Puttur JDS: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯ ಪ್ರಭಾ ಚಿಲ್ತಡ್ಕ ಅವರಿಗೆ ಜೆಡಿಎಸ್ ಟಿಕೆಟ್ (Puttur JDS) ನೀಡಲಾಗಿದೆ. ಇದೀಗ ಜೆಡಿಎಸ್ ನ ಎರಡನೇ ಪಟ್ಟಿಯ ಬಿಡುಗಡೆ ಆಗಿದ್ದು ದಿವ್ಯ ಪ್ರಭಾ ಚಿಲ್ತಡ್ಕ ಅವರಿಗೆ ಬಿ ಫಾರಂ ನೀಡಲಾಗಿದೆ.
ಪುತ್ತೂರು ಕಾಂಗ್ರೆಸ್ ನ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆಯೂ ಆಗಿರುವ ದಿವ್ಯಪ್ರಭಾ ಚಿಲ್ತಡ್ಕ ಅವರು ಇಂದು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದು, ಕರಾವಳಿ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿದ್ದ ಜೆಡಿಎಸ್ ಗೆ ಹೊಸ ಭರವಸೆಯೊಂದು ಸಿಕ್ಕಂತಾಗಿದೆ.
ಪುತ್ತೂರಿನಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಕ್ರಮದಿಂದ ಕೋಪಗೊಂಡಿರುವ ಒಕ್ಕಲಿಗರಿಗೆ ಸೂಕ್ತ ನಾಯಕತ್ವವೊಂದು ದೊರಕಿದ ಹಾಗಾಗಿದೆ. ಒಕ್ಕಲಿಗ ಸಮುದಾಯದ ದಿವ್ಯಪ್ರಭಾ ಚಿಲ್ತಡ್ಕ ಅವರು ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಒಕ್ಕಲಿಗರು ಹೆಚ್ಚಾಗಿರುವ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ತನಗೆ ಸೀಟು ಸಿಕ್ಕರೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ ಈ ಬಾರಿ ಕೂಡಾ ಆಕೆಯನ್ನು ಕಾಂಗ್ರೆಸ್ ಪರಿಗಣನೆಗೆ ತೆಗೆದುಕೊಳ್ಳದೆ ಮೊನ್ನೆ ಮೊನ್ನೆ ಬಿಜೆಪಿಯಿಂದ ಬಂದ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಟಿಕೆಟ್ ನೀಡಲು ನಿರ್ಧರಿಸಿದೆ. ಅದಕ್ಕಾಗಿ ದಿವ್ಯಪ್ರಭಾ ಚಿಲ್ತಡ್ಕ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಈಗ ಅವರಿಗೆ ಜೆಡಿಎಸ್ ಟಿಕೆಟ್ ದೊರೆತಿದೆ.
ಇದೇ ಸಮಯದಲ್ಲಿ ಪುತ್ತೂರು ಸುಳ್ಯ ಬೆಳ್ತಂಗಡಿ ತಾಲೂಕುಗಳಲ್ಲಿ ಸೂಕ್ತ ನಾಯಕತ್ವಕ್ಕಾಗಿ ಎದುರು ನೋಡುತ್ತಿತ್ತು ಸ್ಥಳೀಯ ಜೆಡಿಎಸ್. ಇದೀಗ ದಿವ್ಯಪ್ರಭಾ ಚಿಲ್ತಡ್ಕ ಅವರು ಜೆಡಿಎಸ್ ಸೇರಿದ್ದು ಅವರು ಪುತ್ತೂರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಅವರು, “ಕಾಂಗ್ರೆಸಿನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಇದು ಮಹಿಳೆಯರಿಗಾದ ಅನ್ಯಾಯ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆಯಾಗಿದ್ದ ಸಂದರ್ಭ, ತಾನು ಹಲವು ಸಮಾಜಮುಖಿ ಕೆಲಸಗಳನ್ನು, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹಾಗಿದ್ದು