Home » ಪೊಲೀಸ್ ಎಂದು ಹೇಳಿ ಬೆದರಿಸಿ ಹಣ ಪಡೆದು ವಂಚನೆ : ಆರೋಪಿಯ ಬಂಧನ

ಪೊಲೀಸ್ ಎಂದು ಹೇಳಿ ಬೆದರಿಸಿ ಹಣ ಪಡೆದು ವಂಚನೆ : ಆರೋಪಿಯ ಬಂಧನ

by Praveen Chennavara
0 comments

Mangalore Police : ಮಂಗಳೂರು: ಪೊಲೀಸ್ ಎಂದು ಹೇಳಿ‌ ಮಹಿಳೆಯನ್ನು ಬೆದರಿಸಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ( Mangalore Police) ಬಂಧಿಸಿದ್ದಾರೆ.

ಕಾವೂರು ಈಶ್ವರ‌ನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.

ಸವಿತಾ (45) ಎಂಬವರಿಗೆ ಶಿವರಾಜ್ ತಾನು ಪೊಲೀಸ್ ಎಂಬುದಾಗಿ ತಿಳಿಸಿ “ನೀವು ಮಸಾಜ್ ಪಾರ್ಲರ್ ನಡೆಸುವುದಕ್ಕೆ ಹಾಗೂ ಹೆಚ್ಚು ಬಂಗಾರ ಮತ್ತು ಹಣವನ್ನು ಇಟ್ಟುಕೊಂಡಿರುವ ಬಗ್ಗೆ ದೂರು ಬಂದಿದ್ದು ಪ್ರಕರಣ ಮುಚ್ಚಿ ಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ದಾಳಿ ಮಾಡುತ್ತೇವೆ” ಎಂದು ಮೊದಲಿಗೆ 10,000 ನಂತರ ,28,000 ರೂ.ಗಳನ್ನು ಪಡೆದುಕೊಂಡಿದ್ದನು.

ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತ ಈ ಹಿಂದೆ ಗೃಹರಕ್ಷಕ ದಳದಲ್ಲಿದ್ದು, ಅದೇ ಸಮವಸ್ತ್ರ ಧರಿಸಿಕೊಂಡು ಮಹಿಳೆಯನ್ನು ಹೆದರಿಸಿದ್ದ ಎಂದು ತಿಳಿದು ಬಂದಿದೆ.

You may also like

Leave a Comment