Home » Kidnap : ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿದ ಬಾಲಕ! ಈತನ ಕಾರಣ ಕೇಳಿ ಪೋಷಕರು ಶಾಕ್!

Kidnap : ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿದ ಬಾಲಕ! ಈತನ ಕಾರಣ ಕೇಳಿ ಪೋಷಕರು ಶಾಕ್!

0 comments
Boy Kidnap

boy Kidnap: ನಾವೆಲ್ಲಾ ಕೇಳಿರುವ ಹಾಗೆ ಒಬ್ಬ ವ್ಯಕ್ತಿಯನ್ನು ಆತನಿಗೆ ಗೊತ್ತಿಲ್ಲದೇ ಇನ್ನೊಬ್ಬ ವ್ಯಕ್ತಿ ಅಪಹರಿಸುತ್ತಾನೆ. ಆದರೆ ಇಲ್ಲಿ ನಡೆದಿರುವ ಘಟನೆ ಇದಕ್ಕೆ ತದ್ವಿರುದ್ಧ. ಹೌದು, ಬಾಲಕನೋರ್ವ ತನ್ನನ್ನು ತಾನೇ ಕಿಡ್ನ್ಯಾಪ್ (boy Kidnap) ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ (uttar pradesh) ನಡೆದಿದೆ. ಈತ ಹೀಗೆ ಮಾಡಲು ಕಾರಣ ಏನು ಗೊತ್ತಾ? ನೀವೂ ಶಾಕ್ ಆಗೋದು ಖಂಡಿತ!!!.

ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ (government school) ಓದುತ್ತಿರುವ 9ನೇ ತರಗತಿಯ ವಿದ್ಯಾರ್ಥಿಯೊಬ್ಬ (student) ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಂಡಿದ್ದಾನೆ. ಕಾರಣ ಏನು ಗೊತ್ತಾ? ಬಾಲಕನಿಗೆ ಐಫೋನ್ (iphone) ಕೊಳ್ಳುವ ಆಸೆಯಾಗಿದೆ. ಹಾಗಾಗಿ ತಂದೆಯ (father) ಬಳಿ ಬಂದು ತನ್ನ ಬೇಡಿಕೆ ಹೇಳಿಕೊಂಡಿದ್ದಾನೆ. ಬಾಲಕನಿಗೆ ತಾಯಿಯಿಲ್ಲ. ಆತ ಒಂದು ವರ್ಷದವನಾಗಿದ್ದಾಗ ಅವನ ತಾಯಿ (mother) ತೀರಿಕೊಂಡಿದ್ದರು. ಹಾಗಾಗಿ ತಂದೆಯೊಂದಿಗೆ ವಾಸವಿದ್ದ. ಬಾಲಕನ ತಂದೆ ಸಣ್ಣ ಗಾರ್ಮೆಂಟ್ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಅಷ್ಟೊಂದು ಹಣವಿಲ್ಲದ ಕಾರಣ ಆತ ಮಗನ ಆಸೆಗೆ ನಿರಾಕರಿಸಿದ್ದಾರೆ. ದುಬಾರಿ ಬೆಲೆಯ ಐಫೋನ್ ಕೊಳ್ಳುವ ತನ್ನ ಆಸೆ, ಕನಸು ಚೂರಾದಾಗ ಬಾಲಕ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಂಡಿದ್ದಾನೆ.

ತಂದೆಯಿಂದ ಹೇಗಾದರೂ ಹಣ (money) ಪಡೆಯಲೇಬೇಕು. ಐಫೋನ್ ಖರೀದಿಸಲೇಬೇಕು ಎಂಬ ಕಾರಣಕ್ಕೆ ಆತ ಕಿಡ್ನ್ಯಾಪ್ ಯೋಜನೆ ಹೂಡಿದ್ದಾನೆ. ಅಂದು ಬಾಲಕ ಬುಧವಾರ ಶಾಲೆ ಮುಗಿಸಿ ಮನೆಗೆ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಆತನ ತಂದೆ ಮತ್ತು ಇತರ ಸಂಬಂಧಿಕರು ಅವನನ್ನು ಹುಡುಕಲು ಶುರು ಮಾಡಿದ್ದಾರೆ.

