Chikkanna earning per day: ಒಂದು ಕಾಲದಲ್ಲಿ ಗಾರೆ ಕೆಲಸಕ್ಕೆ ಹೋಗುತ್ತಿದ್ದ, ಅಲ್ಲಿ ಇಲ್ಲಿ ಅವರಿವರ ಮನೆಗಳಲ್ಲಿ ಸಾರಣೆ ಕೆಲಸ ಮಾಡಿ ಬದುಕುತ್ತಿದ್ದ ಚಿಕ್ಕಣ್ಣ(Chikkanna) ಇಂದು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಕಾಮಿಡಿ ನಟ. ಆತ ಸಹ ಕಲಾವಿದ ಮಾತ್ರವಲ್ಲದೆ ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. ಸಣ್ಣ ಓದು ಓದಿಕೊಂಡು ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ದೊಡ್ಡದಾಗಿ ಕನಸು ಕಾಣುತ್ತಿರುವ ಹುಡುಗರಿಗೆ ಗಾರೆ ಚಿಕ್ಕಣ್ಣ ಒಂದು ದೊಡ್ಡ ಸ್ಪೂರ್ತಿ.
ಈ ಚಿಕ್ಕಣ್ಣ(Chikkanna) ಒಂದು ಕಾಲದಲ್ಲಿ ದಿನಕ್ಕೆ 200 ರೂಪಾಯಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಆದರೆ ಈಗ ಆತ ಒಂದು ದಿನಕ್ಕೆ ಪಡೆಯುವಂತಹ ಸಂಭಾವನೆ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಆಶ್ಚರ್ಯ ತರುವಂತಿದೆ. ದಿನವೊಂದಕ್ಕೆ ಚಿಕ್ಕಣ್ಣ ದೊಡ್ದ ಮೊತ್ತದ ದುಡ್ಡು ದುಡಿಯುತ್ತಿದ್ದಾರೆ. ಆತ ಒಟ್ಟಾರೆ ಪಡೆಯುವಂತಹ ಸಂಭಾವನೆ ಯಾವ ಸ್ಟಾರ್ ನಟನಿಗೂ ಕೂಡ ಕಡಿಮೆ ಇಲ್ಲದಂತಿದೆ. ಅಷ್ಟಕ್ಕೂ ಚಿಕ್ಕಣ್ಣ ದಿನವೊಂದಕ್ಕೆ ಪಡೆಯುವಂತಹ ಸಂಭಾವನೆ ಎಷ್ಟು (Chikkanna earning per day) ಎನ್ನುವುದನ್ನು ತಿಳಿಯೋಣ ಬನ್ನಿ.
ಕಿರಾತಕ, ರಾಜಹುಲಿ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಾಮಿಡಿ ಕಲಾವಿದನಾಗಿ ರೂಪುಗೊಂಡ ಚಿಕ್ಕಣ್ಣ ಬರ ಬರುತ್ತಾ ಪ್ರಭುದ್ದ ನಟನಾಗಿ ರೂಪುಗೊಳ್ಳುತ್ತಿದ್ದಾರೆ. ಆತ ಇಂದು ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕಾಮಿಡಿ ನಟ. ಆತ ಸಾಕಷ್ಟು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಂತ ಪ್ರತಿಭೆ, ಅವಿರತ ಪರಿಶ್ರಮ ಮತ್ತು, ‘ ತಾನೊಬ್ಬ ಹೆಚ್ಚು ಓದಿಲ್ಲದ, ಗಾರೆ ಕೆಲಸದವನು, ನನ್ನಿಂದ ಏನಾದೀತು ಎಂದು ಕೀಳರಿಮೆ ಬೆಳೆಸಿಕೊಂಡು ಮನೆಯಲ್ಲಿ ಕೂರದೆ ಮುನ್ನುಗ್ಗಿ ಗೆದ್ದ ಯುವಕ ಚಿಕ್ಕಣ್ಣ. ಆತ ಈಗ ಜನಪ್ರಿಯ ಕಾಮಿಡಿ ನಟನಾಗಿ ಸಾಧಿಸಿ ತೋರಿಸಿದ್ದಾನೆ ಮತ್ತು ಸಿನಿಮಾ ಒಂದಕ್ಕೆ ಲಕ್ಷಾಂತರ ದುಡ್ಡು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ವ್ಯಕ್ತಿಯೊಬ್ಬ ಗಳಿಸುವ ದುಡ್ಡಿನ ಮೊತ್ತವು ಕೂಡ ಆತನ ಸಾಧನೆಯನ್ನು ಅಳೆಯಲು ಸಾಧನ ಆಗುತ್ತದೆ ಅಲ್ಲವೇ ?
ಹೌದು, ಒಂದು ದಿನದ ಚಿತ್ರೀಕರಣಕ್ಕಾಗಿ ಚಿಕ್ಕಣ್ಣ ಎರಡರಿಂದ ಎರಡುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದಾಗಿ ಸುದ್ದಿ ಇದೆ. ಹಾಸ್ಯ ಕಲಾವಿದನಾಗಿ ಮಾತ್ರವಲ್ಲದೆ ಈಗಾಗಲೇ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಕೂಡ ಭಡ್ತಿಯನ್ನು ಹೊಂದಿರುವ ಚಿಕ್ಕಣ್ಣ(Chikkanna) ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯತೆ ಹಾಗೂ ಬೇಡಿಕೆಯನ್ನು ಸಂಪಾದಿಸುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ : ಅಭಿಷೇಕ್ – ಐಶ್ವರ್ಯ ಮೊದಲ ರಾತ್ರಿ ಮಂಚ ಮುರಿದಿತ್ತಂತೆ.!
