Home » Jio Service : ಜಿಯೋ ತಂದಿದೆ ಸಿಮ್‌ಕಾರ್ಡ್‌ ಇಲ್ಲದ ಮೊಬೈಲ್‌ ಫೋನ್‌!

Jio Service : ಜಿಯೋ ತಂದಿದೆ ಸಿಮ್‌ಕಾರ್ಡ್‌ ಇಲ್ಲದ ಮೊಬೈಲ್‌ ಫೋನ್‌!

0 comments
Jio service

Jio service : ಎಲ್ಲಿ ನೋಡಿದರು ಮೊಬೈಲ್ ಫೋನ್ ಹವಾ ಜೋರಾಗಿದೆ. ಕೂತರು, ನಿಂತರು ಮೊಬೈಲ್ ಒಂದು ಜೊತೆಯಲ್ಲೇ ಇರುತ್ತೆ. ಅಂತೆಯೇ ಮೊಬೈಲ್​ ಕಂಪೆನಿಗಳು ಗ್ರಾಹಕರು(customer)ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಹೊಸ ಹೊಸ(new )ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುತ್ತಲೇ ಇದೆ. ಸದ್ಯ ಮೊಬೈಲ್ ಫೋನ್ ಜೊತೆಗೆ ಸಿಮ್ ಕಾರ್ಡ್ , ಚಾರ್ಜರ್, ರಿಚಾರ್ಜ್ ಇರಲೇ ಬೇಕು. ಇಲ್ಲಾ ಅಂದ್ರೆ ಮೊಬೈಲ್ ಇದ್ದರೂ ಪ್ರಯೋಜನ ಇಲ್ಲದಂತೆ ಆಗುತ್ತೆ. ಅದರಲ್ಲೂ ಸಿಮ್ ಕಾರ್ಡ್ ಇಲ್ಲದೇ ಇದ್ದರೆ ಮೊಬೈಲ್ ಉಪಯೋಗಿಸೋಕೆ ಆಗೋಲ್ಲ.

ಇದೀಗ ಸಿಮ್ ಕಾರ್ಡ್ (SIM Card) ಇಲ್ಲದೆ ಇದ್ರೆ ಫೋನ್ ವರ್ಕ್ ಆಗುವುದಿಲ್ಲ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಇನ್ನು ಮುಂದೆ ಇ- ಸಿಮ್ (E-SIM) ಅನ್ನು ಬಳಸಿ ಮೊಬೈಲ್ ಫೋನ್ ಕೆಲಸ ಮಾಡುತ್ತದೆ. ಸಾಮಾನ್ಯ ಸಿಮ್ ಕಾರ್ಡ್ ಬದಲು ಇ-ಸಿಮ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಅಂದರೆ ಫೋನಿನಲ್ಲಿ ಸಿಮ್ ಇರುವುದಿಲ್ಲ ಅದರ ಬದಲು ಸಿಮ್ಅನ್ನು ಫೋನಿನಲ್ಲಿ ಎಂಬೆಡ್ ಮಾಡಿರಲಾಗುತ್ತದೆ.

ಹೌದು ಪ್ರಮುಖ ಟೆಲಿಕಾಂ ಕಂಪನಿಗಳಾದ Airtel, Jioಹಾಗೂ ವಿ ಐ ಭಾರತದಲ್ಲಿ ಮೊಬೈಲ್ ನಲ್ಲಿ ಸಿಮ್ ಬಳಸದೆ E-SIM ಮೂಲಕ ಸೇವೆ ಒದಗಿಸುವುದಕ್ಕೆ ಮುಂದಾಗಿವೆ. ಆದರೆ ಎಲ್ಲಾ ಫೋನ್ ಗಳಲ್ಲಿಯೂ ಇ-ಸಿಮ್ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನಿಮ್ಮ ಭೌತಿಕ ಸಿಮ್ ಅನ್ನು ಇ-ಸಿಮ್ ಆಗಿ ಪರಿವರ್ತಿಸಿಕೊಳ್ಳಬೇಕಾಗುತ್ತದೆ.

