Home » Actress Kushboo Divorce : ಜೀವಕ್ಕೆ ಜೀವದಂತೆ ಪ್ರೀತಿಸುತ್ತಿದ್ದ ಖುಷ್ಬು- ಪ್ರಭು ಮದುವೆ ಮುರಿದು ಬಿದ್ದಿದ್ಯಾಕೆ? ಇಲ್ಲಿದೆ ರೋಚಕ ಕಹಾನಿ

Actress Kushboo Divorce : ಜೀವಕ್ಕೆ ಜೀವದಂತೆ ಪ್ರೀತಿಸುತ್ತಿದ್ದ ಖುಷ್ಬು- ಪ್ರಭು ಮದುವೆ ಮುರಿದು ಬಿದ್ದಿದ್ಯಾಕೆ? ಇಲ್ಲಿದೆ ರೋಚಕ ಕಹಾನಿ

1 comment
Actress Kushboo Divorce

Actress Kushboo Divorce : ರವಿಚಂದ್ರನ್ ನಿರ್ದೇಶಿಸಿ ನಟಿಸಿದ ‘ರಣಧೀರ’ ಸಿನಿಮಾದ ಮೂಲಕ ಖುಷ್ಬೂ ಸ್ಯಾಂಡಲ್‌ವುಡ್ಗೆ(Sandalwood) ಪಾದಾರ್ಪಣೆ ಮಾಡಿದ್ದಾರೆ. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಖುಷ್ಬು (Kushboo)ಕನ್ನಡ ಸಿನಿರಸಿಕರಿಗೂ ಚಿರಪರಿಚಿತರಾಗಿದ್ದಾರೆ. ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮುಂದೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖುಷ್ಬು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ.

1991ರಲ್ಲಿ ಪ್ರಭು ಹಾಗೂ ಖುಷ್ಬು ನಟಿಸಿದ ‘ಚಿನ್ನ ತಂಬಿ’ ಸಿನಿಮಾ ಹಿಟ್ ಆಗಿದ್ದು, ಇದೇ ಚಿತ್ರವನ್ನು ಕನ್ನಡದಲ್ಲಿ ರವಿಚಂದ್ರನ್ ‘ರಾಮಾಚಾರಿ’ ಹೆಸರಿನಲ್ಲಿ ರೀಮೆಕ್ ಮಾಡಲಾಗಿದೆ. ಪಿ. ವಾಸು ನಿರ್ದೇಶನದ ‘ಚಿನ್ನ ತಂಬಿ’ ಸಿನಿಮಾ ಇದೀಗ 32 ವರ್ಷ ಪೂರೈಸಿದ್ದಾರೆ. ಈ ಸಂಭ್ರಮವನ್ನು ಖುಷ್ಬು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.32 ವರ್ಷಗಳ ಬಳಿಕ ಮತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಖುಷ್ಬು ನಟಿಸ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ಥ್ರಿಲ್ಲರ್ ಚಿತ್ರಕ್ಕಾಗಿ ಖುಷ್ಬು ಜೊತೆ ಚರ್ಚಿಸಿದ್ದಾರಂತೆ. ರವಿಚಂದ್ರನ್- ಖುಷ್ಬು ಜೋಡಿ ಮತ್ತೆ ನಟಿಸುವ ಸುಳಿವು ನೀಡಿದ್ದಾರೆ.

