Home » BIGG NEWS : ವಿದ್ಯಾರ್ಥಿಗಳೇ ಗಮನಿಸಿ, 5 ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಫೇಲಾದ್ರೆ ಇರಲಿದೆ ಪೂರಕ ಪರೀಕ್ಷೆ!!

BIGG NEWS : ವಿದ್ಯಾರ್ಥಿಗಳೇ ಗಮನಿಸಿ, 5 ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಫೇಲಾದ್ರೆ ಇರಲಿದೆ ಪೂರಕ ಪರೀಕ್ಷೆ!!

0 comments
5th and 8th class supplementary

5th and 8th Supplementary Exam: ವಿದ್ಯಾರ್ಥಿಗಳಿಗೆ (students) ಮಹತ್ವದ ಮಾಹಿತಿ (BIGG NEWS) ಇಲ್ಲಿದೆ. ಮುಂಬರುವ 2023-24 ನೇ ಸಾಲಿನಿಂದ 5 ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ (5th and 8th board exam) ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ. ಶಿಕ್ಷಣ ಇಲಾಖೆಯು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಎಸ್ಎಸ್ಎಲ್ ಸಿ (SSLC) ಮಾದರಿಯಲ್ಲಿ ಪೂರಕ ಪರೀಕ್ಷೆ (5th and 8th Supplementary Exam) ನಡೆಸಲಿದೆ.

ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಿದ್ದು, ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡಬಾರದು ಎಂದು ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಪೂರಕ ಪರೀಕ್ಷೆಯ ಉದ್ದೇಶವೇನೆಂದರೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಅವರು ಕಲಿಕೆಯಲ್ಲಿ ಮುಂಬರುವಂತೆ ಸುಧಾರಣೆ ಮಾಡುವ ಉದ್ದೇಶವಾಗಿದೆ. ಅದಕ್ಕಾಗಿ ಪೂರಕ ಪರೀಕ್ಷೆ ನಡೆಸಿ ಪಲಿತಾಂಶ ನೀಡಿ ಮುಂದಿನ ತರಗತಿಗೆ ಕಳುಹಿಸಲಾಗುತ್ತದೆ.

ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು, “ ಶಾಲಾ ಶಿಕ್ಷಣದಲ್ಲಿ ಗುಣಮಟ್ಟವನ್ನು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಸುಧಾರಣೆ ಮಾಡಲು ಪೂರಕ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ” ಎಂದು ಹೇಳಿದರು.

You may also like

Leave a Comment