Frog-snake viral photo :ಕೆಲವೊಮ್ಮೆ ವಾಸ್ತವ ಮೀರಿದ ಘಟನೆಗಳು ನಡೆಯುವುದನ್ನು ಕೇಳಿರುತ್ತೇವೆ ಅಥವಾ ನೋಡಿರುತ್ತೇವೆ. ಅದರಲ್ಲೂ ಪ್ರಾಣಿ ಪಕ್ಷಿಗಳ ಜೀವನ ಚಟುವಟಿಕೆ ಬಗೆಗಿನ ಹಲವಾರು ವಿಚಿತ್ರ ಕಾರ್ಯ ವೈಖರಿ ಕೆಲವೊಮ್ಮೆ ನಮ್ಮನ್ನು ಒಂದು ಬಾರಿ ಆಶ್ಚರ್ಯ ಗೊಳಿಸುತ್ತದೆ.
ಹಾಗೆಯೇ ಬೃಹತ್ ಗಾತ್ರದ ಹಾವೊಂದು ಕಪ್ಪೆಯ ಹೊಟ್ಟೆಯಿಂದ ಮಲದ ರೂಪದಲ್ಲಿ ಹೊರಬಂದಿರುವ ಫೋಟೊ ಎಲ್ಲೆಡೆ ವೈರಲ್(Frog-snake viral photo)ಆಗಿದೆ. ಸದ್ಯ ಸನ್ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಹೆಸರಿನ ಖಾತೆಯಿಂದ ಫೇಸ್ಬುಕ್ನಲ್ಲಿ (Facebook ) ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಬೃಹತ್ ಗಾತ್ರದ ಹಾವೊಂದು (Snake ) ಕಪ್ಪೆಯ (frog) ಹೊಟ್ಟೆಯಿಂದ ಮಲದ ರೂಪದಲ್ಲಿ ಹೊರಬಂದಿರುವ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ಇಷ್ಟು ಪುಟ್ಟ ಕಪ್ಪೆ ಅಷ್ಟೊಂದು ದೊಡ್ಡ ಹಾವನ್ನು ನುಂಗಿತೇ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಒಂದು ವೇಳೆ ಕಪ್ಪೆಯು ಆ ಹಾವು ನುಂಗಿದ್ದರೆ ಅಷ್ಟು ದೊಡ್ಡ ಹಾವನ್ನು ಹೇಗೆ ನುಂಗಿತು ಎಂಬುದು, ಮತ್ತೊಂದು ಕಪ್ಪೆಯ ಗುದದ್ವಾರದಲ್ಲಿ ಆ ದೊಡ್ಡ ಹಾವು ಹೇಗೆ ಬರಲು ಸಾಧ್ಯ ಎಂಬ ಗೊಂದಲದ ಪ್ರಶ್ನೆಯನ್ನು ಕೇಳಲಾಗಿದೆ.
ತಜ್ಞರ ಪ್ರಕಾರ ಈ ಹಾವು ಈಸ್ಟರ್ನ್ ಬ್ರೌನ್ ಸ್ನೇಕ್ ಜಾತಿಗೆ ಸೇರಿದ್ದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನು ಕಪ್ಪೆ ಹಾವನ್ನು ನುಂಗಿದೆ ಆದರೆ ಅರಗಿಸಿಕೊಳ್ಳಲಾಗದ ಪರಿಣಾಮ ಇಡೀ ಹಾವು ಗುದದ್ವಾರದಿಂದ ಹೊರಬಂದಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಈ ಫೋಟೋ ನೋಡಿದಾಗ ಕಪ್ಪೆ ತನ್ನ ಹಿಂಗಾಲುಗಳಿಂದ ನೂಕಿ ಹಾವನ್ನು ಹೊರಹಾಕಲು ಪ್ರಯತ್ನಿಸುವುದನ್ನು ಕಾಣಬಹುದು. ಆದರೆ ಕಪ್ಪೆ ಹಾವನ್ನು ಬೇರ್ಪಡಿಸಿದ ಬಳಿಕ ಹಾವು ಮೃತಪಟ್ಟಿರುವುದಾಗಿ ಮತ್ತು ಹಾವನ್ನು ಹೊರ ತೆಗೆದ ಬಳಿಕ ಕಪ್ಪೆ ತನಗೇನೂ ಆಗಿಲ್ಲ ಎಂಬ ರೀತಿ ಓಡಿ ಹೋಯಿತು ಎಂದು ಉರಗತಜ್ಞರು ಖಚಿತಪಡಿಸಿದ್ದಾರೆ.
ಒಟ್ಟಿನಲ್ಲಿ ಕಾಲಚಕ್ರ ವಿಚಿತ್ರವಾಗಿದೆ ಎನ್ನಬಹುದು. ಹಾವು ಕಪ್ಪೆಯನ್ನು ನುಂಗುವ ಕಾಲ ಮುಗಿದು, ಕಪ್ಪೆ ಹಾವನ್ನು ನುಂಗುವ ಕಾಲದಲ್ಲಿ ನಾವು ಇರುವುದು ವಾಸ್ತವ.
