Home » S.Angara : ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರ : ಎಸ್.ಅಂಗಾರ ಹೇಳಿಕೆ

S.Angara : ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರ : ಎಸ್.ಅಂಗಾರ ಹೇಳಿಕೆ

by Praveen Chennavara
0 comments
S.Angara

S Angara : ದಕ್ಷಿಣ ಕನ್ನಡ‌: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವ ವಿಚಾರವನ್ನು ಪಕ್ಷ ನಿರ್ಧರಿಸುತ್ತದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ (S Angara ) ಹೇಳಿದ್ದಾರೆ.

ಅವರು ಕಡಬದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಇನ್ನೂ ಮಾಡಿರುವುದಿಲ್ಲ. ಆ ಬಗ್ಗೆ ಗೊಂದವಿಲ್ಲ. ಅಷ್ಟಕ್ಕೂ ನಾನು ಯಾವತ್ತೂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದವನಲ್ಲ. ಈವರೆಗೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬಂದಿರುವ ತೃಪ್ತಿ ನನಗಿದೆ.

ಕ್ಷೇತ್ರದ ಜನತೆ ಹಾಗೂ ಪಕ್ಷಕ್ಕೆ ಧಕ್ಕೆ ಬರುವ ರೀತಿಯಲ್ಲಿ ಯಾವತ್ತೂ ವರ್ತಿಸಿಲ್ಲ. ಈವರೆಗೆ ಕ್ಷೇತ್ರದ ಸೇವೆ ಮಾಡಲು ಪಕ್ಷ ಅವಕಾಶ ಕಲ್ಪಿಸಿಕೊಟ್ಟಿದೆ. ಜನರ ಆಶೀರ್ವಾದದಿಂದ ಬಿಜೆಪಿಗೆ ನಿರಂತರ ಗೆಲುವು ಸಾಧ್ಯವಾಗಿದೆ. ನಾನು ಸ್ಪರ್ಧಿಸುವುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರವೇ ಅಂತಿಮ ಎಂದರು.

You may also like

Leave a Comment