Mango :ಮಾವು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಮಾವಿನ ಹೆಸರು ಕೇಳಿದರೆ ಸಾಕು ಎಲ್ಲರ ಬಾಯಿಯಲ್ಲಿ ನೀರು ಬರುವುದು ಸಹಜ. ಅದರಲ್ಲಿಯೂ ಈ ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ತಿನ್ನುವ ಮಜವೇ ಬೇರೆ. ಆದರೆ ಹಲವೆಡೆ ಒಳ್ಳೆಯ ಗುಣಮಟ್ಟದ ಮಾವು(Mango) ಸಿಗುವುದು ಅತಿ ವಿರಳವಾಗಿದೆ.
ಆದರೆ ಇನ್ನ ಮುಂದೆ ಈ ಸಮಸ್ಯೆ ಗೆ ಬ್ರೇಕ್ ಬಿದ್ದಿದ್ದು. ಇದೀಗ ಮಾವು ಅಂಚೆಯ ಮೂಲಕ ಮನೆಯ ಬಾಗಿಲಿಗೆ ಬರುತ್ತದೆ. ಹೌದು, ಅಂತಹದ್ದೊಂದು ವ್ಯವಸ್ಥೆಗೆ ಭಾರತೀಯ ಅಂಚೆ ಇಲಾಖೆ ಮುಂದಾಗಿದೆ. ಬುಧವಾರ ಅಂಚೆ ಇಲಾಖೆಯು ನೇರವಾಗಿ ಮಾವಿನ ಹಣ್ಣುಗಳನ್ನು ಬೆಳೆಗಾರರು ಗ್ರಾಹಕರ ಮನೆ ಬಾಗಿಲಿಗೆ ಪೂರೈಸಬಹುದಾದ ಕಾರ್ಯಕ್ಕೆ ಚಾಲನೆ ನೀಡಿದೆ.
ಕರ್ನಾಟಕದ ಬೆಂಗಳೂರಿನ ಯಾವುದೇ ಭಾಗದ ಮನೆಗೂ ಮಾವು ಬಾಗಿಲಿಗೆ ಬರಲಿದೆ. ಕೇವಲ ಗ್ರಾಹಕರು ಆನ್‌ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು, 24 ಗಂಟೆಗಳಲ್ಲಿ ಮಾವು ಮನೆಗೆ ಬಂದು ಸೇರುತ್ತದೆ. ಈ ವಿಚಾರಕ್ಕಾಗಿಯೇ ಕೋಲಾರ ರೈತರು (Farmers) ‘ನಮ್ಮ ತೋಟ’ ಎಂಬ ವೇದಿಕೆಯನ್ನು ರಚಿಸಿಕೊಂಡಿದ್ದಾರೆ. ಮತ್ತು ಇವರು ಅಂಚೆ ಇಲಾಖೆಯ ಸಹಯೋಗವನ್ನು ಪಡೆದು ಕೊಂಡು ಗ್ರಾಹಕರ ಮನೆಯ ಬಾಗಿಲಿಗೆ ಪೂರೈಸುತ್ತಾರೆ. ನೀವೇನಾದರೂ ಮಾವು ಬುಕ್ ಮಾಡುವುದಾದರೆ ಕನಿಷ್ಠ ಒಂದು ಬಾಕ್ಸ್ ಮಾವನ್ನು ಖರೀದಿಸಬೇಕು. ಒಂದು ಬಾಕ್ಸ್ ನಲ್ಲಿ ಮೂರು ಕೆ. ಜಿ ಹಣ್ಣು ಇರುತ್ತದೆ. ಕೇಸರ್, ಬಾದಾಮಿ, ಆಲ್ಫಾನ್ಸ್ ರಸಪುರಿ ಸೇರಿದಂತೆ ಇನ್ನೂ ವಿವಿದ ಬಗೆಯ ಮಾವು ದೊರೆಯಲಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರು ಬೆಳೆದ ಮಾವು ನೇರವಾಗಿ ಗ್ರಾಹಕರಿಗೆ ಸಿಗಲಿದೆ.
ಇವುಗಳಿಂದ ಗ್ರಾಹಕರಿಗೆ ಯಾವುದೇ ರೀತಿಯ ರಾಸಾಯನಿಕ ಬಳಸದ ಮಾವಿನ ಹಣ್ಣು ಗ್ರಾಹಕರ ಮನೆಗೆ ತಲುಪಲಿದೆ. ಅಂಚೆ ಇಲಾಖೆಯು ಕೋವಿಡ್ ಸಂದರ್ಭದಲ್ಲಿಯೂ ಆನ್ ಲೈನ್ ಮೂಲಕ ಸುಮಾರು 100 ಕ್ವಿಂಟಾಲ್ ನಷ್ಟು ಹಣ್ಣನ್ನು ಮಾರಾಟ ಮಾಡಿದ್ದರು. ಆದರೆ ಈ ಬಾರಿ ಇನ್ನೂ ಹೆಚ್ಚು ಹಣ್ಣನ್ನು ಮಾರಾಟ ಮಾಡಲು ಪಣ ತೊಟ್ಟಿದ್ದಾರೆ. ಇದಕ್ಕೆ ಕರ್ನಾಟಕ ಮಾವು ಮಾರಾಟ ಮತ್ತು ಅಭಿವೃದ್ಧಿ ನಿಗಮದ ಸಹಾಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ಎಲ್ಲಾ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ.
ನೀವು ಈ ವೆಬ್ಸೈಟ್ ನ ಮೂಲಕ ಸಂಪರ್ಕಿಸಬಹುದಾಗಿದೆ.
https://www.kolarmangoes.com
ಈ ಮೊಬೈಲ್ ನಂಬರ್ ಮೂಲಕವು ಸಂಪರ್ಕಿಸಬಹುದು.
9886116046.
