Home » Death Case: ಮದುವೆಯ ಉಡುಗೊರೆಯಾಗಿ ಬಂದ ಹೋಮ್ ಥಿಯೇಟರ್ ತಂದಿತು ವರನ ಜೀವಕ್ಕೆ ಸಂಚಕಾರ!

Death Case: ಮದುವೆಯ ಉಡುಗೊರೆಯಾಗಿ ಬಂದ ಹೋಮ್ ಥಿಯೇಟರ್ ತಂದಿತು ವರನ ಜೀವಕ್ಕೆ ಸಂಚಕಾರ!

1 comment
Home theater explosion

Home theater explosion : ಬಾಳಿ ಬದುಕಬೇಕಿದ್ದ ನವ ವಿವಾಹಿತನೊಬ್ಬ ಸಾವಿನ (Death Case) ಮನೆಗೆ ಆಹ್ವಾನ ಪಡೆದುಕೊಂಡ ಘಟನೆ ನಡೆದಿದೆ. ಮದುವೆಯ ಉಡುಗೊರೆಯಾಗಿ ಪಡೆದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ವೊಂದು (Home Theater Music System explosion) ಸ್ಫೋಟಗೊಂಡ ಹಿನ್ನೆಲೆ ನವವಿವಾಹಿತ ಹಾಗೂ ಆತನ ಹಿರಿಯ ಸಹೋದರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಪ್ರಾಥಮಿಕ ಮಾಹಿತಿಯ ಅನುಸಾರ, 22 ವರ್ಷದ ಹೇಮೇಂದ್ರ ಮೆರಾವಿ ಏಪ್ರಿಲ್ 1 (April 1st)ರಂದು ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದ ಎನ್ನಲಾಗಿದೆ. ಮದುವೆ ಶುಭಾರಂಭಕ್ಕೆ ಅನೇಕ ಉಡುಗೊರೆಗಳು ಬಂದಿದೆ. ಹೀಗಾಗಿ, ಸೋಮವಾರ ಹೇಮೇಂದ್ರ ಹಾಗೂ ಇತರ ಕುಟುಂಬ ಸದಸ್ಯರು ತಮ್ಮ ಮನೆಯ ಕೋಣೆಯೊಳಗೆ ಮದುವೆಯ ಉಡುಗೊರೆಗಳನ್ನು ಹೊರ ತೆಗೆದಿದ್ದಾರೆ.

ನವವಿವಾಹಿತ ಹೇಮೇಂದ್ರ ತನಗೆ ಗಿಫ್ಟ್ ಬಂದಿದ್ದ ಹೋಮ್ ಥಿಯೇಟರ್ (Home Theater)ಸಿಸ್ಟಮ್ ವೈಯರ್ ರನ್ನು ಎಲೆಕ್ಟ್ರಿಕ್ ಬೋರ್ಡ್ ಗೆ (Electric Board)ಸಿಕ್ಕಿಸಿ ಆನ್ ಮಾಡಿದ ಸಂದರ್ಭ ಭಾರೀ ಸ್ಫೋಟವಾಗಿದೆ. ಆ ಸಂದರ್ಭ ಹೇಮೇಂದ್ರ ಸ್ಥಳದಲ್ಲೇ ಅಸುನೀಗಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿರುವ ಕುರಿತು ಕಬೀರ್ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ. ಈ ಘಟನೆ ಸೋಮವಾರ ನಡೆದಿದೆ ಎನ್ನಲಾಗಿದ್ದು, ಸ್ಫೋಟಕ್ಕೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸ್ಫೋಟದ(Blast) ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಇರಿಸಲಾಗಿದ್ದ ಕೋಣೆಯ ಗೋಡೆಗಳು ಹಾಗೂ ಮೇಲ್ಛಾವಣಿ ಕೂಡ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.

You may also like

Leave a Comment