ತನ್ನ ಶ್ರಮವನ್ನು, ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಗುರುತಿಸದೇ ಹೋಯಿತು. ಆದ್ದರಿಂದ ಜೆಡಿಎಸ್ ಸೇರುವ ತೀರ್ಮಾನ ಕೈಗೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಒಕ್ಕಲಿಗ ಸಮುದಾಯವನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದ ‘ ಜಾತಿ ರಾಜಕೀಯ ಮತ್ತು ಬಿಜೆಪಿಯ ಹೈಕಮಾಂಡ್ ತಂತ್ರ’ ದಿಂದ ಒಕ್ಕಲಿಗರು ನೊಂದಿದ್ದಾರೆ. ‘ ಕೋತಿ ತಾನು ತಿಂದು ಇನ್ನೊಂದರ ಮುಖಕ್ಕೆ ಒರೆಸ್ತು ‘ಎಂದಂತೆ, ಯಾರೋ ಜಾತಿ ರಾಜಕೀಯ ಮಾಡಿ ‘ ಒಕ್ಕಲಿಗರು ಜಾತಿ ರಾಜಕೀಯ ಮಾಡಿದರು ‘ ಎಂದು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ನೊಂದ ಒಕ್ಕಲಿಗ ಮತದಾರರಿಗೆ ಈ ಬಾರಿ ಅವಕಾಶವೊಂದು ದೊರೆತಿದೆ. ಮೂಲತಃ ಬಿಜೆಪಿ ಮತಗಳಾದ ಆ ‘ ನೋವಿನ ‘ ಮತಗಳಿಗೆ ಈ ಬಾರಿ ಗುನ್ನ ಬೀಳೋದು ಖಚಿತ. ಆ ಮೂಲಕ ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯ ಸುಲಭ ಆಗಲಿದೆ ಎನ್ನಲಾಗಿದೆ.
ಈ ಮತಗಳನ್ನು ಹೇಗೆ ಯಶಸ್ವಿಯಾಗಿ ದಿವ್ಯಪ್ರಭಾ ಅವರು ಕ್ರೋಢೀಕರಿಸಲು ಶಕ್ತರು ಅನ್ನೋದನ್ನ ಕಾದು ನೋಡಬೇಕಿದೆ.
ಬೆಂಗಳೂರಿನ ಜೆಪಿ ಭವನದಲ್ಲಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಿದ್ದಾರೆ. ಬಳಿಕ ಸೂಕ್ತ ದಿನ ನೋಡಿ ಪುತ್ತೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದುಕೊಂಡು ಕೆಲಸ ಮಾಡುತ್ತಿದ್ದ ದಿವ್ಯಪ್ರಭಾ ಚಿಲ್ತಡ್ಕ ಅವರು, ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಂತೆ ಪಕ್ಷ ಚುರುಕು ಪಡೆದುಕೊಂಡಿದೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆಯಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ. ಮುಂದಿನ ಬಾರಿ ಅತಂತ್ರ ಬಹುಮತ ಬರಲಿದ್ದು ಜೆಡಿಎಸ್ ಪಕ್ಷವು ಕಿಂಗ್ ಮೇಕ ಆಗುತ್ತದೆ ಎನ್ನುವುದು ಇವರಿಗೆ ನಡೆಸಿದ ಹಲವು ಸಮೀಕ್ಷೆಗಳಲ್ಲಿ ಬಯಲಾಗಿದೆ. ಅಂತಹ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ದಿವ್ಯ ಪ್ರಭಾ ಚಿಲ್ತಡ್ಕ ಅವರಿಗೆ ಉನ್ನತ ಸ್ಥಾನಮಾನಗಳು ಸಿಗುವ ಸಂಭವವಿದೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇಂದು ಜೆಡಿಎಸ್ ಪಕ್ಷದ 49 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಈ ಕೆಳಗಿನಂತೆ ಇದ್ದಾರೆ ಎಂದರು.
