Puzzle Game: ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯುವ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡುವ (puzzle Game) ಚಾಲೆಂಜ್ ಇಲ್ಲಿದೆ ನೋಡಿ.
ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿತ್ತು, ಓದುಗರನ್ನು ತಲೆಕೆಡಿಸಿಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮೊಟ್ಟೆಗಳ ಸಂಖ್ಯೆಯನ್ನು ಎಣಿಸುವುದು.
ಚಿತ್ರದಲ್ಲಿ ಮೊಟ್ಟೆಗಳ ಟ್ರೇ ಇದ್ದು, ಅದರಲ್ಲಿರುವ ಮೊಟ್ಟೆಗಳ ಸಂಖ್ಯೆಯನ್ನು ಎಣಿಸ ಬೇಕಾಗಿದೆ. ಎಣಿಸಲು ಗೊಂದಲ ಉಂಟಾಗುವ ಈ ಚಿತ್ರದಲ್ಲಿ ಏನಿಸುವುದೇ ನಿಮ್ಮ ಚಾಲೆಂಜ್. ನಿಮ್ಮ ಕಣ್ಣು ಮತ್ತು ಬುದ್ಧಿಗೆ ಕೆಲಸ ಕೊಟ್ಟು ಮೊಟ್ಟೆಗಳ ಸಂಖ್ಯೆಯನ್ನು 10 ನಿಮಿಷದಲ್ಲಿ ಹುಡುಕಬೇಕು.
10 ಸೆಕೆಂಡ್ ಸಮಯದಲ್ಲಿ ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದರೆ ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರಿ ಅಂತ ಒಪ್ಪಿಕೊಂಡರು ಮಾತ್ರ ಈ ಕೆಳಗಿನ ಉತ್ತರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇನ್ನು ಗುರುತಿಸಲು ಆಗದೆ ಎಲ್ಲಿದೆ ಅಂತ ಹುಡುಕಾಡುತ್ತಿರುವವರು ಉತ್ತರ ಕಂಡುಕೊಳ್ಳಿ.
ಟ್ರೇನಲ್ಲಿರುವ ಮೊಟ್ಟೆಗಳ ಸಂಖ್ಯೆ 30. ಕೆಳಭಾಗದಲ್ಲಿ 4 ಮೊಟ್ಟೆಗಳ 4 ಸಾಲುಗಳಿವೆ, ಅಂದರೆ ಅದು 4 * 4 = 16 ಮೊಟ್ಟೆಗಳನ್ನು ಹೊಂದಿದೆ. ಎರಡನೇ ಪದರದಲ್ಲಿ 3 ಮೊಟ್ಟೆಗಳ 3 ಸಾಲುಗಳಿವೆ, ಅಂದರೆ ಅದು 3 * 3 = 9 ಮೊಟ್ಟೆಗಳನ್ನು ಹೊಂದಿದೆ. ಅದರ ಮೇಲಿನ ಪದರದಲ್ಲಿ 2 ಮೊಟ್ಟೆಗಳ 2 ಸಾಲುಗಳಿವೆ, ಅಂದರೆ ಅದು 2*2 = 4 ಮೊಟ್ಟೆಗಳನ್ನು ಹೊಂದಿದೆ. ಮೇಲಿನ ಪದರದಲ್ಲಿ ಕೇವಲ ಒಂದು ಮೊಟ್ಟೆ ಇದೆ. ನೀವು ಎಲ್ಲಾ ಪದರಗಳಲ್ಲಿ ಮೊಟ್ಟೆಗಳನ್ನು ಸೇರಿಸಿದಾಗ, 16+9+4+1, ಟ್ರೇನಲ್ಲಿರುವ ಒಟ್ಟು ಮೊಟ್ಟೆಗಳ ಸಂಖ್ಯೆ 30.
