Home » Sullia Assembly Constituency : ಸುಳ್ಯ ವಿಧಾನಸಭಾ ಕ್ಷೇತ್ರ ಅಂಗಾರ ಹಠಾವೋ | ಬೇಡಿಕೆ ಮುಂದಿಟ್ಟ ಬಿಜೆಪಿಯ ಕೆಲ ನಾಯಕರು

Sullia Assembly Constituency : ಸುಳ್ಯ ವಿಧಾನಸಭಾ ಕ್ಷೇತ್ರ ಅಂಗಾರ ಹಠಾವೋ | ಬೇಡಿಕೆ ಮುಂದಿಟ್ಟ ಬಿಜೆಪಿಯ ಕೆಲ ನಾಯಕರು

0 comments
Sullia Assembly Constituency

Sullia Assembly Constituency : ಮಂಗಳೂರು : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರದಿಂದ(Sullia Assembly Constituency) ಹಾಲಿ ಸಚಿವರೂ ಆಗಿರುವ ಸುಳ್ಯದ ಸತತ ಆರನೇ ಬಾರಿಯ ಶಾಸಕ ಎಸ್.ಅಂಗಾರರಿಗೆ ಈ ಬಾರಿ ಮತ್ತೆ ಸ್ಪರ್ಧೆ ಮಾಡಲು ಬಿಜೆಪಿ ಯಿಂದ ಅವಕಾಶ ನೀಡಬಾರದೆಂದು ಬಿಜೆಪಿಯ ಹಲವು ಸ್ವಾಭಿಮಾನಿ ಹಾಗೂ ಸಮಾನ ಮನಸ್ಕ ನಾಯಕರು ಸಭೆ ಸೇರಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿಗೆ ಆರ್.ಎಸ್.ಎಸ್. ಕಚೇರಿಗೆ ಹೋಗಿ ಇಲ್ಲಿನ ಪರಿಸ್ಥಿತಿಯನ್ನು ಪರಿವಾರದ ವರಿಷ್ಠರಿಗೆ ವಿವರಿಸಲು ನಿರ್ಧರಿಸಿದ್ದಾರೆ.

ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಚರ್ಚಿಸಿದ ಬಿಜೆಪಿಯ ಕೆಲ ಮುಖಂಡರು ಅಗತ್ಯ ಬಿದ್ದರೆ ಬಹಿರಂಗ ಹೇಳಿಕೆ ನೀಡಲೂ ಸಿದ್ಧರಾಗಿರಬೇಕೆಂದು ಮಾತನಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಚುನಾವಣೆಯಲ್ಲಿ ಸಗಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗೆ ಗೆಲುವಿಗೆ ಬೇಕಾದಷಟ್ಟು ಮತಗಳು ಇದ್ದರೂ,ಅಡ್ಡಮತದಾನ ಮಾಡುವ ಮೂಲಕ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಈ ಪ್ರಕರಣದಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು,ಬಳಿಕ ರಾಜೀ ಸಂಧಾನದ ಮೂಲಕ ಪಕ್ಷಕ್ಕೆ ಸೇರಿಸಿ ಕೊಳ್ಳಲಾಗಿತ್ತು.ಈ ಪ್ರಕರಣದಲ್ಲಿ ಕಾನತ್ತೂರು ದೈವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿಸಿರುವುದು ಹಾಗೂ ಅಲ್ಲಿ ತಪ್ಪು ಕಾಣಿಕೆ ಹಾಕಿ ಪ್ರಕರಣ ಪೂರ್ಣ ಮುಕ್ತಾಯಗೊಳ್ಳಲು ಬಾಕಿ ಇರುವುದು ಈ ಎಲ್ಲಾ ಬೆಳವಣಿಗೆಗಳ ಹಿಂದೆ ಎಸ್.ಅಂಗಾರ ಅವರ ನಡೆ ಕೆಲ ನಾಯಕರಿಗೆ ಸಮಾಧಾನ ಕಂಡು ಬಂದಿರಲಿಲ್ಲವೆನ್ನಲಾಗಿದೆ.
ಈ ವಿಚಾರದಿಂದಲೇ ಎಸ್.ಅಂಗಾರ ಅವರ ಮೇಲೆ ಅಸಮಧಾನ ಇದೆ ಎನ್ನಲಾಗಿದೆ.

ಗುಪ್ತ ಸಭೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಎಸ್.ಎನ್.ಮನ್ಮಥ, ಎನ್.ಎ. ರಾಮಚಂದ್ರ, ಶೈಲೇಶ್ ಅಂಬೆಕಲ್ಲು, ಸಂತೋಷ್‌ ಕುತ್ತಮೊಟ್ಟೆ, ಸಂತೋಷ್ ಜಾಕೆ, ವಿಷ್ಣು ಭಟ್ ನೆಲ್ಲೂರು ಕೆಮ್ರಾಜೆ, ಕೃಪಾ ಶಂಕರ ತುದಿಯಡ್ಕ, ದಿನೇಶ್ ಅಡ್ಕಾರು, ಶಂಕರ ಪೆರಾಜೆ, ಕರುಣಾಕರ ಅಡ್ಡಂಗಾಯ, ಶಾಂತಾರಾಮ ಕಣಿಲೆಗುಂಡಿ, ಶೇಖರ ಮಡ್ತಿಲ,
ಕುಶಾಲಪ್ಪ ಗೌಡ ಪೆರುವಾಜೆ ಸೇರಿದಂತೆ ಸುಳ್ಯ ತಾಲೂಕಿನ 19 ಗ್ರಾಮಗಳಿಂದ, ಕಡಬ ಕಡೆಯ ಕೆಲವರೂ, ಕೆಲವು ಗ್ರಾ.ಪಂ. ಸದಸ್ಯರು ಗಳೂ, ಪಕ್ಷದ ಸ್ಥಾನೀಯ ಸಮಿತಿ ಪದಾಧಿಕಾರಿಗಳೂ ಪಾಲ್ಗೊಂಡಿದ್ದರೆನ್ನಲಾಗಿದೆ.

You may also like

Leave a Comment