Indian railway : ಈಗಾಗಲೇ ರೈಲ್ವೆ ಪ್ರಯಾಣದಲ್ಲಿ ಹಲವಾರು ಸುಧಾರಣೆಗಳಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯು (indian Railway) ನಿಯಮಗಳನ್ನು ತರುತ್ತಿದೆ. ಇದೀಗ ಮತ್ತೊಂದು ಹೊಸ ನಿಯಮ ಜಾರಿಯಾಗಿದ್ದು ರೈಲು ಪ್ರಯಾಣಿಕರಿಗೆ ಸಂತೋಷದ ವಿಷಯವಾಗಿದೆ. ಹೌದು, ಇಂದಿನಿಂದ ರೈಲಿನ ಎಸಿ ಕೋಚ್ ಟಿಕೆಟ್ ದರದಲ್ಲಿ ಕಡಿತವಾಗಲಿದೆ. ನೀವು ಇನ್ನು ಅಗ್ಗದ ದರದಲ್ಲಿ ಎಸಿ ತ್ರೀ ಎಕಾನಮಿ ಕೋಚ್‌ನಲ್ಲಿ (AC 3 Fare) ಪ್ರಯಾಣ ಮಾಡಬಹುದು.
ರೈಲ್ವೇ ಮಂಡಳಿಯು ಸುತ್ತೋಲೆ ಹೊರಡಿಸಿದ್ದು, ಎಸಿ ಕೋಚ್‌ಗಳ ದರದ ಬಗ್ಗೆ ಹಳೆಯ ಸಿಸ್ಟಮ್ ಅನ್ನು ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಹೊಸ ನಿಯಮದ ಜಾರಿಯಾದ ನಂತರ, ಎಸಿ 3 ಎಕಾನಮಿ ಕೋಚ್‌ನ ದರವು ಎಸಿ 3 ಕೋಚ್‌ಗಿಂತ ಕಡಿಮೆಯಾಗಿರಲಿದೆ. ಸದ್ಯ ಈ ನಿರ್ಧಾರವನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಕೂಡಾ ಇದರ ಪ್ರಯೋಜನವನ್ನು ಪಡೆಯಬಹುದು. ಆನ್‌ಲೈನ್ ಮತ್ತು ಕೌಂಟರ್‌ನಲ್ಲಿ ಟಿಕೆಟ್ ತೆಗೆದುಕೊಂಡ ಪ್ರಯಾಣಿಕರಿಗೆ ರೈಲ್ವೆಯಿಂದ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
ಮೊದಲು ಎಕಾನಮಿ ಕೋಚ್‌ಗಳಲ್ಲಿ ಬೆಡ್ ಶೀಟ್ ಬೆಡ್ ಸ್ಪ್ರೆಡ್ ಗಳನ್ನು ನೀಡುತ್ತಿರಲಿಲ್ಲ. ಆದರೆ, ಕಳೆದ ವರ್ಷದಿಂದ ಈ ಸೌಲಭ್ಯ ಸಿಗುತ್ತಿದ್ದು, ಇದೀಗ ಮಾರ್ಚ್ 21 ರಂದು ಸುತ್ತೋಲೆ ಹೊರಡಿಸಿದ್ದು, ಈ ಮೂಲಕ ಹಳೆಯ ವ್ಯವಸ್ಥೆಯನ್ನು ಮರುಸ್ಥಾಪಿಸಲು ರೈಲ್ವೆ ನಿರ್ಧರಿಸಿದೆ.
AC 3 ಎಕಾನಮಿ ಕೋಚ್ ಅನ್ನು ರೈಲ್ವೇಯು AC ಕೋಚ್‌ನಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗಾಗಿ ಪ್ರಾರಂಭಿಸಿದೆ. ಸದ್ಯ
AC 3 ಕೋಚ್‌ನಲ್ಲಿನ ಸೀಟುಗಳ ಸಂಖ್ಯೆ 72 ಆಗಿದ್ದರೆ, AC 3 ಎಕಾನಮಿ ಕೋಚ್‌ನಲ್ಲಿನ ಬರ್ತ್‌ಗಳ ಸಂಖ್ಯೆ ಆಗಿರುತ್ತದೆ. ಎಸಿ 3 ಎಕಾನಮಿ ಕೋಚ್‌ನ ಬರ್ತ್ ಎಸಿ 3 ಕೋಚ್‌ಗಿಂತ ಚಿಕ್ಕದಾಗರುತ್ತದೆ. AC 3 ಎಕಾನಮಿ ಕೋಚ್‌ನ ಟಿಕೆಟ್ ದರ ಆರಂಭದಲ್ಲಿ AC 3 ಗಿಂತ ಕಡಿಮೆಯಿತ್ತು. ನಂತರ ಇದನ್ನು ಎಸಿ 3 ಕೋಚ್ ನಷ್ಟೇ ಆಗಿದ್ದು, ಇದೀಗ ಮತ್ತೆ ಎಸಿ 3 ಎಕಾನಮಿ ಕೋಚ್‌ನ ದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
