Home » Hair Fall: ಕೊರೋನಾ ಬಳಿಕ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆಯೇ ? ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ!

Hair Fall: ಕೊರೋನಾ ಬಳಿಕ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆಯೇ ? ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ!

0 comments
Hair Fall Problem

Hair Fall Problem: ಕೊರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ಜನರಲ್ಲಿ ಆದ ಬದಲಾವಣೆಗಳು ನಿಮಗೆಲ್ಲ ಗೊತ್ತಿರುವಂತದ್ದೇ!ಕೋವಿಡ್‌(COVID) ಕಾಣಿಸಿಕೊಂಡ ಬಳಿಕ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ(Hair fall Problem) ಕಂಡುಬಂದಿದೆ. ಇದಕ್ಕೆ ಕಾರಣವೇನು? ಪರಿಹಾರ ಪಡೆಯುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಕೆಲ ಸಂಶೋಧನೆಗಳ ಅನುಸಾರ, ಹೆಚ್ಚಿನ ಕೋವಿಡ್ ನಂತರದ ಕೂದಲು ಉದುರುವಿಕೆ ಪ್ರಕರಣಗಳು ಟೆಲೋಜೆನ್ ಎಫ್ಲುವಿಯಮ್ ಎಂಬ ಸ್ಥಿತಿಯಿಂದ ಉಂಟಾಗುತ್ತದೆ. ಇದು ಮಾನಸಿಕ ಒತ್ತಡದಿಂದಾಗಿ ಕೂದಲು ಉದುರುವ ಸ್ಥಿತಿಯಾಗಿದ್ದು, ದೇಹಕ್ಕೆ ಸಂಕೋಚನದಿಂದ ಒತ್ತಡವು ಆಘಾತ ಉಂಟು ಮಾಡುತ್ತವೆ. ಇದರಿಂದಾಗಿ ಬೆಳವಣಿಗೆ-ವಿಶ್ರಾಂತಿ ಚಕ್ರವನ್ನು ಅಡ್ಡಿಯಾಗುತ್ತದೆ.ಕೊರೋನಾ ವೈರಸ್ (COVID 19) ದೇಹಕ್ಕೆ ಒಡ್ಡಿದ ಒತ್ತಡದ ಪರಿಣಾಮವಾಗಿ ಕೂದಲು ಉದುರುತ್ತಿರುವುದು ಕಂಡು ಬರುತ್ತಿದೆ ಎನ್ನಲಾಗಿದೆ. ಅಷ್ಟಕ್ಕೂ ಕೂದಲು ಉದುರುವ ಸಮಸ್ಯೆ ಯಾವಾಗ ಕಂಡುಬರುತ್ತದೆ?

ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಕೂದಲು ಉದುರುವ ಪ್ರಕ್ರಿಯೆ ಶುರುವಾಗುತ್ತದೆ. ಕೋವಿಡ್‌ನಿಂದ ಚೇತರಿಸಿಕೊಂಡ ಒಂದೆರಡು ತಿಂಗಳ ಬಳಿಕ ತೀವ್ರವಾದ ಕೂದಲು ಉದುರುವಿಕೆ ಕಾಣಿಸಿಕೊಳ್ಳಬಹುದು. ಅಷ್ಟೆ ಅಲ್ಲದೇ, ಯಾವುದೇ ಹೆಚ್ಚುವರಿ ಔಷಧಿಗಳಿಲ್ಲದೆ (Medicines) ಕೂದಲು ಉದುರುವಿಕೆಯು ಸ್ಥಿತಿಯು ಕ್ರಮೇಣ ಸರಿಯಾಗುತ್ತದೆ ಎನ್ನಲಾಗಿದೆ.​ ಕೂದಲು ಉದುರಲು ಒತ್ತಡ ಕೂಡ ಕಾರಣವಾಗಿರಬಹುದು.