ಈ ಹಿಂದೆ ಆಂಗ್ಲ ಪತ್ರಿಕೆಯೊಂದರಲ್ಲಿ ನೀಡಿದ್ದ ಸಂದರ್ಶನದ ಸಂದರ್ಭ ನಟಿ ಖುಷ್ಬು, ಪ್ರಭು ಜೊತೆಗಿನ ರಿಲೇಷನ್‌ಶಿಪ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. “ಪ್ರಭು ಜೊತೆ ಖುಷ್ಬು ಅವರು 4 ವರ್ಷ ರಿಲೇಷನ್‌ಶಿಪ್‌ನಲ್ಲಿ. 1993ರಲ್ಲಿ ಚೆನ್ನೈನ ಪೋಯೆಸ್ ಗಾರ್ಡನ್‌ನಲ್ಲಿರುವ ಪ್ರಭು ಅವರ ಮನೆಯಲ್ಲೇ ಖುಷ್ಬು ಅವರ ಮದುವೆ ನಡೆದಿತ್ತಂತೆ. ಇದಕ್ಕೂ ಮೊದಲೇ ಪ್ರಭು ಅವರಿಗೆ ಒಂದು ಮದುವೆ ಆಗಿದ್ದರಿಂದ ಅವರ ಅಪ್ಪ ಶಿವಾಜಿ ಗಣೇಶನ್ ಅವರು ಈ ಮದುವೆಗೆ ವಿರೋಧ ಧೋರಣೆ ತೋರಿದರಂತೆ. ಈ ಸಂದರ್ಭ ಮೊದಲ ಪತ್ನಿ ಜೊತೆಗೂ ಸಂಘರ್ಷ ಉಂಟಾಗಿತ್ತು ಎನ್ನಲಾಗಿದೆ. ಜೀವಕ್ಕೆ ಜೀವದಂತೆ ಪ್ರೀತಿಸುತ್ತಿದ್ದ ಖುಷ್ಬು- ಪ್ರಭು ಮದುವೆ ಮುರಿದು ಬೀಳುವ ಸ್ಥಿತಿ ನಿರ್ಮಾಣವಾಯಿತು. ಕೇವಲ ನಾಲ್ಕು ತಿಂಗಳಲ್ಲೇ ಖುಷ್ಬು ಅವರು ಪ್ರಭು ಅವರ ಮದುವೆ ಮುರಿದು ಬೀಳುವ(Actress Kushboo Divorce) ಹಾಗೆ ಆಗಿ, ದೂರಾಗುವ ಪರಿಸ್ಥಿತಿ ಎದುರಾಯಿತು ಎಂದು ಹೇಳಿಕೊಂಡಿದ್ದರು. ಇದೆಲ್ಲದರ ನಡುವೆ ತೆಲುಗಿನ ಹಿರಿಯ ನಟಿ ಕಾಕಿನಾಡ ಶ್ಯಾಮಲಾ ಅವರು ಹೇಳಿಕೆ ನೀಡಿದ್ದಾರೆ.

ಖುಷ್ಬೂ ತುಂಬಾ ಒಳ್ಳೆಯ ಹುಡುಗಿಯಾಗಿದ್ದು, ಪ್ರಭು ಅವರನ್ನು ತುಂಬಾ ಹಚ್ಚಿಕೊಂಡು ತುಂಬಾ ಗಾಢ ವಾಗಿ ಪ್ರೀತಿಸುತ್ತಿದ್ದಳು. ಇಬ್ಬರು ಒಂದೇ ಜೀವ( Love Story)ಎನ್ನುವ ಹಾಗೇ ಇದ್ದರು. ಇದರಿಂದಾಗಿಯೇ ಪ್ರಭು ಅವರಿಗೆ ಮೊದಲೇ ಮದುವೆಯಾಗಿದ್ದರು ಕೂಡ ಖುಷ್ಬು ಎರಡನೇ ಮದುವೆ ಆಗಿದ್ದರು. ಆದರೆ ಪ್ರಭು ಮನೆಯಲ್ಲಿ ಗಲಾಟೆ ಆದ ಪರಿಣಾಮ ಪ್ರೇಮ ಪಕ್ಷಿಗಳು ದೂರಾಗುವ ಹಾಗೆ ಆಯಿತು ಎಂಬ ಮಾಹಿತಿಯನ್ನು ಕಾಕಿನಾಡ ಶ್ಯಾಮಲಾ ಅವರು ಹೇಳಿಕೊಂಡಿದ್ದಾರೆ.

ಆ ಬಳಿಕ, ಖುಷ್ಬೂ ಅವರು, 2000ರಲ್ಲಿ ನಿರ್ದೇಶಕ ನಟ ಸಿ. ಸುಂದರ್ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ವರ್ಷ ‘ಆಡುವಾರ್ಲು ಮೀಕು ಜೋಹಾರ್ಲು’ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಕಿರುತೆರೆಯ ‘ಜಬರ್ದಸ್ತ್‌’ ಕಾಮಿಡಿ ಶೋ ಜಡ್ಜ್ ಆಗಿಯೂ ಮಿಂಚುತ್ತಿದ್ದಾರೆ. ‘ಅಂಜದ ಗಂಡು’, ‘ಯುಗಪುರುಷ’ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ಜೊತೆಗೆ ತೆರೆ ಮೇಲೆ ರಂಜಿಸಿದ್ದಾರೆ. ರವಿಚಂದ್ರನ್ ನಿರ್ದೇಶನದ ‘ಶಾಂತಿ ಕ್ರಾಂತಿ’ ಚಿತ್ರದಲ್ಲಿಯು ನೋಡುಗರ ಕಣ್ಮನ ಸೆಳೆದಿದ್ದಾರೆ.ಸದ್ಯ ಬಿಜೆಪಿ ಪಕ್ಷದಲ್ಲಿಯೂ ಕೂಡ ನಟಿ ಖುಷ್ಬು ಗುರುತಿಸಿಕೊಂಡಿದ್ದಾರೆ. ಸದ್ಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಇದನ್ನು ಓದಿ : Flight : ಯಾವುದೇ ಕಾರಣಕ್ಕೂ ವಿಮಾನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

You may also like

Leave a Comment