Home » JDS Family Fight: ಪತ್ನಿ ಭವಾನಿಗೆ ಟಿಕೆಟ್ ಕೊಡಿಸಲು ಅಂತಿಮ ದಾಳ ಪ್ರಯೋಗಿಸಿದ ಹೆಚ್ ಡಿ ರೇವಣ್ಣ

JDS Family Fight: ಪತ್ನಿ ಭವಾನಿಗೆ ಟಿಕೆಟ್ ಕೊಡಿಸಲು ಅಂತಿಮ ದಾಳ ಪ್ರಯೋಗಿಸಿದ ಹೆಚ್ ಡಿ ರೇವಣ್ಣ

1 comment
JDS Family Fight

JDS Family Fight: ಹಾಸನ ಜೆಡಿಎಸ್ ಟಿಕೆಟ್ ವಿಷಯ ರಾಜ್ಯದಲ್ಲೇ ಹೆಚ್ಚು ಚರ್ಚೆಯಾಗುತ್ತಿದ್ದು, ಹಾಸನ (Hassan Politics) ರಾಜಕೀಯದಲ್ಲಿ ಹೆಚ್ ಡಿ ಕೆ ಹಸ್ತಕ್ಷೇಪ ಮಿತಿ ಮೀರಿದೆ. ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ಪತ್ನಿಯ ಪರವಾಗಿ ಹೆಚ್ ಡಿ ರೇವಣ್ಣ ( H D Revanna)ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಅಂತಿಮ ದಾಳ ಉರುಳಿಸಿದ್ದಾರೆ.

ಒಂದು ವೇಳೆ ತಮ್ಮ ಬೇಡಿಕೆ ಈಡೇರದೇ ಇದ್ದರೆ ಭವಾನಿ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬ ಬೆದರಿಕೆಯನ್ನು ರೇವಣ್ಣ ಹಾಕಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ತಲೆನೋವು ಶುರುವಾಗಿದೆ. ರೇವಣ್ಣ ಪತ್ನಿ ಭವಾನಿಯವರಿಗೆ ಹಾಸನದಲ್ಲಿ ಜೆಡಿಎಸ್ ಟಿಕೆಟ್ ನೀಡಬೇಕು ಎನ್ನುವ ವಿಚಾರದಲ್ಲಿ ಕುಮಾರಸ್ವಾಮಿಯವರು ಅಡ್ಡಗಾಲು ಹಾಕುತ್ತಿದ್ದಾರೆ. ಹಾಸನ ಟಿಕೆಟ್ ನ್ನು ಸಾಮಾನ್ಯ ಕಾರ್ಯಕರ್ತರಿಗೆ ನೀಡಬೇಕು ಎನ್ನುವುದು ಅವರ ಇರಾದೆ. ಈ ನಿಟ್ಟಿನಲ್ಲಿ ಹಲವು ಬಾರಿ ಮಾತುಕತೆಗಳು ನಡೆದಿದ್ದು ಕುಮಾರಸ್ವಾಮಿ ತಮ್ಮ ಪಟ್ಟು ಸಡಿಲಿಸಿಲ್ಲ. ಕೆಲ ದಿನಗಳ ಹಿಂದೆ ಎಚ್ ಡಿ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯ ಮಧ್ಯದಲ್ಲಿ ರೇವಣ್ಣ ಮತ್ತು ಪತ್ನಿ ಭವಾನಿಯವರು ಮಾತುಕತೆಯ ಮದ್ಯೆಯೇ ಅಸಮಾಧಾನಗೊಂಡು (JDS Family Fight) ಹೊರ ನಡೆದಿದ್ದರು.

ತಮ್ಮ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ನೀಡದೇ ಇದ್ದಲ್ಲಿ, ಕೊನೆಯ ಅಸ್ತ್ರವಾಗಿ ರೇವಣ್ಣ ದಂಪತಿ, ಹಾಸನ ಹಾಗೂ ಹೊಳೆನರಸಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ ಹಾಸನ ಕ್ಷೇತ್ರದ ಟಿಕೆಟ್ ನ್ನು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ರೇವಣ್ಣ ದೇವೇಗೌಡರ ಜತೆ ನಡೆದ ಮಾತುಕತೆಯಲ್ಲಿ ಬದಲಾಗಿ ಪಕ್ಷದ ವಿವಿಧ ಹಂತಗಳ ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಿದ್ದು, ಭವಾನಿಗೆ ಟಿಕೆಟ್ ನೀಡದೇ ಇದ್ದರೆ ಕೈಗೊಳ್ಳಬೇಕಿರುವ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಹಾಸನದ ಹಲವು ಹಿರಿಯ ನಾಯಕರು ರೇವಣ್ಣಗೆ, ರೇವಣ್ಣ ಹಾಗೂ ಭವಾನಿಗೆ ಪಕ್ಷೇತರರಾಗಿಯೇ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ.

You may also like

Leave a Comment