Home » Gicchi Giligili Niveditha Gowda : ನನಗೆ ಸಂಬಳ ಸರಿಯಾಗಿ ಸಿಗುತ್ತಿಲ್ಲ, ನಾನು ಬಡವಿ – ನಿವಿಯ ಮನದಾಳದ ಮಾತು!

Gicchi Giligili Niveditha Gowda : ನನಗೆ ಸಂಬಳ ಸರಿಯಾಗಿ ಸಿಗುತ್ತಿಲ್ಲ, ನಾನು ಬಡವಿ – ನಿವಿಯ ಮನದಾಳದ ಮಾತು!

1 comment
Gicchi Giligili Niveditha Gowda

Gicchi Giligili Niveditha Gowda : ನಿವೇದಿತಾ ಗೌಡ (Niveditha ಗ್) ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ಆಗಿ ಬಿಟ್ಟಿದ್ದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಮತ್ತೆ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ (Chandan Shetty)ಅವರ ಜೊತೆಗೆ ಹಸೆಮಣೆ ಏರಿ ಸುಖಿ ಜೀವನ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು, ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ. ನಿವೇದಿತಾ ಸೋಷಿಯಲ್ ಮೀಡಿಯಾಗಳಲ್ಲಿ(Social Media)ಆಗಾಗ ಗ್ಲಾಮರಸ್ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ(Gicchi Giligili Niveditha Gowda) ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದ ಬಾರ್ಬಿ ಗರ್ಲ್ ಇದೀಗ, ಗೂಗಲ್ ನಲ್ಲಿ ತಮ್ಮ ಬಗ್ಗೆ ಹೆಚ್ಚು ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ

ಬಾರ್ಬಿ ಡಾಲ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಾಗದು!!!..ಕನ್ನಡ ಕಿರುತೆರೆ ಖ್ಯಾತಿಯ ನಿವೇದಿತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ (YouTube Channel) ವಿಶೇಷ ವಿಡಿಯೋ (Video)ಅಪ್ಲೋಡ್ ಮಾಡಿದ್ದು, ನಿವಿ ಹೊರಗಡೆ ಎಲ್ಲಿಯೇ ಕಂಡರೂ ಕೂಡ ಜನರು ನಿಮ್ಮ ವಯಸ್ಸು ಎಷ್ಟು? ನಿಮ್ಮ ಗಂಡನ ಹೆಸರೇನು? ನಿವಿ ಮದುವೆ ಆಗಿದ್ದು ಯಾವಾಗ ? ಪ್ರಗ್ನೆಂಟ್ ಆಗಿದ್ದೀರಾ? ಹೀಗೆ ಹತ್ತು ಹಲವು ಪ್ರಶ್ನೆಗಳ ಸುರಿಮಳೆಗೈಯುತ್ತಾರಂತೆ. ಅದಕ್ಕಾಗಿ, ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿರುವ ಪ್ರಶ್ನೆಗಳಿಗೆ ನಿವಿ ಉತ್ತರ ನೀಡಿದ್ದಾರೆ.

ಫೇಮಸ್ ಆಗಿದ್ದು ಹೇಗೆ?
ನಿವೇದಿತಾ ಗೌಡ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಕಾಲೇಜ್‌ನಲ್ಲಿದ್ದಾಗ ತುಂಬಾ ಡಬ್‌ಸ್ಮ್ಯಾಶ್ ಮಾಡುತ್ತಿದ್ದೆ. ಟೈಂ ಪಾಸ್‌ಗೆ ಮಾಡುತ್ತಿದ್ದೆ. ಆದರೆ ಅದರಿಂದ ನನಗೆ ಬಿಗ್ ಬಾಸ್‌ಗೆ ಹೋಗುವ ಅವಕಾಶ ಲಭ್ಯವಾಗಿ ಅಲ್ಲಿಂದ ಫೇಮ್‌ ಬೆಳೆಯುತ್ತಿದೆ.