ಹೀಗಿದೆ ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಅಭ್ಯರ್ಥಿಗಳ 2ನೇ ಪಟ್ಟಿ
ಕುಡುಚಿ – ಆನಂದ್ ಮಾಳಗಿ
ರಾಯಭಾಗ ಎಸ್ಟಿ ಕ್ಷೇತ್ರ – ಪ್ರದೀಪ್ ಮಾಳಗಿ
ಸವದತ್ತಿ – ಸೌರಬ್ ಆನಂದ್ ಚೌಧ್ರ
ಅಥಣಿ- ಪೂಜ್ಯ ಶಶಿಕಾಂತ್ ಪಡಸಲಗಿ ಗುರುಗಳು
ಕಲಬುರ್ಗಿ ಉತ್ತರ – ನಾಸೀರ್ ಹುಸೇನ್ ಉಸ್ತಾದ್
ಬಳ್ಳಾರಿ ನಗರ – ಅಲ್ಲಾ ಭಕ್ಷ್
ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ – ಪರಮೇಶ್ವರಪ್ಪ
ಹರಪ್ಪನಹಳ್ಳಿ – ಎಂ ಎನ್ ನೂರ್ ಅಹ್ಮದ್
ಸಿರಗುಪ್ಪ ಎಸ್ಟಿ – ಪರಮೇಶ್ವರ್ ನಾಯಕ್
ಕಂಪ್ಲಿ ಎಸ್ಟಿ – ರಾಜಾನಾಯಕ್
ಕೊಳ್ಳೇಗಾಲ ಎಸ್ಸಿ – ಪುಟ್ಟಸ್ವಾಮಿ
ಗುಂಡ್ಲುಪೇಟೆ – ಕಡಬೂರು ಮಂಜುನಾಥ್
ಕಾಪೂ- ಕು.ಸಬೀನಾ ಸಮಥ್
ಕಾರ್ಕಳ-ಶ್ರೀಕಾಂತ್ ಕೊಚ್ಚು
ಉಡುಪಿ – ದಕ್ಷತ್ ಆರ್ ಶೆಟ್ಟಿ
ಬೆಂದೂರು – ಮನ್ಸೂರ್ ಇಬ್ರಾಹಿಂ
ಕುಂದಾಪುರ – ರಮೇಶ್ ಕುಂದಾಪುರ
ಕನಕಪುರ – ನಾಗರಾಜ್
ಯಲಹಂಕ – ಎಂ.ಮುನೇಗೌಡ
ಸರ್ವಜ್ಞನಗರ – ಮೊಹಮ್ಮದ್ ಮುಸ್ತಾಫ್
ಯಶವಂತಪುರ – ಜವರೇಗೌಡ
ಪುತ್ತೂರು – ಶಾಂತಕುಮಾರ್
ಶಿರಾ-ಆರ್ ರುದ್ರೇಶ್
ಸಿಂದಗಿ- ಶ್ರಿಮತಿ ವಿಶಾಲಾಕ್ಷಿ ಶಿವಾನಂದ್
ಗಂಗಾವತಿ-ಹೆಚ್ ಆರ್ ಚೆನ್ನಕೇಶವ
ಹೆಚ್ ಡಿ ಕೋಟೆ- ಜಯಪ್ರಕಾಶ್ ಸಿ
ಜೇವರ್ಗಿ – ದೊಡ್ಡಪ್ಪ ಗೌಡ ಶಿವಲಿಂಗಪ್ಪಗೌಡ
ಶಾ ಪುರ – ಗುರುಲಿಂಗಪ್ಪ ಗೌಡ
ಕಾರವಾರ – ಚೈತ್ರ ಕೋಟಾಕಾರ್
ಪುತ್ತೂರು – ದಿವ್ಯಪ್ರಭಾ
ಕಡೂರು – ವೈಎಸ್ ವಿ ದತ್ತಾ
ಹೊಳೇನರಸೀಪುರ – ಹೆಚ್ ಡಿ ರೇವಣ್ಣ
ಬೇಲೂರು -ಕೆಎಸ್ ಲಿಂಗೇಶ್
ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ
ಅರಕಲಗೂಡು – ಎ ಮಂಜು
ಶ್ರವಣಬೆಳಗೋಳ – ಸಿಎನ್ ಬಾಲಕೃಷ್ಣ
ಮಹಾಲಕ್ಷ್ಮೀಲೇಔಟ್ – ರಾಜಣ್ಣ
ಹಿರಿಯೂರು – ರವೀಂದ್ರಪ್ಪ
ಮಾಯಕೊಂಡ ಎಸ್ಸಿ – ಆನಂದಪ್ಪ
ಯಲ್ಲಾಪುರ- ಡಾ.ನಾಗೇಶ್ ನಾಯಕ್
ಹಾಸನ- ಸ್ವರೂಪ್ ಪ್ರಕಾಶ್
