Home » ಮಾಜಿ ವಸತಿ ಸಚಿವ ಅಂಜನಮೂರ್ತಿ ಹೃದಯಾಘಾತದಿಂದ ನಿಧನ

ಮಾಜಿ ವಸತಿ ಸಚಿವ ಅಂಜನಮೂರ್ತಿ ಹೃದಯಾಘಾತದಿಂದ ನಿಧನ

by Praveen Chennavara
513 comments
Anjanamurthy

Anjanamurthy : ಬೆಂಗಳೂರು: ಮಾಜಿ ಸಚಿವ ಅಂಜನ ಮೂರ್ತಿ (72 ವ.)(Anjanmurthy) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಇಂದಿರಾನಗರದಲ್ಲಿ ಅಂಜನ ಮೂರ್ತಿ ಅವರು ವಾಸವಾಗಿದ್ದರು. ಎರಡು ದಿನಗಳ ಹಿಂದೆ ಅಂಜನಮೂರ್ತಿ ಅವರನ್ನು ಮಲ್ಲೇಶ್ವರಂ‌ನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಅವರಿಗೆ ಹೃದಯಾಘಾತದಿಂದ ನಿಧನರಾದರು.

ಅಂಜನ ಮೂರ್ತಿ ಅವರು ವಸತಿ ಸಚಿವ, ಉಪ ಸಭಾಪತಿಯಾಗಿ ಕರ್ತವ್ಯ ಸಲ್ಲಿಸಿದ್ದರು. 10ನೇ ಏಪ್ರಿಲ್ 1941ರಂದು ಜನಿಸಿದ್ದ ಅಂಜನಮೂರ್ತಿ ಅವರು ಮೂರು ಬಾರಿ ಶಾಸಕರಾಗಿಗಿದ್ದರು.

ಫೆಬ್ರವರಿ 1993 ರಿಂದ ಡಿಸೆಂಬರ್ 1994ರವರೆಗೆ ವಿಧಾನಸಭಾ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. 2003 ರಿಂದ 2004 ಎಸ್​​ಸಿ ಮತ್ತು ಎಸ್​ಟಿ ಆಯೋಗದ ಮುಖ್ಯಸ್ಥರಾಗಿದ್ದ ಅವರು 2005 ರಿಂದ 2006 ಅವಧಿಯಲ್ಲಿ ವಸತಿ ಸಚಿವರಾಗಿದ್ದರು.

You may also like

Leave a Comment