Home » Viral Video : ವಿದ್ಯೆ ಕಲಿರೋ ಅಂದ್ರೆ ವಿದ್ಯಾಮಂದಿರದ ಎದುರಲ್ಲೇ… ಸ್ಕೂಟರ್‌ ನಲ್ಲಿ ಯುವಕ – ಯುವತಿ, ಮುಂದೆ?

Viral Video : ವಿದ್ಯೆ ಕಲಿರೋ ಅಂದ್ರೆ ವಿದ್ಯಾಮಂದಿರದ ಎದುರಲ್ಲೇ… ಸ್ಕೂಟರ್‌ ನಲ್ಲಿ ಯುವಕ – ಯುವತಿ, ಮುಂದೆ?

0 comments
College students viral video

College students viral video : ಪ್ರತಿಯೊಬ್ಬ ವಿದ್ಯಾರ್ಥಿಯು (student) ಶಾಲೆ-ಕಾಲೇಜಿಗೆ ವಿದ್ಯೆ ಕಲಿಯೋದಿಕ್ಕೆ ಹೋಗುತ್ತಾರೆ. ಹೆತ್ತವರು ಕೂಡ ತಮ್ಮ ಮಕ್ಕಳು ಚೆನ್ನಾಗಿ ಓದಿ, ವಿದ್ಯಾವಂತರಾಗಿ ಮುಂದೆ ತಮಗೆ ಆಸರೆಯಾಗುತ್ತಾರೆ ಎಂಬ ಕನಸು ಹೊತ್ತಿರುತ್ತಾರೆ. ಆ ಭರವಸೆಯಿಂದಲೇ ಮಕ್ಕಳನ್ನು ಶಾಲೆಗೆ (school) ಕಳಿಸಿ, ಬೇಕಾದ್ದನ್ನೆಲ್ಲಾ ಕೊಡಿಸುತ್ತಾರೆ. ಮಕ್ಕಳಿಗೆ ಯಾವುದೇ ಕೊರತೆ ಬಾರದ ಹಾಗೆ ನೋಡಿಕೊಳ್ಳುತ್ತಾರೆ. ಆದರೆ ಕೆಲವು ಮಕ್ಕಳು ಶಾಲೆಗೆ ಹೋಗಿ ಓದುವುದು ಬಿಟ್ಟು, ಮೋಜು-ಮಸ್ತಿ, ಪ್ರೀತಿ-ಪ್ರೇಮ ಅಂತ ಅದರ ಹಿಂದೆ ಹೋಗುತ್ತಾರೆ. ಇದೀಗ ಅಂತಹದೇ ವಿದ್ಯಾರ್ಥಿಗಳ ಮೋಜು-ಮಸ್ತಿಯ ವಿಡಿಯೋವೊಂದು ವೈರಲ್
(College students Viral video) ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ (social media) ಪ್ರತಿದಿನ ಹಲವಾರು ವಿಷಯಗಳು, ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಂತೆಯೇ ಇದೀಗ ವಿಡಿಯೋವೊಂದು ವೈರಲ್ (viral video) ಆಗಿದ್ದು, ವಿಡಿಯೋ ನೋಡಿದ್ರೆ ಇವರೇನು ಕಾಲೇಜಿಗೆ ಓದೋದಿಕ್ಕೆ ಹೋಗುತ್ತಾರಾ, ಇಲ್ಲ ಮೋಜು-ಮಸ್ತಿ, ಸುತ್ತಾಡೋದಿಕ್ಕಾ? ಎಂಬ ಪ್ರಶ್ನೆ ನಿಮಗೇ ಮೂಡಬಹುದು. ವಿಡಿಯೋದಲ್ಲಿ ಕಾಲೇಜಿನ (college) ಗ್ರೌಂಡ್‌ನಲ್ಲಿ ಸ್ಕೂಟರ್‌ ಮೇಲೆ ಈ ಯುವಕ – ಯುವತಿ ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ.

ನೀವು ಈ ವಿಡಿಯೋ ನೋಡಿ ನಗುತ್ತೀರೋ, ಅಥವಾ ಛಿಮಾರಿ ಹಾಕುತ್ತೀರೋ? ನೀವೇ ನೋಡಿ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಜ್ಞಾನ ದೇಗುಲವಾದ ಕಾಲೇಜಿನ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳನ್ನು ನೋಡಬಹುದು. ಒಂದು ಹುಡುಗಿ ಮತ್ತು ಒಬ್ಬ ಹುಡುಗ ಇವರು ಸ್ಕೂಟಿಯಲ್ಲಿ ಕೂತಿದ್ದಾರೆ. ವಿಡಿಯೋ ನೋಡುತ್ತಿದ್ದಂತೆ ಅರ್ಥವಾಗುವುದೇನೆಂದರೆ ಯುವತಿಗೆ ಸ್ಕೂಟಿ ಬಿಡೋದಿಕ್ಕೆ ಗೊತ್ತಿಲ್ಲ. ಹಾಗಾಗಿ ಯುವಕ ಸ್ಕೂಟಿ ಕಲಿಸುತ್ತಿದ್ದಾನೆ. ಯುವತಿ ಮುಂದೆ ಮತ್ತು ಯುವಕ ಸ್ಕೂಟಿಯಲ್ಲಿ ಹಿಂದೆ ಕುಳಿತಿದ್ದಾನೆ. ಹಾಗೇ ಸ್ಕೂಟಿ ಸ್ಟಾರ್ಟ್ ಮಾಡಿ, ಸ್ವಲ್ಪ ದೂರ ಸಾಗುತ್ತಾರೆ. ಅಷ್ಟೋತ್ತಿಗೆ ಯುವಕ ತನ್ನ ನಿಯಂತ್ರಣವನ್ನು ಸಂಪೂರ್ಣ ತೆಗೆಯುತ್ತಾನೆ. ಅಂದ್ರೆ ಸ್ಕೂಟಿ ಹಿಡಿದಿದ್ದವನು ಕೈ ಹಿಂದೆ ತೆಗೆಯುತ್ತಾನೆ. ಮುಂದೇನಾಯ್ತು ಗೊತ್ತಾ?

ಏನ್ ಆಗೋದಿಕ್ಕೆ ಸಾಧ್ಯ? ಹೇಗೂ ಯುವತಿಗೆ (girl) ಸ್ಕೂಟಿ ಬಿಡೋದಿಕ್ಕೆ ಗೊತ್ತಿಲ್ಲ. ಯುವಕ ಹ್ಯಾಂಡಲ್ ಹಿಡಿದಿದ್ದವನು ಕೈ ಹಿಂದೆ ತೆಗೆದ ಸೆಕೆಂಡ್ ಅಲ್ಲಿ ಯುವತಿಗೆ ಸ್ಕೂಟಿ ನಿಯಂತ್ರಣಕ್ಕೆ ಸಿಗದೆ ಇಬ್ಬರೂ ಕೂಡ ಕೆಳಗೆ ಬೀಳುತ್ತಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

 

https://www.instagram.com/reel/CqfRJ_Zg1IU/?igshid=YmMyMTA2M2Y=

You may also like

Leave a Comment