ಇದೀಗ ಜಿಯೋ (jio service) ಒದಗಿಸುತ್ತಿರುವ ಇ-ಸಿಮ್ ಕಾರ್ಡ್ ಸೇವೆಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಹೇಗೆ ಸಕ್ರಿಯಗೊಳಿಸಿಕೊಳ್ಳಬೇಕೆಂಬ ವಿಧಾನ ಇಲ್ಲಿ ತಿಳಿಸಲಾಗಿದೆ :

ಇ-ಸಿಮ್ ನ್ನು ನೀವು ಪಡೆದುಕೊಳ್ಳಲು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಇ-ಸಿಮ್ ಖಚಿತಪಡಿಸಿಕೊಳ್ಳಬೇಕು. ಇದನ್ನು ಜಿಯೋದ ಅಧಿಕೃತ ವೆಬ್ಸೈಟ್ ಮೂಲಕ ಪರಿಶೀಲಿಸಿಕೊಳ್ಳಬಹುದು. ನಂತರ ಮೊಬೈಲ್ ನಲ್ಲಿ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ನಿಮ್ಮ ಐಎಂಈಐ ಮತ್ತು ಇಐಡಿ ಸಂಖ್ಯೆಯನ್ನು ಚೆಕ್ ಮಾಡಲು ಸಾಧ್ಯವಿದೆ. ಈಗ ನೀವು ಜಿಯೋ ಸಿಮ್ ಉಪಯೋಗಿಸುತ್ತಿದ್ದರೆ ಆಂಡ್ರಾಯ್ಡ್ ಸಾಧನದಿಂದ GETSIM ಎಂದು ಟೈಪ್ ಮಾಡಿ ಅದರಲ್ಲಿ 32 ಡಿಜಿಟ್ ಆಕ್ಟಿವೇಶನ್ ಕೋಡ್ ಹಾಕಿ 199ಗೆ ಮೆಸೇಜ್ ಕಳುಹಿಸಬೇಕು. ನಂತರ 19 ಡಿಜಿಟ್ ಇ ಸಿಮ್ ನಂಬರ್ ಹಾಗೂ ಇ- ಸಿಮ್ ನ ಪರ್ಸನಲ್ ಡೀಟೇಲ್ಸ್ ಅನ್ನು ಪಡೆಯುತ್ತೀರಿ.

ನೀವು ಮೆಸೇಜ್ ಕಳುಹಿಸಿದ 2 ಗಂಟೆಗಳ ನಂತರ ಇ- ಸಿಮ್ ಪ್ರಕ್ರಿಯೆಯ ಕುರಿತು ಅಪ್ಡೇಟ್ ಪಡೆಯುತ್ತೀರಿ. ಎಸ್ಎಂಎಸ್ ಸ್ವೀಕರಿಸಿದ ನಂತರ ‘1’ ನ್ನು 183 ಗೆ ಕಳುಹಿಸಿ. ಹೀಗೆ ನೀವು ಖಚಿತಪಡಿಸಿದ ನಂತರ ಜೀಯೋ ಸಂಖ್ಯೆಗೆ ಒಂದು ಕರೆ ಬರುತ್ತದೆ. ಅದರಲ್ಲಿ ನೀವು ನಿಮಗೆ ಎಸ್ ಎಂ ಎಸ್ ಬಂದಿರುವ 19 ಅಂಕೆಯ ಇ-ಸಿಮ್ ನಂಬರ್ ತಿಳಿಸಬೇಕು. ನಂತರ ನಿಮ್ಮ ಇ-ಸಿಮ್ ಖಾತರಿ ಆಗಿದೆ ಎಂದು ದೃಢೀಕರಣ ಎಸ್ ಎಂ ಎಸ್ ಬರುತ್ತದೆ. ಅಲ್ಲಿಂದ ಈ-ಸಿಮ್ ಸೇವೆ ಚಾಲನೆ ಆಗುತ್ತದೆ.

ಒಟ್ಟಿನಲ್ಲಿ E-SIM ಕಾರ್ಡ್ ಸೇವೆಯನ್ನು ಪ್ರಮುಖ ಟೆಲಿಕಾಂ ಕಂಪನಿಗಳಾದ Airtel, Jioಹಾಗೂ ವಿ ಐ ಭಾರತದಲ್ಲಿ ಮೊಬೈಲ್ ನಲ್ಲಿ ಸಿಮ್ ಬಳಸದೆ E-SIM ಮೂಲಕ ಸೇವೆ ಒದಗಿಸುವುದಕ್ಕೆ ಮುಂದಾಗಿವೆ.

You may also like

Leave a Comment