​ಹೆಚ್ಚಿನ ಸಂದರ್ಭದಲ್ಲಿ ಖಿನ್ನತೆಗೆ ಒಳಗಾದವರು ಕಳಪೆ ನೈರ್ಮಲ್ಯ ಮತ್ತು ಆಹಾರ ಪದ್ಧತಿಗಳನ್ನು ಅಳವಡಿಸಿ ಕೊಂಡಿರುತ್ತಾರೆ. ಹೀಗಾಗಿ ಕೂಡ ಕೂದಲಿನ ಸಮಸ್ಯೆ(Hair care ) ಉಂಟಾಗುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡದಿಂದ ಕೂದಲು ತೆಳುವಾಗುವ ಜೊತೆಗೆ ಬಿಳಿಯಾಗುವ ಸಾಧ್ಯತೆಯಿದೆ. ಮಾನಸಿಕ ಒತ್ತಡದಿಂದಾಗಿ ಟೆಲೋಜೆನ್ ಎಫ್ಲುವಿಯಮ್, ಟ್ರೈಕೊಟಿಲೊಮೇನಿಯಾ ಮತ್ತು ಅಲೋಪೆಸಿಯಾ ಅರೆಟಾದಂತಹ ಕಾಯಿಲೆಗಳ ಮೂಲಕ ಕೂದಲು ತೆಳುವಾಗಲು ಕಾರಣವಾಗಬಹುದು ಅಷ್ಟೇ ಅಲ್ಲದೆ, ಒತ್ತಡಕ್ಕೊಳಗಾಗಿದ್ದ (stress)ವ್ಯಕ್ತಿಗೆ ಕೂದಲು ಒಡೆಯುವ ಸಾಧ್ಯತೆ ಕೂಡ ದಟ್ಟವಾಗಿದೆ. ಅಷ್ಟೇ ಅಲ್ಲದೆ, ತಲೆಹೊಟ್ಟು ಇದ್ದಲ್ಲಿ, ಒತ್ತಡವು ನಿಮ್ಮ ಸ್ಥಿತಿಯನ್ನು ಮತ್ತಷ್ಟು ಕೆಡಿಸುವ ಸಾಧ್ಯತೆಗಳಿವೆ. ಕೂದಲು ಉದುರುವುದನ್ನು ತಡೆಯಲು(Hairfall Prevention) ಕೆಲವರು ವಿಟಮಿನ್‌ಗಳು/ಸಪ್ಲಿಮೆಂಟ್‌ಗಳ ಪ್ರಯೋಜನ ಪಡೆಯಬಹುದು. ಪ್ರೋಟೀನ್, ವಿಟಮಿನ್‌ಗಳು, ಸತು ಮತ್ತು ಇತರ ಖನಿಜಗಳಿಂದ ಕೂಡಿದ ಉತ್ತಮ, ಸಮತೋಲಿತ ಆಹಾರದ ಜೊತೆಗೆ ಇವುಗಳನ್ನು ಸೇವಿಸುವುದು ಒಳ್ಳೆಯದು.

ಕೂದಲಿನ ಆರೈಕೆ ಮಾಡುವುದು ಹೇಗೆ?
ಒಂದು ವೇಳೆ, ನಿಮಗೆ ಒತ್ತಡದಿಂದ ಉಂಟಾಗುವ ಕೂದಲು ಉದುರುವಿಕೆ ಸಮಸ್ಯೆ ಎಂದಾದರೆ, ಒತ್ತಡವನ್ನು ತೊಡೆದುಹಾಕುವ ಕಡೆಗೆ ಗಮನಹರಿಸಿ. ಒತ್ತಡ ಕಡಿಮೆ ಮಾಡಲು ನೆರವಾಗುವ ಯೋಗ ಅಥವಾ ಧ್ಯಾನ, ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡುವುದು ಉತ್ತಮ. ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಎಣ್ಣೆ (Hair Oli)ಹಾಕಬೇಡಿ. ನಿಮ್ಮ ಕೂದಲನ್ನು (Hair) ಯಾವಾಗಲೂ ತೆರೆದಿಡಬೇಡಿ ಮತ್ತು ಅದನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ.ಒದ್ದೆಯಾದಾಗ ನಿಮ್ಮ ಕೂದಲನ್ನು ಬಾಚಿಕೊಳ್ಳುವುದು ಬೇಡ. ಆಗಾಗ್ಗೆ ಕೂದಲು ಒಣಗಿಸುವ ಪ್ರಯತ್ನ ಮಾಡುವುದು ಬೇಡ. ಒಂದಕ್ಕಿಂತ ಹೆಚ್ಚು ರಾತ್ರಿಗಳ ಕಾಲ ಎಣ್ಣೆಯನ್ನು ತಲೆಯಲ್ಲಿ ಬಿಡಬೇಡಿ ಜೊತೆಗೆ ಎಣ್ಣೆ ಹಚ್ಚಿದ ನಂತರ ನೇರವಾಗಿ ಬಾಚಬೇಡಿ.ಕೂದಲನ್ನು ಬಹಳ ನಾಜೂಕಿನಿಂದ ನೋಡಿಕೊಳ್ಳಬೇಕಾಗುತ್ತದೆ.

ವಾರಕ್ಕೊಮ್ಮೆ ಎಣ್ಣೆ ಮಸಾಜ್ (Hair Oil Massage)ಮಾಡುವುದು ನಿಮ್ಮ ಕೂದಲು ಕಿರುಚೀಲಗಳನ್ನು ಹೈಡ್ರೇಟ್ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವ ಅಭ್ಯಾಸ(Drinking Water) ರೂಢಿಸಿಕೊಳ್ಳಿ. ಚೆನ್ನಾಗಿ ನಿದ್ದೆ ಮಾಡುವ ಮತ್ತು ಕೂದಲನ್ನು ರಕ್ಷಿಸಲು ಆರೋಗ್ಯಕರ ದಿನಚರಿಯನ್ನು ಪಾಲಿಸುವುದು ಉತ್ತಮ. ಆದರೆ, ನಿಮಗೆ ವಿಪರೀತ ಕೂದಲು ಉದುರುವಿಕೆಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: Beauty tips : ಮುಖದ ಕಾಂತಿಯನ್ನು ಹೆಚ್ಚಿಸಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!

You may also like

Leave a Comment