Home » Oppo Reno 7 Pro : 5000 ರೂ ಬೆಲೆ ಇಳಿಕೆಯಲ್ಲಿ ಒಪ್ಪೋ ನಿಮ್ಮ ಕೈ ಸೇರಲಿದೆ

Oppo Reno 7 Pro : 5000 ರೂ ಬೆಲೆ ಇಳಿಕೆಯಲ್ಲಿ ಒಪ್ಪೋ ನಿಮ್ಮ ಕೈ ಸೇರಲಿದೆ

1 comment
Oppo Reno 7 Pro

Oppo Reno 7 Pro : ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಒಪ್ಪೋ ಸಂಸ್ಥೆ ತನ್ನದೇ ಹವಾ ಎಬ್ಬಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೋನ್ (smart phone ) ಮಾದರಿಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಒಪ್ಪೋ ರೆನೋ ಸರಣಿಯಲ್ಲಿ ಹಲವು ಫೋನ್‌ಗಳನ್ನು ಗ್ರಾಹಕರನ್ನು ಆಕರ್ಷಸಿದೆ. ಅದಲ್ಲದೆ ಒಪ್ಪೋ ರೆನೊ 7 ಪ್ರೊ (Oppo Reno 7 Pro) ಸ್ಮಾರ್ಟ್‌ಫೋನ್ ಮೇಲೆ ಬೆಲೆ ಇಳಿಕೆ ಮಾಡಿದ್ದು ಇನ್ನಷ್ಟು ಗ್ರಾಹಕರನ್ನು ಮತ್ತೇ ತನ್ನತ್ತ ಸೆಳೆಯುವಂತೆ ಮಾಡಿದೆ

ಒಪ್ಪೋ ರೆನೊ 7 ಪ್ರೊ ಫೋನ್ 39,999 ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿತ್ತು. ಈಗ ಗ್ರಾಹಕರು 34,999ರೂ. ಗಳಿಗೆ ಖರೀದಿಸಬಹುದಾಗಿದೆ. ಅಂದರೆ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ ಫೋನ್ ಬರೋಬ್ಬರಿ 5,000ರೂ. ಇಳಿಕೆ ಕಂಡಿದೆ. ಸದ್ಯ, ನೂತನ ಬೆಲೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ 2,000ರೂ. ವರೆಗೂ ರಿಯಾಯಿತಿ ಸಹ ದೊರೆಯುತ್ತದೆ.

ಒಪ್ಪೋ ರೆನೊ 7 ಪ್ರೊ ಫೋನಿನ ಫೀಚರ್ಸ್‌:

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ 11 ಆಧಾರಿತ ಕಲರ್ ಒಎಸ್ 12 ನಲ್ಲಿ ಕಾರ್ಯ ನಿರ್ವಹಿಸಲಿದೆ. nowe 12 GB RAM + 256 GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನುಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್ ಮತ್ತು 180Hz ಟಚ್ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್ ಅನ್ನು ಹೊಂದಿದೆ.

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ imx766 ಸೆನ್ಸಾರ್ ಹೊಂದಿದೆ. ಎರಡನೇಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ imx709 ಸೆನ್ಸಾರ್ ಸಾಮರ್ಥ್ಯದ ಸೆಲ್ಸಿ ಕ್ಯಾಮೆರಾ ಹೊಂದಿದೆ.

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಖರೀದಿಸಬಹುದಾಗಿದ್ದು, ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್ ಕಲರ್ ಆಯ್ಕೆ ಯಲ್ಲಿ ಲಭ್ಯವಿದೆ.

You may also like

Leave a Comment