Home » Sullia : ಕೈ ಪಾಳಯದಲ್ಲಿ ಮುಂದುವರಿದ ಅಸಮಾಧಾನ : ಮಾ.29ಕ್ಕೆ ನಂದ ಕುಮಾರ್ ಬೆಂಬಲಿಗರ ಮಂಗಳೂರು ಚಲೋ

Sullia : ಕೈ ಪಾಳಯದಲ್ಲಿ ಮುಂದುವರಿದ ಅಸಮಾಧಾನ : ಮಾ.29ಕ್ಕೆ ನಂದ ಕುಮಾರ್ ಬೆಂಬಲಿಗರ ಮಂಗಳೂರು ಚಲೋ

by Praveen Chennavara
0 comments
Mangalore Chalo

Mangalore Chalo :ದಕ್ಷಿಣಕನ್ನಡ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು,ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್‌ ಘೋಷಿಸಲಾಗಿದ್ದು,ಸುಳ್ಯ ಕ್ಷೇತ್ರಕ್ಕೆ ಕೆ.ಪಿ.ಸಿ.ಸಿ ಸಂಯೋಜಕ ಜಿ.ಕೃಷ್ಣಪ್ಪ ಅವರ ಹೆಸರು ಫೈನಲ್ ಮಾಡಲಾಗಿದೆ.

ಇದರಿಂದ ಕೆರಳಿರುವ ನಂದ‌ ಕುಮಾರ್ ಅವರ ಅಭಿಮಾನಿಗಳು ಈಗಾಗಲೇ ಸುಳ್ಯ ಹಾಗೂ ಕಡಬದಲ್ಲಿ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿ ,ಹೈಕಮಾಂಡ್ ವಿರುದ್ದ ಆಕ್ರೋಶ ಹೊರಹಾಕಿದ್ದರು.

ಇದರ ಮುಂದುವರಿದ ಭಾಗವಾಗಿ ಮಾ.29ಕ್ಕೆ ಮಂಗಳೂರು ಡಿಸಿಸಿ (ಜಿಲ್ಲಾ ಕಾಂಗ್ರೆಸ್ ಕಚೇರಿ )ಗೆ ಸುಳ್ಯ ಹಾಗೂ ಕಡಬ ಭಾಗದ ನಂದ ಕುಮಾರ್ ಅಭಿಮಾನಿಗಳು ಆಗಮಿಸಿ ಶಕ್ತಿ ಪ್ರದರ್ಶನ (Mangalore Chalo) ಮಾಡಲಿದ್ದಾರೆ.

You may also like

Leave a Comment