Home » ಮಂಗಳೂರು : ಅಂಗಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ವ್ಯಕ್ತಿ!

ಮಂಗಳೂರು : ಅಂಗಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ವ್ಯಕ್ತಿ!

1 comment

Mangaluru: ಇಲ್ಲಿನ (mangaluru) ಉಳ್ಳಾಲದಲ್ಲಿ ಅಂಗಡಿ ಮಾಲಿಕನೋರ್ವ ನೇಣು ಬಿಗಿದು ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ಇಂದು (ಎ.10) ಬೆಳಕಿಗೆ ಬಂದಿದೆ.

ಮೃತನನ್ನು ಪ್ರವೀಣ್ ಆಳ್ವ (45) ಎಂದು ಗುರುತಿಸಲಾಗಿದ್ದು, ಈತ
ಸೇವಂತಿಗುಡ್ಡೆ ನಿವಾಸಿ, ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಈತ ಉಳ್ಳಾಲದಲ್ಲಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಹೊಲಿಗೆ ಸಂಬಂಧಿತ ಮಳಿಗೆಯೊಂದರ ಮಾಲಕನಾಗಿದ್ದು, ಪ್ರವೀಣ್ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರವೀಣ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇಂದು ಬೆಳಗ್ಗೆ ಎಂದಿನಂತೆ 6.30ಕ್ಕೆ ಮನೆಯಿಂದ ತನ್ನ ಅಂಗಡಿಗೆ ಹೊರಟಿದ್ದು, ಅಲ್ಲಿಗೆ ತಲುಪಿ, ಅಂಗಡಿಯೊಳಗೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಪತ್ರ ಬರೆದು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಮೃತರು ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದು, ಸದ್ಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment