Home » Actor Jaggesh : ನಟ ಜಗ್ಗೇಶ್ ಗೆ ಶುಭಾಷಯಗಳ ಸುರಿಮಳೆ ಹೀಗಿದೆ!

Actor Jaggesh : ನಟ ಜಗ್ಗೇಶ್ ಗೆ ಶುಭಾಷಯಗಳ ಸುರಿಮಳೆ ಹೀಗಿದೆ!

0 comments
Actor Jaggesh

Actor Jaggesh :ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಎಂದೇ ಹೆಸರುವಾಸಿಯಾಗಿರುವ ನಟ ಜಗ್ಗೇಶ.ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಡುವ ಜಗ್ಗೇಶ್ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1963,ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಈಶ್ವರ ಗೌಡ.

ಚಿತ್ರರಂಗ ಮಾತ್ರವಲ್ಲದೇ ರಾಜಕಾರಣದಲ್ಲೂ ಸಕ್ರಿಯವಾಗಿರುವ ಇವರು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಇವರು ರಾಜ್ಯಸಭಾ ಸದಸ್ಯರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂದ ಹಾಗೇ ನಟ ಜಗ್ಗೇಶ (Actor Jaggesh) ಅವರಿಗೆ ಇಂದು ಜನ್ಮ ದಿನದ ಸಂಭ್ರಮ. ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಗ್ಗೇಶ್‌ ಭೇಟಿ ಮಾಡಿದ್ದರು. ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾ.17 ನನ್ನ ಹುಟ್ಟುದಿನ. ಅವರಿಗೀಗ 60ನೇ ವಯಸ್ಸಿನ ಸಂಭ್ರಮ.

ಅವರ ಜನ್ಮ ದಿನಕ್ಕೆ ಅನೇಕ ಗಣ್ಯರು ವಿಶ್ ಮಾಡಿ ಜನ್ಮ ದಿನದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಟ್ವೀಟ್‌ ಮಾಡಿರುವ ಸಿಎಂ ಬೊಮ್ಮಾಯಿ, ಜನಪ್ರಿಯ ಚಿತ್ರನಟರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಜಗ್ಗೇಶ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಹಾಸ್ಯ ನಟನಿಗೆ ಜನ್ಮ ದಿನದ ಶುಭ ಕೋರಿ ಟ್ವೀಟ್‌ ಮಾಡಿದ್ದಾರೆ.

You may also like

Leave a Comment