Home » Maruti Suzuki : ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುತಿಯ ಈ ಕಾರನ್ನು ಬುಕ್ ಮಾಡಿ ಕಾಯುತ್ತಿದ್ದಾರೆ!

Maruti Suzuki : ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುತಿಯ ಈ ಕಾರನ್ನು ಬುಕ್ ಮಾಡಿ ಕಾಯುತ್ತಿದ್ದಾರೆ!

0 comments
Maruti Suzuki car

Maruti Suzuki car: ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ (Maruti suzuki car) ಆಗಿದೆ. ಅದಲ್ಲದೆ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಎನ್ನುವುದು ಹೆಮ್ಮೆಯ ವಿಚಾರ. ಆದರೆ ಮಾರುತಿ ಸುಜುಕಿ ಇಂಡಿಯಾ ಪ್ರಸ್ತುತ 380,000 ಬುಕ್ಕಿಂಗ್‌ಗಳನ್ನು ಬಾಕಿ ಉಳಿಸಿಕೊಂಡಿದ್ದು, ಇವುಗಳಲ್ಲಿ, ಎರ್ಟಿಗಾ, ಡಿಜೈರ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಬಲೆನೊ, ಫ್ರಾಂಕ್ಸ್ ಮತ್ತು ಎಕ್ಸ್‌ಎಲ್ 6ನ ಅತಿ ಹೆಚ್ಚು ಆರ್ಡರ್‌ಗಳು ಬಾಕಿ (Maruti Suzuki Pending Order)ಉಳಿದಿವೆ.

ಪ್ರಸ್ತುತ ಕಂಪನಿಯ 2 ವಾಹನಗಳಿಗಾಗಿ ಇದೀಗ ಲಕ್ಷಗಟ್ಟಲೆ ಗ್ರಾಹಕರು ಕಾಯುತ್ತಿದ್ದಾರೆ. ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಕಾರುಗಳ ಬಾಕಿ ಆರ್ಡರ್‌ಗಳ (Maruti Suzuki is booked and waiting) ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮಾರುತಿ ಎರ್ಟಿಗಾ ಮತ್ತು ಡಿಜೈರ್‌ ಆರ್ಡರ್‌ಗಳು ಬಾಕಿ ಉಳಿದಿವೆ.

ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಂಪನಿಯ ಅತ್ಯಧಿಕ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ಆರ್ಡರ್ ಆಗಿದೆ. ಕಂಪನಿಯ ಪ್ರಕಾರ, ಎರ್ಟಿಗಾದ ಸುಮಾರು 100,000 ಬುಕಿಂಗ್‌ಗಳು ಬಾಕಿ ಉಳಿದಿವೆ. ನಂತರ ಕ್ರಮವಾಗಿ ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ ಎಸ್‌ಯುವಿಯ 40,000 ಮತ್ತು 34,000 ಬುಕಿಂಗ್ ಬಾಕಿ ಉಳಿದಿವೆ. ಇನ್ನು 5-ಡೋರ್ ಜಿಮ್ನಿ ಎಸ್‌ಯುವಿ 24,500 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಇದುವರೆಗೆ 16,500 ಬುಕ್ಕಿಂಗ್‌ಗಳನ್ನು ಪಡೆದಿದೆ.

ಮಾರುತಿ ಈ ತಿಂಗಳ ಎರಡನೇ ವಾರದಲ್ಲಿ ಫ್ರಾಂಕ್ಸ್‌ಗಳ ಬೆಲೆಗಳನ್ನು ಪ್ರಕಟಿಸಲಿದೆ. ಜನಪ್ರಿಯ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ 20,000 ಬುಕ್ಕಿಂಗ್‌ಗಳು ಬಾಕಿ ಉಳಿದಿವೆ. ಕಂಪನಿಯ ಪ್ರೀಮಿಯಂ MPV ಮಾರುತಿ ಸುಜುಕಿ XL6 9,000 ಬಾಕಿ ಬುಕಿಂಗ್ ಹೊಂದಿದೆ.

ಮಾಹಿತಿ ಪ್ರಕಾರ ಮಾರುತಿ ಸುಜುಕಿ ಎರ್ಟಿಗಾಫಾ ಗರಿಷ್ಟ ವೈಟಿಂಗ್ ಪಿರಿಯಡ್ 33-34 ವಾರಗಳು, ಮಾರುತಿ ಸುಜುಕಿ ಬ್ರೆಝಾಗೆ 21-22 ವಾರಗಳು, ಮಾರುತಿ ಸುಜುಕಿ ಡಿಜೈರ್‌ಗೆ 20-21 ವಾರಗಳು, ಮಾರುತಿಗೆ 20-21 ವಾರಗಳು ಸುಜುಕಿ 16-17 ವಾರಗಳು, ಗ್ರಾಂಡ್ ವಿಟಾರಾ ಮತ್ತು XL6 ಗೆ 14-15 ವಾರಗಳು .

ಒಟ್ಟಿನಲ್ಲಿ ಆಲ್ಟೊ, ವ್ಯಾಗನಾರ್, ಸ್ವಿಫ್ಟ್ ಕಾರುಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮಾರುತಿಯ ಕಾರುಗಳೇ ಅಗ್ರಸ್ಥಾನದಲ್ಲಿದ್ದು ಇದೀಗ ಬುಕ್ಕಿಂಗ್ ಮಾಡಿರುವ ವಾಹನಗಳಿಗಾಗಿ ಲಕ್ಷಗಟ್ಟಲೆ ಗ್ರಾಹಕರು ಕಾಯುತ್ತಿದ್ದಾರೆ.

You may also like

Leave a Comment