Home » Bajarang Dal Shivamogga: ಶಿವಮೊಗ್ಗದಲ್ಲಿ ಮಹಿಳೆಯರ ನೈಟ್ ಪಾರ್ಟಿ! ಬಜರಂಗ ದಳ ಕಾರ್ಯಕರ್ತರ ದಾಳಿ

Bajarang Dal Shivamogga: ಶಿವಮೊಗ್ಗದಲ್ಲಿ ಮಹಿಳೆಯರ ನೈಟ್ ಪಾರ್ಟಿ! ಬಜರಂಗ ದಳ ಕಾರ್ಯಕರ್ತರ ದಾಳಿ

0 comments
Bajarang Dal in Shivamogga

Bajarang Dal in Shivamogga: ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿರುವ ನೈಟ್‌ ಪಾರ್ಟಿಗಳ ಬಗ್ಗೆ ಇದೀಗ ಬಜರಂಗದಳ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಮಹಿಳೆಯರು ರಾತ್ರಿ ಪಾರ್ಟಿ ಮಾಡುತ್ತಿರುವುದನ್ನು ವಿರೋಧಿಸಿ, ಬಜರಂಗದಳ ಕಾರ್ಯಕರ್ತರು
ಶುಕ್ರವಾರ ಶಿವಮೊಗ್ಗದಲ್ಲಿನ (Bajarang Dal in Shivamogga) ಕುವೆಂಪು ರಸ್ತೆಯ ಹೋಟೆಲ್‌ವೊಂದಕ್ಕೆ ಪೊಲೀಸರು ಮೂಲಕ ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ (Shivamogga) ಮಹಿಳೆಯರು ನೈಟ್ ಪಾರ್ಟಿ ಮಾಡುತ್ತಿದ್ದು, ಇದನ್ನು ವಿರೋಧಿಸಿ ಬಜರಂಗದಳ (Bajrang Dal) ಕಾರ್ಯಕರ್ತರು ಪೊಲಿಸರಿಗೆ ದೂರು ನೀಡಿದ್ದು, ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜೊತೆಗೆ ಬಜರಂಗದಳ ಕಾರ್ಯಕರ್ತರು ಕೂಡ ಆಗಮಿಸಿ ಹೊಟೇಲ್ ಸಿಬ್ಬಂದಿಗೆ ಪಾರ್ಟಿ ನಿಲ್ಲಿಸುವಂತೆ ಹೇಳಿದ್ದಾರೆ.

ಪಾರ್ಟಿ (party) ಮಾಡುತ್ತಿದ್ದ ಮಹಿಳೆಯರಿಗೂ ಎಚ್ಚರಿಕೆ ನೀಡಿದ್ದಾರೆ. ಪಾರ್ಟಿ ನಿಲ್ಲಿಸುವಂತೆ, ಇನ್ನು ಮುಂದೆ ಈ ಪ್ರದೇಶದಲ್ಲಿ ಪಾರ್ಟಿ ಮಾಡಬಾರದು ಎಂದು ಎಚ್ಚರಿಕೆ ನೀಡಿ, ಮಹಿಳೆಯರನ್ನು ಹೋಟೆಲ್‌ನಿಂದ ಹೊರಗೆ ಕಳುಹಿಸಿದ್ದಾರೆ.

ಈ ವೇಳೆ ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಅವರು ಮಾತನಾಡಿ,“ ಮಹಿಳೆಯರ ನೈಟ್ ಪಾರ್ಟಿ ಬಗ್ಗೆ ಒಂದು ವಾರದ ಮೊದಲೇ ಪೊಲೀಸರಿಗೆ ತಿಳಿಸಲಾಗಿತ್ತು. ಮಲೆನಾಡು ಭಾಗದಲ್ಲಿ ಇಂತಹ ಪಾರ್ಟಿಗಳನ್ನು ನಡೆಸಬಾರದು ಎಂದು ತಿಳಿಸಿದ್ದೆವು. ಆದರೆ, ಮ‌ಹಿಳೆಯರು ಈ ಮಾತುಗಳನ್ನು ಲೆಕ್ಕಿಸದೆ, ಅದನ್ನು ಮೀರಿ ಪಾರ್ಟಿ ಮಾಡಿದ್ದಾರೆ. ಹಾಗಾಗಿ ನಾವು ಪೊಲೀಸ್ ಇಲಾಖೆ ಗಮನಕ್ಕೆ ತಂದು, ದೊಡ್ಡಪೇಟೆ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಬರಬೇಕಾಯಿತು. ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವಂತಹ ಪಾರ್ಟಿಯನ್ನು ಬಜರಂಗದಳದ ವತಿಯಿಂದ ನಿಲ್ಲಿಸಿದ್ದೇವೆ”ಎಂದು ತಿಳಿಸಿದರು.

You may also like

Leave a Comment