Home » Kota Srinivasa rao death rumor : ನಾನು ಸತ್ತಿಲ್ಲ, ಇನ್ನೂ ಬದುಕಿದ್ದೇನೆ- ಖ್ಯಾತ ಖಳನಟ ಯಾಕೆ ಹೀಗೆ ಹೇಳಿದ್ದು? ಏನಿದು ವಿಷಯ?

Kota Srinivasa rao death rumor : ನಾನು ಸತ್ತಿಲ್ಲ, ಇನ್ನೂ ಬದುಕಿದ್ದೇನೆ- ಖ್ಯಾತ ಖಳನಟ ಯಾಕೆ ಹೀಗೆ ಹೇಳಿದ್ದು? ಏನಿದು ವಿಷಯ?

0 comments
Kota Srinivasa rao death rumor

Kota Srinivasa rao death rumor: ಇತ್ತೀಚಿಗೆ ಬಿಡುಗಡೆಯಾದ ʼಕಬ್ಜʼ ಚಿತ್ರದಲ್ಲಿ ನಟಿಸಿ, ತಮ್ಮ ಪಾತ್ರಕ್ಕಾಗಿ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದ, ತೆಲುಗು ಚಿತ್ರರಂಗದ ಖ್ಯಾತ ಪೋಷಕ ನಟ ಕೋಟ ಶ್ರೀನಿವಾಸ ರಾವ್‌ ನಿಧನರಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದ (social media ) ಮೂಲಕ ಎಲ್ಲೆಡೆ ಹರಡಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಸ್ವತಃ ಶ್ರೀನಿವಾಸ ರಾವ್‌ ಅವರೇ ವಿಡಿಯೊವೊಂದನ್ನು ಬಿಡುಗಡೆ ಮಾಡುವ ಮೂಲಕ ಈ ಗಾಸಿಪ್ ವಿಷಯಕ್ಕೆ ತೆರೆ ಎಳೆದಿದ್ದಾರೆ.

ಕೋಟ ಶ್ರೀನಿವಾಸ ರಾವ್‌ (Kota Srinivasa rao death rumor) ತಮ್ಮ ಸಾವಿನ ಸುದ್ದಿ ಕೇಳಿ ನಕ್ಕಿದ್ದಾರೆ. ಅಲ್ಲದೇ ʼನನಗೆ ಏನೂ ಆಗಿಲ್ಲ, ನಾನು ಆರಾಮವಾಗಿದ್ದೇನೆʼ ಎಂದು ವಿಡಿಯೊದಲ್ಲಿ ಹೇಳುವ ಮೂಲಕ ತಮ್ಮ ಸಾವಿನ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ (video ) ʼಎಲ್ಲರಿಗೂ ನಮಸ್ಕಾರ, ಮೊದಲಿಗೆ ನಿಮಗೆಲ್ಲರಿಗೂ ನನ್ನ ಕಡೆಯಿಂದ ಯುಗಾದಿ ಹಬ್ಬದ ಶುಭಾಶಯಗಳು. ನಾನು ಆರಾಮಾಗಿದ್ದೇನೆ, ನನ್ನ ಆರೋಗ್ಯಕ್ಕೆ ಏನು ಸಮಸ್ಯೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ನಾನು ಈ ವಿಡಿಯೊವನ್ನು ಮಾಡುತ್ತಿದ್ದೇನೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಾನು ಸತ್ತಿದ್ದೇನೆ ಎಂಬ ಸುದ್ದಿಯನ್ನು ಹರಡುತ್ತಿದ್ದಾರೆ. ನನಗೆ ಈ ವಿಷಯದ ಬಗ್ಗೆ ಅರಿವೇ ಇರಲಿಲ್ಲ ಎಂದಿದ್ದಾರೆ.

ತಮ್ಮ ವಿಡಿಯೊದಲ್ಲಿ ಇಂತಹ ಅಸಂಬದ್ಧ ಸುದ್ದಿಗಳನ್ನು ಹರಡುವ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ʼಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಯಾರೊಬ್ಬರ ಜೀವನದಲ್ಲೂ ಆಟವಾಡಬೇಡಿʼ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸುದ್ದಿಯಿಂದಾಗಿ ಪೊಲೀಸರು ನಮ್ಮ ಮನೆಯ ಮುಂದೆ ಭದ್ರತೆ ನೀಡುವ ಸಲುವಾಗಿ ಬಂದಿದ್ದರು ಎಂಬ ವಿಷಯವನ್ನೂ ವಿಡಿಯೊದಲ್ಲಿ ತಿಳಿಸಿದ್ದಾರೆ.

ಕೋಟ ಶ್ರೀನಿವಾಸ ರಾವ್‌ ತೆಲುಗು ಸಿನಿಮಾಗಳ ಮೂಲಕ ಖ್ಯಾತಿ ಪಡೆದು, ನಂತರ ಕನ್ನಡ, ತಮಿಳು, ಹಿಂದಿ, ಮಲೆಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. 1978ರ ತೆಲುಗಿನ ʼಪ್ರಾಣಂ ಕಾರೀಡುʼ ಸಿನಿಮಾದ ಮೂಲಕ ಇವರು ನಟನೆಯ ಪಯಣ ಆರಂಭಿಸುತ್ತಾರೆ. 2015ರಲ್ಲಿ ಈ ನಟ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ.

You may also like

Leave a Comment