ನಿವೇದಿತಾ ಏನ್ ಕೆಲಸ ಮಾಡ್ತಾರೆ?
ನಿವಿ ಮೊದಲು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದು, ಅಲ್ಲಿ ಕೆಲಸ ಬಿಟ್ಟ ಬಳಿಕ ಯಾಕೆ ಬಿಟ್ಟೆ ಎಂದು ಹೆಚ್ಚಿನವರು ಪ್ರಶ್ನೆ ಕೇಳಲು ಶುರು ಮಾಡಿದರು. ಸಣ್ಣ ಬ್ರೇಕ್ ನಂತರ ರಿಯಾಲಿಟಿ ಶೋ ಆರಂಭಿಸಿದೆ.

ನಿವೇದಿತಾ ಸಂಭಾವನೆ ಎಷ್ಟು?
ಸರಿಯಾಗಿ ಸಂಬಳ ಹೇಳಲು ಆಗುವುದಿಲ್ಲ. ಏಕೆಂದರೆ ಒಂದು ಸಲ ಜಾಸ್ತಿ ಆಗುತ್ತೆ , ಮತ್ತೊಂದು ಸಲ ಕಡಿಮೆ ಇರುತ್ತೆ.

ನಿವೇದಿತಾ ಶ್ರೀಮಂತೆ?
ನಾನು ಒಂದು ರೀತಿ ಶ್ರೀಮಂತೆ ಒಂದು ರೀತಿ ಬಡವಿ ಎಂಬ ಜಾಣ್ಮೆಯ ನಿವಿ ಉತ್ತರ ನೀಡಿದ್ದಾರೆ.

ನಿವೇದಿತಾ ಹೈಟ್‌ ಎಷ್ಟು?
ನಿವಿ ತಮ್ಮ ಹೈಟ್ ಬಗ್ಗೆ ಮಾಹಿತಿ ನೀಡಿದ್ದು, ತಾನು ತುಂಬಾ ಶಾರ್ಟ್‌ ಇದ್ದು, 5′ 2″ ಅಥವಾ 5′ 3″ ಇರಬಹುದು. ಕ್ಯಾಮೆರಾದಲ್ಲಿ ನಾನು ತುಂಬಾ ಉದ್ದ ಕಾಣಿಸುತ್ತೀನಿ ಆದರೆ ಅಷ್ಟು ಉದ್ದ ಇಲ್ಲ ಎಂದು ಹೇಳಿಕೊಂಡಿದ್ದು, ಪಬ್ಲಿಕ್‌ನಲ್ಲಿ ಜನರು ನನ್ನನ್ನು ನೋಡಿದರೆ ಟಿವಿಯಲ್ಲಿ ಅಷ್ಟು ಉದ್ದ ಇದ್ದೀರಾ ಎದುರು ಇಷ್ಟು ಪುಟ್ಟ ಇದ್ದೀರಾ ಎಂದು ಕೇಳುತ್ತಾರೆ ಎಂದು ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಸೋಲೋ ಟ್ರಿಪ್ ಹೆಸರಲ್ಲಿ ನೆಟ್ಟಿಗರ ಟ್ರೊಲ್ ಗೆ ಒಳಗಾಗಿದ್ದ ನಿವೇದಿತಾ ಮುಟ್ಟಿ ನೋಡಿಕೊಳ್ಳುವ ರೀತಿ ನೆಗೆಟಿವ್ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸಿದ್ದರು. ಈಗ ಮತ್ತೊಮ್ಮೆ ನಿವಿ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ನೀಡಬೇಕೆಂದೇನು ಇಲ್ಲ. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಬೇಸಿಕ್ ಕಾಮನ್ ಸೆನ್ಸ್ ಅನ್ನೋದು ಕೂಡ ಇಲ್ಲ. ನಾವು ಎಲ್ಲಿಗೆ ಪ್ರವಾಸ ಹೋದರು ಕೂಡ ನಮ್ಮ ಫೋಟೋ ತೆಗೆಯಲು ಜನರು ಇರುವುದು ಸಹಜ. ಅವರಿಗೆ ಹಣ ಕೊಟ್ಟರೆ ಫೋಟೋ ಕ್ಲಿಕ್ ಮಾಡುತ್ತಾರೆ. ಆದರೆ, ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲಿಗೆ ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ.

