Home » Earth Viral Video : ಭೂಮಿ ಉಸಿರಾಡುತ್ತೆ ಎಂಬುದುಕ್ಕೆ ಇಲ್ಲಿದೆ ನಿದರ್ಶನ! ವೀಡಿಯೋ ವೈರಲ್‌

Earth Viral Video : ಭೂಮಿ ಉಸಿರಾಡುತ್ತೆ ಎಂಬುದುಕ್ಕೆ ಇಲ್ಲಿದೆ ನಿದರ್ಶನ! ವೀಡಿಯೋ ವೈರಲ್‌

1 comment
Earth Viral Video

Earth Viral Video : ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಆದರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗೆ ಮಾಡಿದ ಪ್ರಯತ್ನಗಳಲ್ಲಿ ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ.

ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಪ್ರಪಂಚದ ಎಲ್ಲಾ ಜೀವಿಗಳು ಉಸಿರಾಡುವುದು ಸಹಜ ಕ್ರಿಯೆ. ಆದರೆ ಭೂಮಿಯು ಉಸಿರಾಡುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ? ಅಥವಾ ಓದಿದ್ದೀರಾ? ಇದನ್ನು ಈಗ ನಿಮ್ಮ ಕಣ್ಣಿನಿಂದಲೇ ನೋಡಿ .

ಈ ಪ್ರಪಂಚದಲ್ಲಿ ನಾನಾ ರೀತಿಯ ವಿಸ್ಮಯಗಳು ನಡೆಯುತ್ತವೆ. ಪ್ರತಿ ಯೊಂದು ವಿಸ್ಮಯಕ್ಕೂ ನಾವು ಸಾಕ್ಷಿಯಾಗಲು ಸಾಧ್ಯವಿಲ್ಲ. ಇವುಗಳಲ್ಲಿ ಹೆಚ್ಚಿನ ಘಟನೆಗಳನ್ನು ವಿಡಿಯೋ ಮೂಲಕ ನೋಡುವುದು ಸಾಧ್ಯವಾಗುತ್ತದೆ. ಅದೇ ರೀತಿ ಭೂಮಿ ಉಸಿರಾಡುತ್ತಿರುವ ವಿಡಿಯೋ (Earth Viral Video) ಕೂಡಾ ಸಾಮಾಜಿಕ ಜಾಲತಾಣ ದಲ್ಲಿ (social media ) ವೈರಲ್ ಆಗಿದೆ.

ವೀಡಿಯೊದಲ್ಲಿ, ಸುತ್ತಲೂ ಹಸಿರು ಕಾನನದ ದೃಶ್ಯವನ್ನು ಕಾಣಬಹುದು. ಇಲ್ಲಿ ನಿರ್ದಿಷ್ಟ ಭೂಪ್ರದೇಶ ಮಾತ್ರ ಮೇಲಕ್ಕೆ ಏರುವುದು ಮತ್ತು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಬಹುದು. ಇದು ಸಾಮಾನ್ಯ ಉಸಿರಾಟ ಪ್ರಕ್ರಿಯೆಯಂತೆ ಕಂಡು ಬರುತ್ತದೆ.

ಈ ವಿಡಿಯೋವನ್ನು ಅಮೇಜಿಂಗ್ ನೇಚರ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಈ ವಿಡಿಯೋವನ್ನು ಕೆನಡಾದ ಕ್ವಿಬೆಕ್‌ನಲ್ಲಿ ತೆಗೆಯಲಾಗಿದೆ. ಇಲ್ಲಿ ಭೂಮಿ ಉಸಿರಾಡುತ್ತಿಲ್ಲ. ಬದಲಿಗೆ ಬೀಸುತ್ತಿರುವ ಬಿರು ಗಾಳಿಗೆ ಮರಗಳು ಉರುಳುತ್ತಿವೆ. ಆ ಸಂದರ್ಭದಲ್ಲಿ ಮರದ ಬೇರುಗಳು ಹೊರ ಬರುತ್ತಿವೆ.

ಭೂಮಿ ಉಸಿರಾಡುತ್ತಿದೆ ಎಂದು ನೀವು ಕೂಡಾ ಭಾವಿಸುತ್ತಿದ್ದರೆ, ಈ ವಿಡಿಯೋ ಕೆಳಗಿರುವ ಕಮೆಂಟ್ ಬಾಕ್ಸ್ ಅನ್ನು ಒಮ್ಮೆ ನೋಡಿದಾಗ ನಿಮಗೆ ಅರ್ಥವಾಗುತ್ತದೆ.

 

 

 

ಇದನ್ನು ಓದಿ : Alcohol: ಮದ್ಯಪಾನ ಮಾಡುವಾಗ ನೆಂಚಿಕೊಳ್ಳಲು ಸೈಡ್ಸ್ ಯೂಸ್ ಮಾಡ್ತೀರಾ? ಹಾಗಿದ್ರೆ ಅಪ್ಪಿತಪ್ಪಿನೂ ಈ ಪದಾರ್ಥಗಳನ್ನು ನೆಂಚಿಕೊಳ್ಳಬೇಡಿ!

You may also like

Leave a Comment