Home » Anand Mahindra : ʼಸರ್! ನೀವು ಭಾನುವಾರವನ್ನು ಹೇಗೆ ಆನಂದಿಸುತ್ತೀರಿ? ಇದಕ್ಕೆ ಆನಂದ್‌ ಮಹೀಂದ್ರ ಅವರು ನೀಡಿದ ಉತ್ತರ ಸೂಪರ್‌ ವೈರಲ್‌!

Anand Mahindra : ʼಸರ್! ನೀವು ಭಾನುವಾರವನ್ನು ಹೇಗೆ ಆನಂದಿಸುತ್ತೀರಿ? ಇದಕ್ಕೆ ಆನಂದ್‌ ಮಹೀಂದ್ರ ಅವರು ನೀಡಿದ ಉತ್ತರ ಸೂಪರ್‌ ವೈರಲ್‌!

by Mallika
2 comments
Anand Mahindra Reply

Anand Mahindra Reply: ದೇಶದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರು ಯಾವಾಗಲೂ ತಮ್ಮ ಅಭಿಮಾನಿಗಳು ಮತ್ತು ಪ್ರೀತಿಪಾತ್ರರ ಜೊತೆ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅನೇಕ ಬಾರಿ ಬಳಕೆದಾರರು ಸಹ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಆನಂದ್ ಮಹೀಂದ್ರಾ ಕೂಡ ಉತ್ತರಿಸುತ್ತಾರೆ. ಇತ್ತೀಚೆಗೆ, ಆನಂದ್ ಮಹೀಂದ್ರಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆ ವೀಡಿಯೊದಲ್ಲಿ ಬಳಕೆದಾರರು ತಮಾಷೆಯ ಪ್ರಶ್ನೆಯನ್ನು ಕೇಳಿದರು. ಇಲ್ಲೊಬ್ಬ ಬಳಕೆದಾರ ಆನಂದ್‌ ಮಹೀಂದ್ರ (Anand Mahindra Reply) ಅವರಿಗೆ ಒಂದು ಪ್ರಶ್ನೆ ಕೇಳಿದ್ದಾನೆ. ಅದೇನೆಂದರೆ “ಸರ್ ನೀವು ಎಂಥ ದೊಡ್ಡ ಕೈಗಾರಿಕೋದ್ಯಮಿ. ನೀವು ಭಾನುವಾರವನ್ನು ಹೇಗೆ ಆನಂದಿಸುತ್ತೀರಿ?”. ಈ ಟ್ವೀಟ್‌ಗೆ ಆನಂದ್ ಮಹೀಂದ್ರ ಅವರೇ ಉತ್ತರ ನೀಡಿದ್ದಾರೆ. ಅವರ ಈ ಶೈಲಿಯನ್ನು ಬಳಕೆದಾರರೂ ಇಷ್ಟಪಟ್ಟಿದ್ದಾರೆ.

ಕಾಮೆಂಟ್ ಮಾಡುವಾಗ ಬಳಕೆದಾರರು ಈ ರೀತಿ ಬರೆದಿದ್ದಾರೆ ” ನಿಮ್ಮ ಮೇಲಿನ ಗೌರವದಿಂದ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ನೀವು ದೇಶದ ದೊಡ್ಡ ಕೈಗಾರಿಕೋದ್ಯಮಿ. ನೀವು ಭಾನುವಾರವನ್ನು ಹೇಗೆ ಆನಂದಿಸುತ್ತೀರಿ?

ಇದಕ್ಕೆ ಆನಂದ್ ಮಹೀಂದ್ರ ಅವರು ನೀಡಿದ ಉತ್ತರ ನೋಡಿದರೆ ನಿಜಕ್ಕೂ ನಿಮಗೆ ಖುಷಿ ಆಗುತ್ತದೆ. ಈ ತಮಾಷೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ ಬರೆದಿದ್ದಾರೆ ʼ ನಾನು ಭಾನುವಾರವನ್ನು ಆನಂದಿಸಲು ತುಂಬಾ ಸುಲಭವಾದ ತಂತ್ರವನ್ನು ಬಳಸುತ್ತೇನೆ. ನಾನೊಬ್ಬ ಕೈಗಾರಿಕೋದ್ಯಮಿ ಎಂಬುದನ್ನು ಮರೆತುಬಿಡುತ್ತೇನೆʼ ಎಂದು ಬರೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ನೋಡಿದ ಬಳಕೆದಾರರು ತುಂಬಾ ಖುಷಿಯಾಗಿದ್ದಾರೆ. ಈ ಸುದ್ದಿ ಬರೆಯುವವರೆಗೂ 6 ಸಾವಿರಕ್ಕೂ ಹೆಚ್ಚು ಮಂದಿ ಈ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ. ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಮಾಡುವಾಗ ಒಬ್ಬ ಬಳಕೆದಾರರು ಬರೆದಿದ್ದಾರೆ- ಸರ್, ನೀವು ನಿಜವಾಗಿಯೂ ಗ್ರೇಟ್.

You may also like

Leave a Comment