ಗಂಡನ ದುಡ್ಡು ವೇಸ್ಟ್ ಮಾಡುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದವರಿಗೆ ಕೂಡ ಉತ್ತರ ನೀಡಿರುವ ಬಾರ್ಬಿ ಗರ್ಲ್, ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ. ಹಾಗಾಗಿ, ನನ್ನ ದುಡಿಮೆಯಿಂದ ನನ್ನ ಅವಶ್ಯಕತೆಗಳನ್ನು ನಾನೇ ನೋಡಿಕೊಳ್ಳುವ ಸಾಮರ್ಥ್ಯ ನನಗಿದೆ. ಪತಿ ದುಡ್ಡು ವೇಸ್ಟ್‌ ಮಾಡುತ್ತಿರುವೆ ಎಂದು ಕಾಮೆಂಟ್‌ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ . ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್‌ ಸೆಟ್‌ ಜನರಿಗೆ ಇನ್ನೂ ಕೂಡ ಬಂದಿಲ್ವ ಎಂದು ಕೇಳಿ, ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ’ ಎಂದು ನಿವೇದಿತಾ ಹೇಳಿದ್ದಾರೆ.

ನಿವಿ ವಯಸ್ಸು ಎಷ್ಟು?
ಹೆಣ್ಣು ಮಕ್ಕಳು ವಯಸ್ಸು ಹೇಳಬಾರದು ಗಂಡು ಮಕ್ಕಳ ಅವರ ಸಂಬಳ ಹೇಳಬಾರದು ಎನ್ನುವ ಮಾತಿದೆ. ಹೀಗಾಗಿ, ನಾನು ರಿವೀಲ್ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಿವಿ ಪ್ರಗ್ನೆಂಟ್?
ನಾನು ಪ್ರಗ್ನೆಂಟ್ ಅಲ್ಲ. ವರ್ಷದಲ್ಲಿ ಕನಿಷ್ಠ ಎರಡು ಮೂರು ಸಲ ಈ ಬಗ್ಗೆ ಊಹಾಪೋಹ ಹರಿದಾಡಿ, ಗಾಳಿ ಮಾತುಗಳು ಕೇಳಿ ಬರುತ್ತವೆ. ಆದರೆ, ನಿಜಕ್ಕೂ ನಾನು ಪ್ರಗ್ನೆಂಟ್ ಅದಾಗ ಯಾರೂ ನಂಬಲ್ಲ ಎಂದೆನಿಸುತ್ತಿದೆ.ನಾನು ಪ್ರೆಗ್ನೆಂಟ್ ಆದಾಗ ನಾನೇ ಅನೌನ್ಸ್ ಮಾಡುತ್ತೀನಿ ಎಂದು ಹೇಳಿಕೊಂಡಿದ್ದಾರೆ. ಹೀಗೆ ಅನೇಕ ಪ್ರಶ್ನೆಗಳಿಗೆ ಯೂಟ್ಯೂಬ್ ವೀಡಿಯೋ ಮೂಲಕ ಬಾರ್ಬಿ ಡಾಲ್ ಉತ್ತರ ನೀಡಿದ್ದಾರೆ.

 

ಇದನ್ನು ಓದಿ : Transformer wire biting incident: ಪತ್ನಿ ತವರಿಗೆ ಹೋದಳೆಂದು ಕುಡಿದು ಟ್ರಾನ್ಸ್​ಫಾರ್ಮರ್ ಹತ್ತಿ ಹೈ-ಟೆನ್ಷನ್ ತಂತಿ ಕಚ್ಚಿದ ಪತಿರಾಯ! ನಂತರ ಆದದ್ದೇನು ಗೊತ್ತಾ? 

You may also like

Leave a Comment