Home » Army Helicopter Crash: ಅರುಣಾಚಲದಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ! ಇಬ್ಬರು ಪೈಲೆಟ್ಗಳಿಗಾಗಿ ಶೋಧನೆ

Army Helicopter Crash: ಅರುಣಾಚಲದಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ! ಇಬ್ಬರು ಪೈಲೆಟ್ಗಳಿಗಾಗಿ ಶೋಧನೆ

by ಹೊಸಕನ್ನಡ
0 comments
Army Helicopter Crash

Army Helicopter Crash :ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ​​ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದ್ದು, ಅರುಣಾಚಲ ಪ್ರದೇಶದ ಮಂಡ್ಲಾ ಬೆಟ್ಟದ ಬಳಿ ಪತನಗೊಂಡಿದೆ. ಅಲ್ಲದೆ ಸದ್ಯ ಪೈಲಟ್‌ಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಚೀತಾ ಹೆಲಿಕಾಪ್ಟರ್ ಗುರುವಾರ ಬೆಳಗ್ಗೆ ಸುಮಾರು 9.15 ಗಂಟೆಗೆ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control)ನೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಗುವಾಹಟಿ ರಕ್ಷಣಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ದೃಢಪಡಿಸಿದ್ದಾರೆ. ಘಟನೆ ಬಳಿಕ ಇಬ್ಬರು ಪೈಲಟ್‌ಗಳು ನಾಪತ್ತೆಯಾಗಿದ್ದು, ಸೇನೆಯಿಂದ ಶೋಧ ಕಾರ್ಯ ನಡೆದಿದೆ.

ಕಳೆದ ವರ್ಷ ಕೂಡ ಇದೇ ಅರುಣಾಚಲ ಪ್ರದೇಶದ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದು (Army Helicopter Crash) ಅದರಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಲೆಪ್ಟಿನೆಂಟ್ ಕರ್ನಲ್ ಸೌರಬ್ ಯಾದವ್ ಚಿಕಿತ್ಸೆ ವೇಳೆಯಲ್ಲಿ ಮೃತಪಟ್ಟಿದ್ದರೆಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದರು.

You may also like

Leave a Comment