ITR Filling : ಆದಾಯ ತೆರಿಗೆಗಳು ಸರ್ಕಾರಗಳಿಗೆ ಆದಾಯದ ಮೂಲವಾಗಿದ್ದು, ಆದಾಯ ತೆರಿಗೆ( IncomeTax)ಎಂಬ ಪದವು ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿರುವ ವ್ಯವಹಾರಗಳು ಮತ್ತು ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ ವಿಧಿಸುವ ಒಂದು ರೀತಿಯ ತೆರಿಗೆಯನ್ನು ಸೂಚಿಸುತ್ತದೆ. ಕಾನೂನಿನ ಅನುಸಾರ, ತೆರಿಗೆದಾರರು ತಮ್ಮ ತೆರಿಗೆ ಬಾಧ್ಯತೆಗಳನ್ನು ನಿರ್ಧರಿಸಲು ವಾರ್ಷಿಕವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಅನ್ನು ಸಮಯೋಚಿತವಾಗಿ ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆದಾರರ ಹೊಣೆ ಇಲ್ಲವೇ ಜವಾಬ್ದಾರಿಯಾಗಿದೆೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ತಪ್ಪಿಸಿಕೊಂಡರೆ, ಸಮಸ್ಯೆಗಳು ಎದುರಾಗುವುದು ನಿಶ್ಚಿತ. ಈಗಾಗಲೇ ಕೇಂದ್ರ ಸರ್ಕಾರ ಪಾನ್ಕಾರ್ಡ್ಗೆ ಆಧಾರ್ ಕಾರ್ಡ್ ಸಂಖ್ಯೆ(Aadhar – PAN Card Link) ಜೋಡಿಸುವಂತೆ ಸಾರ್ವಜನಿಕರಿಗೆ ಅನೇಕ ಬಾರಿ ಮನವಿ ಮಾಡಿದ್ದು, ಇದಕ್ಕಾಗಿ ಅವಧಿಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಆದಾಯ ತೆರಿಗೆ ವಂಚನೆ, ಬೇನಾಮಿ ಆಸ್ತಿ, ಹೊರದೇಶಗಳಿಂದ ಹರಿದುಬರುವ ಹಣದ ಮೇಲೆ ಕಟ್ಟೆಚ್ಚರ ವಹಿಸಿ ಅಕ್ರಮವಾಗಿ ಹಣಕಾಸು(Financial Transaction) ವಹಿವಾಟು ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಸೂಚಿಸಲಾಗಿದೆ.
ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುತ್ತಿದ್ದಾರೆ. ಈ ಬಾರಿ ಆದಾಯ ತೆರಿಗೆ ಸಲ್ಲಿಸುವಾಗ ಹಲವು ಬದಲಾವಣೆ ಮಾಡಲಾಗಿದ್ದು, ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆಗಳಾಗಿದ್ದು, ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿಯೂ ಬದಲಾವಣೆ ತರಲಾಗಿದೆ. ಇದರೊಂದಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ ಕೂಡ ಹೆಚ್ಚಳ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವಿನ ಬಗ್ಗೆಯೂ ಸರ್ಕಾರ ಘೋಷಣೆ ಮಾಡಿದೆ.ಆದಾಯ ತೆರಿಗೆಯನ್ನು ಸಾರ್ವಜನಿಕ ಸೇವೆಗಳಿಗೆ ಧನಸಹಾಯ ನೀಡಲು, ಸರ್ಕಾರದ ಕಾರ್ಯಕ್ರಮಗಳಿಗೆ ಹಣ ಪಾವತಿಸಲು ಮತ್ತು ನಾಗರಿಕರಿಗೆ ಸರಕುಗಳನ್ನು ಒದಗಿಸಲು ಬಳಕೆ ಮಾಡಲಾಗುತ್ತದೆ.
2022-23 ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು (ITR Filling)ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೀಗಾಗಿ ಕೊನೆಯ ದಿನದ(Last Date) ಮೊದಲೇ ಆದಾಯ ತೆರಿಗೆ ಪಾವತಿಸುವುದು ಉತ್ತಮ. ಇದಲ್ಲದೆ, ಆದಾಯ ತೆರಿಗೆ ಪಾವತಿ ಮಾಡುವುದು ಪ್ರತಿಯೊಬ್ಬ ಭಾರತೀಯನ (Indian) ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ನಿಗದಿತ ದಿನಾಂಕದ ಒಳಗೆ ಆದಾಯ ತೆರಿಗೆ ಪಾವತಿಸುವುದು ಒಳ್ಳೆಯದು. 2022-23ರ ಹಣಕಾಸು ವರ್ಷಕ್ಕೆ (Financial Year)ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದೇ ಇದ್ದಲ್ಲಿ ತೊಂದರೆಗಳು ಸೃಷ್ಟಿ ಯಾಗುವುದು ಗ್ಯಾರಂಟಿ. ಆದಾಯ ತೆರಿಗೆಗೆ ಒಳಪಟ್ಟಿದ್ದು ಜೊತೆಗೆ ಜುಲೈ 31 ರವರೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಆಗದೇ ಇದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ.
