Home » Kichcha Sudeep: ಬೆದರಿಕೆ ಪತ್ರದ ಕುರಿತು ಕಿಚ್ಚ ಸುದೀಪ್‌ ಮೊದಲ ರಿಯಾಕ್ಷನ್‌! ಕಿಚ್ಚನಿಂದ ಶಾಕಿಂಗ್‌ ಹೇಳಿಕೆ

Kichcha Sudeep: ಬೆದರಿಕೆ ಪತ್ರದ ಕುರಿತು ಕಿಚ್ಚ ಸುದೀಪ್‌ ಮೊದಲ ರಿಯಾಕ್ಷನ್‌! ಕಿಚ್ಚನಿಂದ ಶಾಕಿಂಗ್‌ ಹೇಳಿಕೆ

by Mallika
1 comment
Sandalwood Actor Kichcha Sudeep

Sandalwood Actor Kichcha Sudeep: ಇಂದು ಬೆಳಗ್ಗಿನಿಂದ ಒಂದೇ ನ್ಯೂಸ್‌ ಜನರ ಬಾಯಲ್ಲಿದೆ. ಅದುವೇ ಕಿಚ್ಚ ಸುದೀಪ್‌ ಮಾತು. ಒಂದು ಸುದೀಪ್‌ಗೆ ಬಂದಿರೋ ಬೆದರಿಕೆ ಪತ್ರದ ಕುರಿತು, ಇನ್ನೊಂದು ರಾಜಕೀಯ ಎಂಟ್ರಿ ಕುರಿತು. ಬನ್ನಿ, ಈ ಎರಡು ವಿಷಯದ ಬಗ್ಗೆ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ, ಅದೇನೆಂದು ತಿಳಿಯೋಣ.

ಸ್ಯಾಂಡಲ್‌ವುಡ್‌ ನಟ(Actor) ಕಿಚ್ಚ ಸುದೀಪ್‌ (Kichcha Sudeep) ಅವರಿಗೆ ಬಂದಿರುವ ಬೆದರಿಕೆ ಪತ್ರದ ಕುರಿತು ಸುದೀಪ್‌ ಅವರೇ ಮೊದಲ ಪತ್ರಿಕ್ರಿಯೆ ನೀಡಿದ್ದಾರೆ. ಈ ರೀತಿಯ ಬೆದರಿಕೆ ಪತ್ರ(Threat Letter) ಬಂದಿದೇ ಎಂದು ತಿಳಿದು ಕೆಲಕಾಲ ಸುದೀಪ್‌ ಅಭಿಮಾನಿಗಳಿಗೆ ಆತಂಕ ಸೃಷ್ಟಿ ಆಗಿತ್ತು. ಈಗ ಇದರ ಮುಂದುವರಿದ ಬೆಳವಣಿಗೆಯ ಕುರಿತು ಸ್ಯಾಂಡಲ್‌ವುಡ್‌ ಸ್ಟಾರ್‌ ಕಿಚ್ಚ ಸುದೀಪ್‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಸುದೀಪ್‌ (Sandalwood Actor Kichcha Sudeep) ಅವರು ಜೆಪಿ ನಗರದಲ್ಲಿ ಈ ಹೇಳಿಕೆಯನ್ನು ಕೊಟ್ಟಿದ್ದಾರೆ. ತಮಗೆ ಬಂದಿರುವ ಈ ಬೆದರಿಕೆ ಪತ್ರದ ಕುರಿತು ಮಾತನಾಡಿದ ನಟ, ʼ ಕೆಲವೊಂದು ಮಾತನಾಡೋಕೆ ಆಗುತ್ತದೆ. ಕೆಲವು ಆಗುವುದಿಲ್ಲ. ಇದು ಪಾಲಿಟಿಕ್ಸ್‌ನವರು ಮಾಡಿರುವುದಂತೂ ಅಲ್ಲ. ಇದನ್ನು ಚಿತ್ರರಂಗದವರೇ ಮಾಡಿದ್ದಾರೆ’ ಎಂಬ ಮಾತನ್ನು ಹೇಳಿದ್ದಾರೆ. ಯಾರು ಎಂದು ನನಗೆ ಗೊತ್ತಿದೆ. ಆದರೆ ನಾನು ಈಗ ಸೈಲೆಂಟಾಗಿ ಇರ್ತೀನಿ. ಇದಕ್ಕೆಲ್ಲ ಹೇಗೆ ಉತ್ತರ ಕೊಡಬೇಕು ಎಂಬುವುದು ನನಗೆ ಗೊತ್ತಿದೆ. ಇವೆಲ್ಲ ಕಾನೂನು ಮೂಲಕ ಹೋದರೆ ಉತ್ತಮ ಎಂದು ಸುದೀಪ್‌ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಅವರು ತಮ್ಮ ರಾಜಕೀಯ ನಡೆಯ ಬಗ್ಗೆನೂ ಮಾತನ್ನಾಡಿದ್ದಾರೆ. ನಾನು ಅಭ್ಯರ್ಥಿಯಾಗಿಯಂತೂ ಖಂಡಿತ ಸ್ಪರ್ಧೆ ಮಾಡಲ್ಲ. ಯಾವ ಪಕ್ಷ ಕರೆದರೂ ನಾನು ಹೋಗಿ ಪ್ರಚಾರ ಮಾಡುತ್ತೇನೆ. ಹಾಗಂತ ಪಕ್ಷಕ್ಕೆ ನಾನು ನೇರವಾಗಿ ಸಪೋರ್ಟ್‌ ಮಾಡ್ತೀನಿ ಎಂದು ಅಲ್ಲ ಎಂಬ ಮಾತನ್ನಾಡಿದ್ದಾರೆ.

You may also like

Leave a Comment