ಈ ವೇಳೆ ಬಾಲಕ ಸ್ನೇಹಿತನ ಫೋನ್ (smartphone) ಬಳಸಿಕೊಂಡು ತಂದೆಗೆ 5 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾನೆ. ವಾಟ್ಸಪ್ ನಲ್ಲಿ 5 ಲಕ್ಷ ರೂಪಾಯಿ ಸುಲಿಗೆ ಕರೆ ಕಳುಹಿಸಿದ್ದಾನೆ. ಇಷ್ಟು ಹಣ ನೀಡಿದರೆ ಮಾತ್ರ ಮಗನನ್ನು ಕಳುಹಿಸುವುದಾಗಿ ಕರೆಯಲ್ಲಿ ಹೇಳಲಾಗಿತ್ತು. ಈ ಹಣವನ್ನು ಖೈರಾಬಾದ್‌ನಲ್ಲಿ ಮಸೀದಿ ಬಳಿ ತಲುಪಿಸಬೇಕು ಎಂದಿತ್ತು. ಇದರಿಂದ ತಂದೆ ಭಯಭೀತರಾಗಿ ಮಗನನ್ನು ಪತ್ತೆಹಚ್ಚಲು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು, ಸೈಬರ್ ಮತ್ತು ಎಸ್‌ಒಜಿ ತಂಡಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾರೆ. ಪೊಲೀಸ್ ತನಿಖೆಯ ವೇಳೆ ಬಾಲಕ ಕರೆ ಮಾಡಿದ ಮೊಬೈಲ್ ಫೋನ್ ನ ಸ್ಥಳ ಪತ್ತೆ ಹಚ್ಚಿದ್ದಾರೆ. ಆಗ ಕರೆ ಬಂದಿರುವ ಸ್ಥಳ ಬಾಲಕನ ಸ್ನೇಹಿತನ ಮನೆಯಿಂದ ಎಂದು ತಿಳಿದುಬಂದಿದೆ. ಇನ್ನೂ ತನಿಖೆ ಮುಂದುವರೆಸಿದಂತೆ ಪೊಲೀಸರಿಗೆ ಬಾಲಕನ ಬಗ್ಗೆ ಪೂರ್ಣ ಮಾಹಿತಿ ತಿಳಿದಿದ್ದು, ಬಳಿಕ ಆತನನ್ನು ಪತ್ತೆಹಚ್ಚಿ, ಕೌನ್ಸೆಲಿಂಗ್ ನಡೆಸಿದಾಗ ಬಾಲಕನೇ (boy) ಅಪಹರಣದ ಯೋಜನೆ ರೂಪಿಸಿದ್ದು, ತಿಳಿದುಬಂದಿದೆ. ನಂತರ ಬಾಲಕನನ್ನು ಅವನ ತಂದೆಗೆ ಒಪ್ಪಿಸಲಾಯಿತು ಎಂದು ಸೀತಾಪುರ್ ಕೊತ್ವಾಲಿ ಎಸ್‌ಎಚ್‌ಒ ಟಿ.ಪಿ. ಸಿಂಗ್ ಹೇಳಿದರು.

ಇದನ್ನೂ ಓದಿ :Woman with beard: ಮಹಿಳೆಗೆ ಮುಖದ ಮೇಲೆ ಮೀಸೆ, ಗಡ್ಡ ; ಇದನ್ನು ನೋಡಿ ಗಂಡ ಡಿವೋರ್ಸ್ ಕೊಟ್ಟೇ ಬಿಟ್ಟ!! ಮುಂದೆ ಆಕೆ ಏನು ಮಾಡಿದ್ಲು ಗೊತ್ತಾ?

You may also like

Leave a Comment