Home » Head bath : ತಲೆ ಸ್ನಾನದ ಬಳಿಕ ಟವಲ್ ನಿಂದ ಸುತ್ತಿಕೊಳ್ಳುವ ಅಭ್ಯಾಸ ನಿಮಗಿದೆಯೇ? : ಇದರಿಂದಾಗೋ ದುಷ್ಪರಿಣಾಮಗಳು ಇಲ್ಲಿದೆ ನೋಡಿ

Head bath : ತಲೆ ಸ್ನಾನದ ಬಳಿಕ ಟವಲ್ ನಿಂದ ಸುತ್ತಿಕೊಳ್ಳುವ ಅಭ್ಯಾಸ ನಿಮಗಿದೆಯೇ? : ಇದರಿಂದಾಗೋ ದುಷ್ಪರಿಣಾಮಗಳು ಇಲ್ಲಿದೆ ನೋಡಿ

1 comment
Head bath

Head bath : ಸೌಂದರ್ಯ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೆ ಇದೆ. ಹಾಗಾಗಿ, ಸುಂದರವಾಗಿ ಕಾಣಲು ಬಯಸುತ್ತಾರೆ. ಇಂತಹ ಸೌಂದರ್ಯತೆಗೆ ಅಂದ ಕೊಡುವುದೇ ಕೂದಲು. ಹಾಗಾಗಿ ಕೂದಲಿನ ಆರೈಕೆ ಮಾಡದ ಜನರಿಲ್ಲ. ಆದ್ರೆ, ಸರಿಯಾದ ಕಾಳಜಿ ಮಾಡದೇ ಅದೆಷ್ಟೋ ಜನ ತಮ್ಮ ಕೇಶ ರಾಶಿಯ ಸೌಂದರ್ಯವನ್ನೇ ಕಳೆದುಕೊಳ್ಳುತ್ತಾರೆ.

ಹೌದು. ನಾವು ಮಾಡುವ ಒಂದೊಂದು ತಪ್ಪು ಕೂಡ ಕೂದಲನ್ನು ಹಾಳುಮಾಡುತ್ತದೆ. ಅಂತದರಲ್ಲಿ ತಲೆ(Head bath) ಸ್ನಾನದ ಬಳಿಕ ಟವೆಲ್ನಿಂದ ಸುತ್ತಿಕೊಳ್ಳುವುದು ಕೂಡ ಒಂದು. ಹೀಗೆ ಮಾಡುವುದರಿಂದ ಕೂದಲು ಬೇಗನೆ ಒಣಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಒದ್ದೆಯಾದ ಕೂದಲಿನ ಮೇಲೆ ಟವೆಲ್ ಅನ್ನು ಸುತ್ತುವುದರಿಂದ ಅನಾನುಕೂಲವೇ ಹೆಚ್ಚು ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ರೆ ಬನ್ನಿ ಇದರಿಂದ ಉಂಟಾಗುವ ಪರಿಣಾಮಗಳನ್ನು ತಿಳಿಯೋಣ.

*ಒದ್ದೆ ಕೂದಲಿಗೆ ಟವೆಲ್ ಸುತ್ತುವುದರಿಂದ ತಲೆ ದೀರ್ಘಕಾಲ ಒದ್ದೆಯಾಗಿರುತ್ತೆ ಮತ್ತು ಡ್ಯಾಂಡ್ರಫ್ ಸಮಸ್ಯೆಗೆ ಕಾರಣವಾಗಬಹುದು.
*ಕೂದಲು ತೊಳೆದ ನಂತರ ಟವೆಲ್​ನಲ್ಲಿ ಸುತ್ತುವುದರಿಂದ ತಲೆಬುರುಡೆಯಲ್ಲಿ ಫಂಗಲ್ ಸೋಂಕು ಉಂಟಾಗಿ ಕೂದಲಿಗೆ ಹಾನಿಕಾರಕ ಆಗುತ್ತದೆ.
*ಕೂದಲು ಉದುರುತ್ತಿರುವವರು ಒದ್ದೆ ಕೂದಲಿಗೆ ಟವೆಲ್ ಸುತ್ತಿಕೊಳ್ಳುವುದರಿಂದ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
*ಒದ್ದೆ ಕೂದಲಿನ ಮೇಲೆ ಟವೆಲ್ ಅನ್ನು ಬಿಗಿಯಾಗಿ ಕಟ್ಟುವುದರಿಂದ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತವೆ ಮತ್ತು ಕೂದಲು ಒಡೆಯುತ್ತದೆ.
*ಇದರಿಂದ ಕೂದಲು ಬೇಗ ಒಣಗುತ್ತದೆ ಮತ್ತು ಕೂದಲಿನ ನೈಸರ್ಗಿಕ ಹೊಳಪು ಹೋಗುತ್ತದೆ.

ಕೂದಲನ್ನು ಸೂರ್ಯನ ಬೆಳಕಿಗೆ ಒಣಗಿಸುವುದು ಉತ್ತಮ. ಕೂದಲನ್ನು ವಾರಕ್ಕೆ 2 ರಿಂದ 3 ಬಾರಿ ಮಾತ್ರ ಶಾಂಪೂವಿನಿಂದ ತೊಳಿಬೇಕು. ಅತಿಯಾದ ಶಾಂಪೂವಿನಿಂದ ತೊಳೆಯುವಿಕೆಯು ಉದ್ದನೆಯ ಕೂದಲನ್ನು ದುರ್ಬಲಗೊಳಿಸುತ್ತದೆ. ಕೂದಲು ಹೊಳೆಯುವಂತೆ ಮಾಡಲು ತೊಳೆಯುವ ಮೊದಲು ಎಣ್ಣೆಯಿಂದ ಮಸಾಜ್ ಮಾಡಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಇತರ ಕೂದಲಿನ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

You may also like

Leave a Comment