ಥಳ ಮಹಜರು ಸಾಧ್ಯತೆ!

0 comments
Mangalore cooker blast

Mangalore cooker blast : ಮಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ (Mangalore cooker blast) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಉಗ್ರ ಶಾರೀಕ್‌ (shariq) ನನ್ನು ಮಂಗಳೂರಿಗೆ ಸ್ಥಳ ಮಹಜರಿಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಂಗಳೂರು ನಗರದ ನಾಗುರಿಯಲ್ಲಿ ನ.19ರಂದು ಶಾರೀಕ್‌ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದ್ದು, ಡಿಟೋನೇಟರ್‌ನ ಅಸಮರ್ಪಕ ಸಂಪರ್ಕದಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿ, ಗುರಿ ತಲುಪುವ ಮೊದಲೇ ಮಾರ್ಗಮಧ್ಯೆ ನಾಗುರಿ ಬಳಿಯೇ ಬಾಂಬ್‌ ಸ್ಫೋಟಿಸಿದೆ. ಸ್ಪೋಟದಿಂದ ಗಾಯಗೊಂಡಿದ್ದ ಆರೋಪಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ವಶಕ್ಕೆ ಪಡೆದಿದ್ದು, ಬೆಂಗಳೂರಿಗೆ ಕರೆದೊಯ್ದು ಅಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರು. ಇದೀಗ ಆರೋಪಿ ಶಿವಮೊಗ್ಗದ ಶಾರೀಕ್‌ನ್ನು ಸ್ಥಳ ಮಹಜರು ಪ್ರಕ್ರಿಯೆಗೆ ಮಂಗಳೂರಿಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರೋಪಿಯನ್ನು ಮಂಗಳವಾರ ಎನ್‌ಐಎ ತಂಡ ಬೆಂಗಳೂರಿನಿಂದ (Bengaluru) ಶಿವಮೊಗ್ಗಕ್ಕೆ ಕರೆತಂದಿದ್ದು, ಅಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಅಲ್ಲಿಂದ ಉಗ್ರ ಶಾರೀಕ್‌ನ್ನು ಎನ್‌ಐಎ ತಂಡ ಮಂಗಳೂರಿಗೆ ಕರೆತರಲಿದ್ದು, ಮಂಗಳೂರಿನ ಕಂಕನಾಡಿಯ (mangaluru, kankanadi) ಘಟನಾ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಿದೆ ಎಂದು ತಿಳಿದುಬಂದಿದೆ.

ಎನ್‌ಐಎ ತಂಡ ಶಾರೀಕ್‌ ಆಟೋದಲ್ಲಿ ಬಂದಿರುವಂತದ್ದು, ಆತ ಮಂಗಳೂರಿಗೆ ಬಂದಾಗ ಯಾವ ಸ್ಥಳಗಳಿಗೆ ಭೇಟಿ ನೀಡಿದ್ದ, ಎಲ್ಲೆಲ್ಲಿ ಸಂಚರಿಸಿದ್ದ, ಉಗ್ರ ಶಾರೀಕ್ ಹೆಜ್ಜೆ ಇಟ್ಟ ಪ್ರತಿ ಸ್ಥಳಗಳ ಮಾಹಿತಿಯನ್ನು ಈಗಾಗಲೇ ಕಲೆಹಾಕಿದ್ದು, ಆ ಸ್ಥಳಗಳಲ್ಲಿ ಮಹಜರು ನಡೆಸಲಿದೆ. ಹಾಗೆಯೇ ನಡೆದ ಘಟನೆಯನ್ನು ರೀ ಟೇಕ್‌ ಮಾಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಂಕಿತ ಉಗ್ರ ಶಾರೀಕ್‌ ಮಂಗಳೂರಿಗೆ ಬರುವುದಕ್ಕೆ ಮುಂಚಿತವಾಗಿ ಮೈಸೂರು (Mysore), ಕೇರಳ (Kerala) ತಮಿಳ್ನಾಡು ಪ್ರದೇಶಗಳಲ್ಲಿ ಸಂಚರಿಸಿದ್ದಾನೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅಲ್ಲಿಗೂ ಆತನನ್ನು ಕರೆದುಕೊಂಡು ಹೋಗಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Kirik Keerthi : ಕಿರಿಕ್ ಕೀರ್ತಿ ಸಂಸಾರದಲ್ಲಿ ಬಿರುಕು?!

You may also like

Leave a Comment