Home » Hanging Death Penalty : ನೇಣುಬಿಗಿದು ಮರಣದಂಡನೆ ವಿಧಿಸುವ ಕುರಿತು ಸುಪ್ರೀಂಕೋರ್ಟ್ ಹೇಳಿದ್ದೇನು?

Hanging Death Penalty : ನೇಣುಬಿಗಿದು ಮರಣದಂಡನೆ ವಿಧಿಸುವ ಕುರಿತು ಸುಪ್ರೀಂಕೋರ್ಟ್ ಹೇಳಿದ್ದೇನು?

1 comment
Hanging Death Penalty

Hanging Death Penalty: ಕೊಲೆ (murder), ಅತ್ಯಾಚಾರ (rape) ಮಾಡಿದಂತಹ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸುತ್ತದೆ. ಸದ್ಯ ಅಪರಾಧಿಗಳಿಗೆ ಮರಣದಂಡನೆ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿಕೆ ನೀಡಿದೆ. ಸುಪ್ರೀಂಕೋರ್ಟ್ ನೇಣುಬಿಗಿದು ಮರಣದಂಡನೆ ವಿಧಿಸುವ (Hanging Death Penalty) ಕುರಿತು ಹೇಳಿದ್ದೇನು?

ಸದ್ಯ ನೇಣುಬಿಗಿದು ಮರಣದಂಡನೆ ವಿಧಿಸುವ ಕುರಿತು ಸುಪ್ರೀಂಕೋರ್ಟ್, ʻಮಾನವ ಘನತೆಗೆ ಹೆಚ್ಚು ಆದ್ಯತೆʼ ನೀಡುವಂತಹ, ಕಡಿಮೆ ನೋವು ಕೊಡುವಂತಹ ವಿಭಿನ್ನ ವೈಜ್ಞಾನಿಕ ಮರಣದಂಡನೆ ವಿಧಾನಗಳು ಇದ್ದರೆ, ನೇಣುಬಿಗಿದು ಮರಣದಂಡನೆ ವಿಧಿಸುವುದು ಅಸಾಂವಿಧಾನಿಕ ಎಂದು ಘೋಷಿಸಬಹುದು ಎಂದು ಮಂಗಳವಾರ ಹೇಳಿದೆ. ಹಾಗೆಯೇ ಈ ಬಗ್ಗೆ ಚರ್ಚಿಸಲು, ಕಳೆದ ನಾಲ್ಕು ದಶಕಗಳಲ್ಲಿ ಜಾರಿಗೊಳಿಸಲಾದ ಮರಣದಂಡನೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ (supreme court) ಸೂಚಿಸಿದೆ.

ವ್ಯಕ್ತಿಗೆ ಮರಣದಂಡನೆ ವಿಧಿಸುವುದಕ್ಕೆ ನೇಣುಬಿಗಿಯುವ ಕ್ರಮ ಕಡಿಮೆ ನೋವು ನೀಡುವಂತದ್ದು, ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಸಾಬೀತುಪಡಿಸಲು ಸಾಕ್ಷಿ, ಆಧಾರಗಳಿದ್ದರೆ ಅದನ್ನು ಪರಿಶೀಲಿಸಲು ನ್ಯಾಯಾಲಯ ಸಿದ್ಧವಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠವು ಹೇಳಿದೆ.

“ಮಾನವ ಘನತೆಗೆ ಹೆಚ್ಚು ಹೊಂದಿಕೆಯಾಗುವ ಪರ್ಯಾಯ ವಿಧಾನವಿದ್ದರೆ ಅದನ್ನು ಪರಿಗಣಿಸುತ್ತೇವೆ. ಅದು ನೇಣು ಹಾಕುವ ಮೂಲಕ ಸಾವನ್ನು ಸಂವಿಧಾನಬಾಹಿರವಾಗಿ ಮಾಡುತ್ತದೆ. ಹಾಗೆಯೇ, ಈ ವಿಧಾನವು ಕಾರ್ಯವಿಧಾನ ಮತ್ತು ವಿಧಾನದಲ್ಲಿ ಪ್ರಮಾಣಾನುಗುಣ ಪರೀಕ್ಷೆಯನ್ನು ಹಾದುಹೋಗುತ್ತದೆಯಾ? ಎಂದು ನಾವು ಗಮನಿಸುತ್ತೇವೆ, “ಎಂದು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನು ಒಳಗೊಂಡ ಪೀಠವು ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರಿಗೆ ಹೇಳಿತು.

ನ್ಯಾಯಪೀಠವು, ಅಸ್ತಿತ್ವದಲ್ಲಿರುವ ನೇಣುಬಿಗಿದು ಮರಣದಂಡನೆ ವಿಧಿಸುವ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಿ ಖಚಿತಪಡಿಸುವುದನ್ನು ಉದ್ಧೇಶವೆಂದು ಪರಿಗಣಿಸಬೇಕು ಎಂದು ಹೇಳಿದೆ. ಹಾಗೆಯೇ ತೀವ್ರ ಕ್ರೌರ್ಯ, ಅವಮಾನದಿಂದ ವರ್ತಿಸಿದ, ಪೂರ್ವಯೋಜಿತ ಅಥವಾ ಸಾಮಾಜಿಕವಾಗಿ ಅಸಹ್ಯಕರ ಕೃತ್ಯವೆಸಗಿದ ಅಪರಾಧಿಗಳಿಗೆ ಮಾತ್ರ ಮರಣದಂಡನೆಯನ್ನು ನೀಡಲಾಗುತ್ತದೆ ಎಂದು ಕೇಂದ್ರದ ಅಫಿಡವಿಟ್ ಹೇಳಿದೆ.

You may also like

Leave a Comment