Home » Toothbrush : ಇನ್ಮುಂದೆ ಹಲ್ಲುಜ್ಜಲೂ ಕೂಡ ಪಡಬೇಕಿಲ್ಲ ಕಷ್ಟ : ನಿಮ್ಮ ಕೆಲಸ ಸುಲಭ ಮಾಡಲೆಂದೆ ಬಂದಿದೆ ಎಲೆಕ್ಟ್ರಿಕ್ ಟೂತ್ ಬ್ರಷ್!

Toothbrush : ಇನ್ಮುಂದೆ ಹಲ್ಲುಜ್ಜಲೂ ಕೂಡ ಪಡಬೇಕಿಲ್ಲ ಕಷ್ಟ : ನಿಮ್ಮ ಕೆಲಸ ಸುಲಭ ಮಾಡಲೆಂದೆ ಬಂದಿದೆ ಎಲೆಕ್ಟ್ರಿಕ್ ಟೂತ್ ಬ್ರಷ್!

3 comments
Toothbrush

Toothbrush : ಇಂದಿನ ಈ ಟೆಕ್ನಾಲಜಿ ಯುಗದಲ್ಲಿ ಒಂದಲ್ಲ ಒಂದು ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಜನತೆಗೆ ಪ್ರತಿಯೊಂದು ಕೆಲಸವು ಸುಲಭ ರೀತಿಯಲ್ಲಿ ಆಗುವಂತೆ ಮಾಡುತ್ತಿದೆ. ಇನ್ಮುಂದೆ ಹಲ್ಲುಜ್ಜುವ ಕೆಲಸವೂ ಸುಲಭವಾಗಲಿದೆ.

ಹೌದು. ಕ್ರಾಸ್ ಆಕ್ಷನ್ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಟೂತ್ ಬ್ರಷ್ (Toothbrush) ಅನ್ನು ಅಭಿವೃದ್ಧಿಪಡಿಸಿದೆ. ಈ ಬ್ರೆಷ್ ಅನ್ನು ಬಾಯಲ್ಲಿ ಇಟ್ಟರೆ ಸಾಕು ಅದುವೇ ಹಲ್ಲನ್ನು ಉಜ್ಜುತ್ತದೆ. ಈ ಟೂತ್ ಬ್ರಷ್ AA ಬ್ಯಾಟರಿಯಿಂದ ಚಾಲಿತವಾಗಿದೆ. ಈ ಬ್ರಷ್ ಮೃದುವಾದ ಹಿಡಿತದ ಹ್ಯಾಂಡಲ್ ಅನ್ನು ಹೊಂದಿದೆ. ಮೇಲಿನ ಭಾಗವು ವೃತ್ತದಂತೆ ಸುತ್ತುತ್ತದೆ. ಕೆಳಗಿನ ಭಾಗವು ಜಿಗ್ ಜಾಗ್ ರೀತಿಯಲ್ಲಿ ತಿರುಗುತ್ತದೆ.

ಹಾಗೆಯೇ ತಲೆಯ 2 ಭಾಗಗಳನ್ನು ತಿರುಗಿಸಲು ಟೂತ್ ಬ್ರಷ್ ಮೇಲ್ಭಾಗದಲ್ಲಿ ಒಂದು ಬಟನ್ ಇದೆ. ಭಾಗಗಳನ್ನು ನಿಲ್ಲಿಸಲು ಕೆಳಗೆ ಮತ್ತೊಂದು ಬಟನ್ ಇದೆ. ಬ್ರಷ್ ಕ್ರಿಸ್ ಕ್ರಾಸ್ ಬಿರುಗೂದಲುಗಳನ್ನು ಹೊಂದಿದ್ದು, ಇದು ಹಲ್ಲುಗಳಿಗೆ ತಲುಪುತ್ತದೆ. ಬ್ರಷ್ ಹೆಡ್ ತಿರುಗುವ ಕಾರಣ ವಸಡು ಮತ್ತು ಹಲ್ಲುಗಳ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಸಾಮಾನ್ಯ ಟೂತ್ ಬ್ರಷ್ಗಳಲ್ಲಿ ಹೋಗಲಾರದ ಕಡೆ ಈ ಬ್ರಷ್ ಬಾಯಿಯ ಒಳಗೆ ಹೋಗುತ್ತದೆ.

ಇದರ ಮೂಲ ಬೆಲೆ 599 ರೂ. ಆಗಿದೆ. ಆದರೆ ಅಮೆಜಾನ್ ಶೇ.17ರ ರಿಯಾಯಿತಿಯೊಂದಿಗೆ 499 ರೂ.ಗೆ ಈ ಬ್ರಷ್ ಅನ್ನು ಮಾರಾಟ ಮಾಡುತ್ತಿದೆ. ಬ್ರಷ್ ದೀರ್ಘಾಯುಷ್ಯಕ್ಕಾಗಿ AA ಅಲ್ಕಾಲೈನ್ ಬ್ಯಾಟರಿಯನ್ನು ಬಳಸುತ್ತದೆ. ಕಾಲಕಾಲಕ್ಕೆ ಬ್ಯಾಟರಿ ರೀಚಾರ್ಜ್ ಮಾಡಬಹುದು. ಬ್ರಷ್ ನೀಲಿ, ಹಸಿರು, ಗುಲಾಬಿ, ನೇರಳೆ ಬಣ್ಣಗಳಲ್ಲಿ ಲಭ್ಯವಿದೆ. ಈ ಬ್ರಷ್ 84 ಗ್ರಾಂ ತೂಗುತ್ತದೆ. ಅಲ್ಲದೇ, 5.5 x 3.4 x 24 ಸೆಂ. ಇದೆ. ಈ ಬ್ರಷ್ 4.2/5 ರೇಟಿಂಗ್ ಹೊಂದಿದೆ.

You may also like

Leave a Comment