Home » Nayanathara: 16 ವರ್ಷಗಳ ರೂಲ್ಸ್ ಬ್ರೇಕ್ ಮಾಡಿ ‘ಬಿಕಿನಿ’ ತೊಟ್ಟ ನಯನಾತಾರ, ಯಾರಿಗಾಗಿ ಗೊತ್ತಾ?

Nayanathara: 16 ವರ್ಷಗಳ ರೂಲ್ಸ್ ಬ್ರೇಕ್ ಮಾಡಿ ‘ಬಿಕಿನಿ’ ತೊಟ್ಟ ನಯನಾತಾರ, ಯಾರಿಗಾಗಿ ಗೊತ್ತಾ?

by ಹೊಸಕನ್ನಡ
0 comments
Nayanathara

Nayanathara :ಟಾಲಿವುಡ್(Tollywood), ಕಾಲಿವುಡ್(Kollywood) ಹಾಗೂ ಸ್ಯಾಂಡಲ್​ವುಡ್(Sandalwood) ಸಿನಿಮಾಗಳಲ್ಲಿ ಅಭಿನಯಿಸಿ ಸೌತ್ ಲೇಡಿ ಸೂಪರ್ ಸ್ಟಾರ್ ಎನಿಸಿರುವ ನಯನತಾರಾ(Nayanathara) ಅಪಾರ ಅಭಿಮಾನಿ ಬಳಗಳನ್ನು ಹೊಂದಿದ್ದಾರೆ. ಸೌತ್ ಇಂಡಿಯಾ ಫಿಲಂ ಇಂಡಸ್ಟ್ರಿಯಲ್ಲಿ ದಶಕಗಳಿಂದ ಮಿಂಚಿತ್ತಿರುವ ನಟಿ ನಯನತಾರಾಗೆ ಭಾರೀ ಡಿಮ್ಯಾಂಡ್ ಇದೆ. ಹೀಗಾಗಿ ಇವರನ್ನು ಅತ್ಯಂತ ದುಬಾರಿ ನಟಿ ಎಂದೂ ಕರೆಯಬಹುದು. ಸದ್ಯ ಬಾಲಿವುಡ್‌ಗೆ (Bollywood) ಹಾರಿರುವ ನಯನತಾರಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಆ ಒಬ್ಬ ನಟನಿಗೋಸ್ಕರ ಸುಮಾರು 16 ವರ್ಷಗಳ ಬಳಿಕ ತಮ್ಮ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಕೂಡಲೆ ಮೊದಲ ಸಿನಿಮಾದಲ್ಲೇ ಕಿಂಗ್ ಖಾನ್ ಶಾರುಖ್(Sharuk Khan) ಜೊತೆ ನಟಿಸುವ ಅವಕಾಶ ನಯನತಾರಾಗೆ ಸಿಕ್ಕಿದ್ದು, ನಟಿ ಕೂಡ ಫುಲ್ ಖುಷ್ ಆಗಿದ್ದಾರೆ. ಸೌತ್ ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಸೈ ಎನಿಸಿಕೊಂಡಿರುವ ನಯನಾ ಹಲವು ಚಿತ್ರಗಳಲ್ಲಿ ಸದಾ ಟ್ರೆಡಿಷನಲ್ ಲುಕ್‌ನಲ್ಲಿಯೇ ಕಾಣಿಸಿಕೊಂಡ್ರೂ ಅವರ ಡಿಮ್ಯಾಂಡ್‌ಯೇನು ಕಮ್ಮಿಯಾಗಿಲ್ಲ. ಆದರೀಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರೋ ನಯನ, ಶಾರುಖ್ ಜೊತೆಗಿನ ಸಿನಿಮಾಗಾಗಿ ತಾನೇ ಹಾಕಿಕೊಂಡಿರೋ ರೂಲ್ಸ್ ಅನ್ನು ಬ್ರೇಕ್ ಮಾಡುತ್ತಿದ್ದಾರಂತೆ. ಸುಮಾರು 16 ವರುಷಗಳ ನಂತರ ಬಿಕನಿಯಲ್ಲಿ ಹಾಕ್ತಿದ್ದಾರಂತೆ.

ಹೌದು, ನಯನತಾರಾ ಕಳೆದ 16 ವರ್ಷಗಳಿಂದ ಒಂದೇ ಒಂದು ಸಿನಿಮಾದಲ್ಲೂ ಬಿಕಿನಿ ಧರಿಸಿಲ್ಲ. ತನ್ನ ಜೊತೆ ಕೆಲಸ ಮಾಡೋಕೆ ಬರೋ ನಿರ್ಮಾಪಕರಿಗೆ, ನಿರ್ದೇಶಕರಿಗೆ `ನೋ ಬಿಕಿನಿ’ (No Bikini) ಅನ್ನೋ ಸಂದೇಶವನ್ನು ರವಾನೆ ಮಾಡಿದ್ದರು. ಆದ್ರೀಗ ತಾನೇ ಹಾಕಿಕೊಂಡಿದ್ದ ರೂಲ್ಸ್ ಅನ್ನು ಈಗ ಬ್ರೇಕ್ ಮಾಡುತ್ತಿದ್ದಾರೆ. ಅಂದಹಾಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಯರು ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ತಾರೆ. ಹೀಗಾಗಿ ಶಾರುಖ್ ಜೊತೆಗಿನ ಜವಾನ್ ಸಿನಿಮಾದಲ್ಲಿ ನಟಿ ನಯನತಾರಾ ಕೂಡ ಬಿಕನಿ ತೊಟ್ಟು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ನೆಚ್ಚಿನ ನಟಿ ಬಿಕಿನಿ ಧರಿಸುತ್ತಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳಿಗೆ ನಂಬೋಕೆ ಆಗುತ್ತಿಲ್ಲ. ಯಾಕೆಂದ್ರೆ, ಅಷ್ಟು ಸುಲಭಕ್ಕೆ ನಯನತಾರಾ ರೂಲ್ಸ್ ಬ್ರೇಕ್ ಮಾಡೋದೇ ಇಲ್ಲ. ಆದರೂ ಬಿಕಿನಿ ಧರಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಶಾರುಖ್ ಖಾನ್ ಎನ್ನಲಾಗುತ್ತಿದೆ. ಈ ಮ್ಯಾಟರ್ ಬಾಲಿವುಡ್ ಅಂಗಳದಲ್ಲಿ ಕಳೆದ 2 ದಿನಗಳಿಂದ ಹರಿದಾಡುತ್ತಿದೆ.

ನಿರ್ದೇಶಕ ಅಟ್ಲಿ(Atli) ಅವರ ‘ಜವಾನ್'(Javan) ಚಿತ್ರದಲ್ಲಿ ನಯನತಾರಾ ಮತ್ತು ಶಾರುಖ್ ಖಾನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸಿನಿಮಾದಲ್ಲಿ ನಯನತಾರಾ ಸ್ವಿಮ್ ಸೂಟ್ ಧರಿಸುತ್ತಿದ್ದಾರಂತೆ ಅನ್ನೋ ವಿಚಾರ ಕೂಡ ಸಾಕಷ್ಟು ಸುದ್ಧಿಯಾಗ್ತಿದೆ.

You may also like

Leave a Comment