Volkswagen Virtus : ಕಾರು ಪ್ರಿಯರಿಗಾಗಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ , ಉತ್ತಮ ಪವರ್ (best power ) ಉತ್ಪಾದಿಸುವ ಮೋಟಾರ್ ಹಾಗೂ ಅಧಿಕ ಇಂಧನ ದಕ್ಷತೆಯನ್ನು ಹೊಂದಿರುವ ಪೆಟ್ರೋಲ್ (petrol )ಎಂಜಿನ್(engine ) ಹೊಂದಿರುವ ಕಾರನ್ನು ಪ್ರಮುಖ ವಾಹನ ತಯಾರಕ ಕಂಪನಿಯಾದ ಫೋಕ್ಸ್ ವ್ಯಾಗನ್ ಇಂಡಿಯಾ ತನ್ನ BS6 ಹಂತ 2 ಎಂಜಿನ್ ನವೀಕರಣಗಳೊಂದಿಗೆ ವರ್ಟಸ್ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದರಿಂದ ಫೋಕ್ಸ್ವ್ಯಾಗನ್ ಇಂಡಿಯಾ ಕಂಪನಿಯು ಈ ವರ್ಟಸ್ ಕಾರಿನ ಬೆಲೆಯನ್ನು ರೂ,20,000 ವರೆಗೂ ಹೆಚ್ಚಿಸಿದೆ.
7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿರುವ ಫೋಕ್ಸ್ವ್ಯಾಗನ್ ವರ್ಟಸ್ (Volkswagen Virtus) ಕಾರನ್ನು ವೆಂಟೊಗೆ ಬದಲಿಯಾಗಿ ಕಾಂಪ್ಯಾಕ್ಟ್ ಸೆಡಾನ್ ಅನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೋಕ್ಸ್ ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೊಂದಿದೆ.
ಸದ್ಯ ಫೋಕ್ಸ್ವ್ಯಾಗನ್ ವರ್ಟಸ್ ಪೆಟ್ರೋಲ್-ಮಾತ್ರ ಸೆಡಾನ್ ಆಗಿದ್ದು, ಈ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಎಂಜಿನ್ಗಳನ್ನು ಹೊಂದಿವೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 114 ಬಿಹೆಚ್ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನಾಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ವರ್ಟಸ್ ಕಾರಿನ ಉತ್ಪಾದನೆಯು ಪುಣೆಯಲ್ಲಿರುವ ಕಂಪನಿಯ ಚಕನ್ ಸ್ಥಾವರದಲ್ಲಿ ನಡೆಯುತ್ತಿದೆ. ಫೋಕ್ಸ್ ವ್ಯಾಗನ್ ವರ್ಟಸ್ ಕಳೆದ ವರ್ಷ ಬಿಡುಗಡೆಯಾ ಫೋಕ್ಸ್ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್ವ್ಯಾಗನ್ನ ಎರಡನೇ ಮಾದರಿಯಾಗಿದೆ.
ಈ ಕಾರಿನ ಡೋರ್ ಹ್ಯಾಂಡಲ್ಗಳು, ಕಾಂಟ್ರಾಸ್ಟ್ ಕಪ್ಪು ORVM ಗಳು ಮತ್ತು ರೂಪ್ ಗಾಗಿ ಕ್ರೋಮ್ ಅನ್ನು ಹೊಂದಿದೆ.ಇದರೊಂದಿಗೆ ಈ ವರ್ಟಸ್ ಕಾರಿನ ಪ್ರೊಫೈಲ್ ಅನ್ನು ಪೂರ್ಣಗೊಳಿಸಿದಾಗ ಎಲ್ಇಡಿ ಟೈಲ್ಲೈಟ್ಗಳು, ಬೂಟ್ ಲಿಡ್ನಲ್ಲಿ ವಿರ್ಟಸ್ ಬ್ಯಾಡ್ಜ್ ಮತ್ತು ಬೂಟ್-ಮೌಂಟೆಡ್ ನಂಬರ್ ಪ್ಲೇಟ್ ರಿಸೆಸ್ ಕಾರಿನ ಹಿಂಭಾಗವನ್ನು ಆವರಿಸುತ್ತದೆ. ಇನ್ನು ಫೋಕ್ಸ್ ವ್ಯಾಗನ್ ವಿರ್ಟಸ್ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ಜಿಟಿ ವೇರಿಯಂಟ್ ನಡುವೆ ವಿಭಿನ್ನ ಸ್ಟೈಲಿಂಗ್ ಬಿಟ್ಗಳನ್ನು ಕೂಡ ಸೇರಿಸಿದೆ.
