Home » Aadhar Card : ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು?

Aadhar Card : ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು?

0 comments
Aadhar Card Address Change

Aadhar Card Address Change:  ಆಧಾರ್ ಕಾರ್ಡ್(adhar card) ಜನರಿಗೆ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಪ್ರತಿಯೊಬ್ಬರು ಕೂಡ ತಮ್ಮನ್ನು ಗುರುತಿಸಿ ಕೊಳ್ಳಲು ಈ ಆಧಾರ್ ಅನ್ನು ಬಳಸಬೇಕಾಗಿದೆ. ಇತ್ತೀಚಿಗೆ ಆಧಾರ್ ಇಲ್ಲದೇ ಮನುಷ್ಯನು ಸಮಾಜದಲ್ಲಿ ಬದುಕುವುದೇ ಕಷ್ಟವಾಗಿ ಹೋಗಿದೆ. ದೇಶದ ಪ್ರಮುಖ ದೃಢೀಕರಣ ದಾಖಲೆಯೆಂದರೆ ಅದು ಆಧಾರ್. ಬ್ಯಾಂಕ್ ಖಾತೆ (bank account) ತೆರೆಯಲು, ಪಾಸ್ಪೋರ್ಟ್ (passport), ಡ್ರೈವಿಂಗ್ ಲೈಸೆನ್ಸ್ (driving licence) , ಹೀಗೆ ಪ್ರತಿಯೊಂದಕ್ಕೂ ಆಧಾರ್ ಇರಲೇಬೇಕು.

ಈಗೀನ ಕಾಲದಲ್ಲಿ ಜನರು ಒಟ್ಟಾರೆ ಆಧಾರ್ ಕಾರ್ಡ್ (adhar card) ಅನ್ನು ಮನೆಯಲ್ಲಿಟ್ಟು ಹೊರಗೆ ಹೋಗದಂತಾಗಿದೆ. ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಾಯಿಸಬೇಕಾ?(Aadhar Card Address Change) ಒಬ್ಬರು ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು ಗೊತ್ತಾ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.

ನೀವು ಆಧಾರ್ ಕಾರ್ಡ್ (adhar card) ನಲ್ಲಿ ನಿಮ್ಮ ವಿಳಾಸವನ್ನು ಎಷ್ಟು ಬಾರಿ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಮಿತಿ ಇಲ್ಲ. ಆದರೆ, ನೀವು ಆಧಾರ್ ಕಾರ್ಡ್ (adhar card) ನಲ್ಲಿ ವಿಳಾಸ ಬದಲಾಯಿಸಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು. ಮತ್ತು ಬದಲಾವಣೆಗೆ ಸರಿಯಾದ ಕಾರಣ ನೀಡುವುದು ಅತ್ಯಗತ್ಯ ಎಂದು ಭಾರತ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ತಿಳಿಸಿದೆ.

ಆಧಾರ್ ನಲ್ಲಿ ವಿಳಾಸ ಅಪ್ಡೇಟ್ (update) ಮಾಡುವುದು ಹೇಗೆ ?

ನೀವು ಆಧಾರ್ ನಲ್ಲಿ ವಿಳಾಸ ಅಪ್ಡೇಟ್ (update) ಮಾಡಲು ಯುಐಡಿಎಐ (UIDAI) ಅಧಿಕೃತ ವೆಬ್ ಸೈಟ್ (website) ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಬೇಟಿ ನೀಡಿ. ಇನ್ನು ಅಪ್ಡೇಟ್ (update) ಗಾಗಿ ವಿಳಾಸ ದೃಢೀಕರಣ ದಾಖಲೆಯನ್ನು ನೀಡಿ. ಕೆಲವು ದಿನಗಳ ನಂತರ ಆಧಾರ್ ನಲ್ಲಿ ನಿಮ್ಮ ವಿಳಾಸ ಅಪ್ಡೇಟ್( update) ಆಗಿರುತ್ತದೆ.

ನೀವು ನೋಂದಣಿ ಕೇಂದ್ರಕ್ಕೆ ಬೇಟಿ ನೀಡದೆ ವಿಳಾಸವನ್ನು ಅಪ್ಡೇಟ್ (update) ಮಾಡಬಹುದು. ನೀವು ಆನ್ ಲೈನ್ (online) ಮೂಲಕ ಮಾಹಿತಿ ನವೀಕರಣ ಮಾಡಬಹುದಾಗಿದೆ. ಹೆಸರು ಮತ್ತು ವಿಳಾಸದಂತಹ ಮಾಹಿತಿಗಳನ್ನು ಆಗಾಗ ಬದಲಾವಣೆ ಮಾಡಬೇಕಾಗುತ್ತದೆ. ಹೊಸ ಸ್ಥಳಗಳಿಗೆ ಬಂದಾಗ, ಮದುವೆ ಬಳಿಕ, ಹೀಗೆ ಮುಂತಾದ ಸಂದರ್ಭಗಳಲ್ಲಿ ವಿಳಾಸ ಬದಲಿಸಬೇಕಾಗುತ್ತದೆ .ಆಗ ಈ ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಅಪ್ಡೇಟ್ (update) ಮಾಡಬಹುದು.

You may also like

Leave a Comment