Actress Haripriya: ಸ್ಯಾಂಡಲ್‌ವುಡ್‌ನ (sandalwood) ತಾರಾ ಜೋಡಿಯಾದ ವಸಿಷ್ಠ ಸಿಂಹ (Vasishta N. Simha) ಮತ್ತು ಹರಿಪ್ರಿಯ ಅವರು ತಮ್ಮ ವೈವಾಹಿಕ ಜೀವನಕ್ಕೆ ಹೆಜ್ಜೆ ಕಾಲಿಟ್ಟಿದ್ದು, ಇಬ್ಬರು ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದು, ಸದ್ಯ ಸುಖಿ ಸಂಸಾರ ನಡೆಸುತ್ತಿದ್ದಾರೆ. ಮದುವೆ ಬಳಿಕವಂತೂ ಇವರಿಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿಯೂ ನಟಿ ತಮ್ಮ ಫಸ್ಟ್ ಕಿಸ್ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆಯೂ ಯುಟ್ಯೂಬ್ (YouTube) ಆರಂಭಿಸುವುದಾಗಿ ತಿಳಿಸಿ ಸುದ್ದಿಯಲ್ಲಿದ್ದರು. ಹೌದು, ಹರಿಪ್ರಿಯಾ (Actress Haripriya) ಎಲ್ಲೇ ಹೋದ್ರೂ, ಬಂದ್ರು ಎಲ್ಲರೂ ಯೂಟ್ಯೂಬ್ ಚಾನೆಲ್ ಯಾವಾಗ ಪ್ರಾರಂಭ ಮಾಡ್ತೀರಿ ಎಂದು ಕೇಳ್ತಾ ಇದ್ದರಂತೆ. ಹಾಗಾಗಿ ನಟಿ ಆದಷ್ಟು ಬೇಗ ಯೂಟ್ಯೂಬ್ ಚಾನೆಲ್ ಓಪನ್ ಮಾಡುವುದಾಗಿ ಹೇಳಿದ್ದು, ಹೊಸ ಪ್ರಯತ್ನಕ್ಕೆ ನಟಿ ಹೆಜ್ಜೆ ಇಟ್ಟಿದ್ದು, ಯೂಟ್ಯೂಬ್ ಚಾನೆಲ್ (haripriya youtube channel) ಶುರು ಮಾಡೇ ಬಿಟ್ಟರು.
ಇತ್ತೀಚಿಗಷ್ಟೇ ಯುಟ್ಯೂಬ್ ವಿಡಿಯೋ ಪ್ರೋಮೋ ಕೂಡ ರಿಲೀಸ್ ಮಾಡಿದ್ದು, ಚಾನೆಲ್ ಬಗ್ಗೆ ಮಾಹಿತಿ ನೀಡಿದ್ದಾರೆ. “ಇಂದಿನ ದಿನದಲ್ಲಿ ಯೂಟ್ಯೂಬ್ ಟ್ರೆಂಡ್ ಆಗಿದ್ದು, ಇದೀಗ ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಉತ್ತಮ ಮಾಹಿತಿ ಜೊತೆಗೆ ಜನರಿಗೆ ಮನರಂಜನೆ ನೀಡುತ್ತೇನೆ. ಇದು ಇನ್ಫೋಟೈನ್ಮೆಂಟ್ ಚಾನೆಲ್ ”ಎಂದು ನಟಿ ಹರಿಪ್ರಿಯಾ ಹೇಳಿದ್ದಾರೆ.
ಮೊದಲ ವಿಡಿಯೋ ಜೊತೆಗೆ ಶೀಘ್ರದಲ್ಲೇ ನಿಮ್ಮ ಮುಂದೆ ಬರುವುದಾಗಿ ನಟಿ ಹೇಳಿದ್ದು, ತನ್ನ ಯೂಟ್ಯೂಬ್ ಚಾನೆಲ್ ಮೊದಲ ವಿಡಿಯೋದಲ್ಲಿ ನಟಿ ಹರಿಪ್ರಿಯಾ ತನ್ನ ಜೀವನದಲ್ಲಿ ಯಾರಿಗೂ ತಿಳಿಯದ 12 ವಿಷಯಗಳ ಬಗ್ಗೆ ಮಾತನಾಡಲಿದ್ದಾರಂತೆ.
ಅಲ್ಲದೆ, ವಿಡಿಯೋ ಪ್ರೋಮೋದಲ್ಲಿ ನಟಿ ಸಿನಿಮಾ ಇಂಡಸ್ಟ್ರಿಗೆ ಅತಿ ಸಣ್ಣ ವಯಸ್ಸಾದ 16ನೇ ವಯಸ್ಸಿನಲ್ಲೇ ಕಾಲಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಫಸ್ಟ್ ಕಿಸ್ ಬಗ್ಗೆ ಮಾತಾಡಿದ ನಟಿ ಹರಿಪ್ರಿಯಾ, ನನ್ನ ಫಸ್ಟ್ ಕಿಸ್ ಬಗ್ಗೆ ತಿಳಿಯಲು ಎಲ್ಲರಿಗೂ ಭಾರೀ ಕುತೂಹಲವಿದೆ ಅಲ್ವಾ!! ಎಂದೆನ್ನುತ್ತಾ ನಾಚಿ ನೀರಾದರು. ಅಲ್ಲದೆ, ನನಗೆ ಕಂಫರ್ಟ್ ಫೀಲ್ ಇರಲಿಲ್ಲ ಎಂದು ಹೇಳಿದರು.
ಇದು ಪ್ರೋಮೋ ಆಗಿದ್ದು, 12 ಸೀಕ್ರೆಟ್ ವಿಚಾರಗಳನ್ನು ತಿಳಿದುಕೊಳ್ಳಲು ಸಂಪೂರ್ಣ ವಿಡಿಯೋಗಾಗಿ ಕಾಯಲೇಬೇಕಿದೆ.
ಶೀಘ್ರದಲ್ಲೇ ವಿಡಿಯೋ ಕೂಡ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ಜನಮನ ಗೆದ್ದು, ಸೈ ಎನಿಸಿರುವ ನಟಿ ಯುಟ್ಯೂಬ್ ನಲ್ಲೂ ಯಶಸ್ಸು ಗಳಿಸುತ್ತಾರಾ ಎಂದು ಕಾದು ನೋಡಬೇಕಿದೆ. ಅಲ್ಲದೆ, ಸಿನಿರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ನಟಿ ಮದುವೆ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆಯೂ ಮಾಹಿತಿಗಾಗಿ ಕಾಯಬೇಕಿದೆ.
ಇದನ್ನೂ ಓದಿ: Kantara Film : ಮನೆ ಮನೆಗೆ ಬರುತ್ತಿದೆ ತುಳುವಿನ ‘ಕಾಂತಾರ’ ! ಹೊಸ ವರ್ಷಕ್ಕೆ ಸಿಹಿ ಸುದ್ದಿ!