ಹೊಸ ಫೋಕ್ಸ್ವ್ಯಾಗನ್ ವರ್ಟಸ್ ಕಾರು ವೈರ್ಲೆಸ್ ಫೋನ್ ಚಾರ್ಜರ್, ವೆಂಟಿಲೆಟರ್ ಮುಂಭಾಗದ ಸೀಟುಗಳು, ಹಿಂಭಾಗದ ಏರ್- ಕಾನ್ ವೆಂಟ್ಗಳು ಮತ್ತು ಎಲೆಕ್ಟಿಕ್ ಸನ್ರೂಫ್ನೊಂದಿಗೆ ಬರುತ್ತದೆ. ವರ್ಟಸ್ ಕ್ಲಾಸ್-ಲೀಡಿಂಗ್ 521-ಲೀಟರ್ ಬೂಟ್ಸ್ಪೇಸ್ನೊಂದಿಗೆ ಬರುತ್ತದೆ.
ಇನ್ನು ಎರಡನೇ ಸಾಲಿನ ಸೀಟುಗಳನ್ನು ಫೋಲ್ಡ್ ಮಾಡುವ ಮೂಲಕ 1,050-ಲೀಟರ್ಗೆ ವಿಸ್ತರಿಸಬಹುದು. ಪರ್ಫಾರ್ಮೆನ್ಸ್ ಲೈನ್ ಕೂಡ 60:40 ಸ್ಪಿಟ್ ಫಂಕ್ಷನ್ ಅನ್ನು ಹೊಂದಿದೆ. ಫೋಕ್ಸ್ ವ್ಯಾಗನ್ ವರ್ಟಸ್ ಕಾರಿನ ಒಳಭಾಗದಲ್ಲಿ ವಿಶಾಲವಾದ ಮತ್ತು ಉತ್ತಮವಾದ ಕ್ಯಾಬಿನ್ನೊಂದಿಗೆ ಬರುತ್ತದೆ, ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಒಳಾಂಗಣದಲ್ಲಿ ಪೂರ್ಣಗೊಂಡಿದೆ. ವೈಲ್ಡ್ ಚೆರಿ ರೆಡ್ ಪೇಂಟ್ ಸ್ಟೀಮ್ಗೆ ನಿರ್ದಿಷ್ಟವಾದ ಡ್ಯಾಶ್ಬೋರ್ಡ್ನಲ್ಲಿ ಪರ್ಫಾರ್ಮೆನ್ಸ್ ಲೈನ್ ವರ್ಟಸ್ ರೆಡ್ ಬಣ್ಣದ ಮುಖ್ಯಾಂಶಗಳನ್ನು
ಹೊಂದಿದೆ.
ಈ ಹೊಸ ಸೆಡಾನ್ ಫ್ಲ್ಯಾಟ್ ಗ್ರಿಲ್, ಸುತ್ತಲೂ ಕ್ರೋಮ್ ಗಾರ್ನಿಶ್ ಮತ್ತು ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಹೊಂದಿದೆ. ಎಲ್- ಆಕಾರದ ಎಲ್ಇಡಿ ಡಿಆರ್ಲ್ ಗಳು ಸ್ಪೋರ್ಟಿಯಾಗಿ ಕಾಣುತ್ತವೆ. ಚೂಪಾದ ಲೈನ್ ಗಳು ಮತ್ತು ಹರಿತವಾಗಿದ್ದು, ಈ ಹೊಸ ಫೋಕ್ಸ್ವ್ಯಾಗನ್ ವರ್ಟಸ್ ಜಿಟಿ ಬ್ಯಾಡ್ಜ್ ಹೊಂದಿರುವ ಪರ್ಫಾಮೆನ್ಸ್ ವೆರಿಯೆಂಟ್ ಅನ್ನು ಹೊಂದಿದೆ.
