Home » Vinayakan: ‘ನಾನು 10 ಮಹಿಳೆಯರ ಜತೆ ಮಲಗಿದ್ದೆ, ಪರಿಚಯ ಆದವರನ್ನೆಲ್ಲಾ ಮಂಚಕ್ಕೆ ಕರೀತಿನಿ’ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

Vinayakan: ‘ನಾನು 10 ಮಹಿಳೆಯರ ಜತೆ ಮಲಗಿದ್ದೆ, ಪರಿಚಯ ಆದವರನ್ನೆಲ್ಲಾ ಮಂಚಕ್ಕೆ ಕರೀತಿನಿ’ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

by ಹೊಸಕನ್ನಡ
1 comment
Vinayakan

Vinayakan: ಕಳೆದ ವರ್ಷ ಚಿತ್ರವೊಂದರ ಪ್ರಚಾರದ ವೇಳೆ ‘ನಾನು ನನ್ನ ಬಳಿ ಬರುವ ಮಹಿಳೆಯರನ್ನು ಮಂಚಕ್ಕೆ ಕರಿತೀನಿ, ನೇರವಾಗೇ ಲೈಂಗಿಕ ಕ್ರಿಯೆಯ ಬಗ್ಗೆ ಕೇಳ್ತೀನಿ ಅಂತ ಖ್ಯಾತ ನಟಿ ನವ್ಯಾ ನಾಯರ್​(Navya Nayar) ಮುಂದೆಯೇ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿ ಮಾಡಿದ್ದ ಮಲಯಾಳಂ(Malayalam) ಖ್ಯಾತ ನಟ ವಿನಾಯಕನ್​(Vinayakan) ವೈವಾಹಿಕ ಬಾಳಲ್ಲೀಗ ಬಿರುಗಾಳಿ ಎಬ್ಬಿದೆ.

ಹೌದು, ತನ್ನ ಪತ್ನಿಯ ಜೊತೆಗಿದ್ದ ಎಲ್ಲ ಸಂಬಂಧವನ್ನು ಕಡಿದುಕೊಂಡಿದ್ದಾಗಿ ವಿನಾಯಕನ್​ ಶುಕ್ರವಾರ ಅಧಿಕೃತವಾಗಿ ತಿಳಿಸಿದ್ದಾರೆ. “ನಾನು ಮಲಯಾಳಂ ಸಿನಿಮಾ ನಟ ವಿನಾಯಕನ್. ನನ್ನ ಮತ್ತು ನನ್ನ ಹೆಂಡತಿಯ ನಡುವಿನ ಎಲ್ಲಾ ವೈವಾಹಿಕ ಸಂಬಂಧಗಳು ಮತ್ತು ಕಾನೂನು ಸಂಬಂಧಗಳು ಇಂದಿನಿಂದ ಹಾಗೂ ಈ ಕ್ಷಣದಲ್ಲಿ ಕೊನೆಯಾಗುತ್ತವೆ. ಎಲ್ಲರಿಗೂ ಧನ್ಯವಾದಗಳು” ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ಏನು ಇದು ಪ್ರಕರಣ ಎಂದು ನೋಡುವುದಾದರೆ ಕಳೆದ ವರ್ಷ ನಟಿ ನವ್ಯಾ ನಾಯರ್​ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡಿದ್ದರು. ಈ ವೇಳೆ ವಿ.ಕೆ. ಪ್ರಕಾಶ್​(V K Prakash) ನಿರ್ದೇಶನದ ‘ಒರುಥಿ’ ಚಿತ್ರದ ಪ್ರಚಾರದ ವೇಳೆ ವಿನಾಯಕನ್​ ವಿವಾದವನ್ನು “ಮಹಿಳೆಯರಲ್ಲಿ ಲೈಂಗಿಕತೆ, ದೈಹಿಕ ಸಂಬಂಧದ ಕುರಿತು ಕೇಳುವುದು ‘ಮೀ ಟೂ’ ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ. ಇದನ್ನು ನಾನು ಹೀಗೆ ಅರ್ಥಮಾಡಿಕೊಂಡಿದ್ದೇನೆ” ಎಂದು ಹೇಳುವುದರ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಲ್ಲದೆ “ನಾನು ಈಗಾಗಲೇ 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನಗೆ ಪರಿಚಿತರಾದ ಮಹಿಳೆಯರಿಗೆಲ್ಲಾ ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ” ಎಂದು ಹೇಳಿ ಮೂಲಕ ತಮ್ಮ ಮಾತನ್ನು ಮುಗಿಸಿದರು.

ವಿನಾಯಕನ್​ ಹೇಳಿದ ಮಾತು ಮಲಯಾಳಂ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿತ್ತು. ಈ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್​ ಕೂಡ ವೇದಿಕೆ ಮೇಲೆಯೇ ಇದ್ದರು. ಈ ವೇಳೆ ಅವರು ವಿನಾಯಕನ್​ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೆ ಗುರಿಯಾದರು. ಆ ಕ್ಷಣದಲ್ಲಿ ನಾನೇನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು ಆದರೆ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರು.

ಅಂದಹಾಗೆ ವಿನಾಯಕನ್​ ಅವರು ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ವಿನಾಯಕನ್​ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.

You may also like

Leave a Comment