Home » Uttar Pradesh: ಇಲಿ ಕೊಂದದ್ದಕ್ಕೆ ಜೈಲು ಪಾಲಾದ ವ್ಯಕ್ತಿ ; ಆರೋಪಿಯ ವಿರುದ್ಧ ಬಿತ್ತು 30 ಪುಟಗಳ ಚಾರ್ಜ್​ ಶೀಟ್!!

Uttar Pradesh: ಇಲಿ ಕೊಂದದ್ದಕ್ಕೆ ಜೈಲು ಪಾಲಾದ ವ್ಯಕ್ತಿ ; ಆರೋಪಿಯ ವಿರುದ್ಧ ಬಿತ್ತು 30 ಪುಟಗಳ ಚಾರ್ಜ್​ ಶೀಟ್!!

0 comments
Rat murder case

Rat murder case : ಮನೆಯಲ್ಲಿ ಇಲಿಗಳು (rat) ಇರೋದು ಸಾಮಾನ್ಯ. ಅದಕ್ಕೆಂದೇ ಎಷ್ಟೋ ಜನರು ಬೆಕ್ಕು (cat) ಸಾಕಿರುತ್ತಾರೆ. ಇನ್ನು ಕೆಲವರು ಇಲಿ ಹಿಡಿಯೋಕೆ ಬೋನ್, ಇಲಿ ಪಾಷಾಣ ಎಂದೆಲ್ಲಾ ಟ್ರಿಕ್ ಬಳಸಿ ಇಲಿಗಳನ್ನು ಕೊಲ್ಲುತ್ತಾರೆ. ಆದರೆ, ಇಲ್ಲೊಬ್ಬ ಇಲಿಯನ್ನು ಕೊಂದಿದ್ದಕ್ಕೆ ಆತನ ಮೇಲೆ ಇಲಿ ಕೊಂದ ಆರೋಪದಡಿ 30 ಪುಟದ ಚಾರ್ಜ್​ ಶೀಟ್​​​​ ದಾಖಲಿಸಲಾಗಿದೆ. ಸದ್ಯ ಈ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

ಉತ್ತರಪ್ರದೇಶದ ಬದೌನ್ ಜಿಲ್ಲೆಯ ಮನೋಜ್ ಕುಮಾರ್ ಎಂಬಾತ ನವೆಂಬರ್ 25, 2022 ರಂದು ಇಲಿಯ ಬಾಲಕ್ಕೆ ಇಟ್ಟಿಗೆಯನ್ನು ಕಟ್ಟಿ, ಅದನ್ನು ಎಳೆದೊಯ್ದು ಚರಂಡಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಭೀಕರವಾಗಿ ಕೊಂದಿದ್ದಾನೆ (Rat murder case). ಈ ಬಗ್ಗೆ ಮನೋಜ್ ವಿರುದ್ದ ಪ್ರಾಣಿ ಹಕ್ಕು ಕಾರ್ಯಕರ್ತ ವಿಕೇಂದ್ರ ಶರ್ಮಾ ಅವರು ದೂರು ನೀಡಿದ್ದು, ದೂರನ್ನು ಸ್ವೀಕರಿಸಿದ ಸದರ್ ಕೊತ್ವಾಲಿ ಪೊಲೀಸರು ಇಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅದರ ವರದಿಯ ಆದರದ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ನನ್ನು ಆರೋಪಿಯೆಂದು ಘೋಷಿಸಿ, ಪೊಲೀಸರು ಏಪ್ರಿಲ್ 10 ರಂದು ಪ್ರಾಣಿ ಹಿಂಸೆ ಕಾಯಿದೆಯಡಿಯಲ್ಲಿ 30 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ಕೋರ್ಟ್ ಅಂಗೀಕರಿಸಿದ್ದು, ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಅಲ್ಲದೆ, ಪ್ರಾಣಿ ಹಕ್ಕು ಕಾರ್ಯಕರ್ತ ವಿಕೇಂದ್ರ ಅವರು ಆರೋಪಿ ಇಲಿಯನ್ನು ಹಿಂಸಿಸಿ ಕೊಂದಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ ಈ ರೀತಿ ಪ್ರಾಣಿಗಳಿಗೆ ಹಿಂಸೆ ನೀಡುವವರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಇಂತಹ ಕಾರ್ಯ ಮಾಡುವವರಿಗೆ ಇದು ಪಾಠವಾಗಲಿ” ಎಂದು ವಿಕೇಂದ್ರ ಶರ್ಮಾ ಹೇಳಿದ್ದಾರೆ.

 

ಇದನ್ನು ಓದಿ : S.Angara Resign: ಸಿಗದ ಅವಕಾಶ, ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಎಸ್.ಅಂಗಾರ | ಮೂರುವರೇ ದಶಕಗಳ ಕಾಲ ಬೆಂಬಲಿಸಿದ ಕಾರ್ಯಕರ್ತರಿಗೆ ಕೊಟ್ಟ ಸಂದೇಶವೇನು ? 

You may also like

Leave a Comment