Home » Health Insurance : ನವವಿವಾಹಿತರೇ, ನಿಮಗಾಗಿ ಈ ಯೋಜನೆ ; ಹೆಚ್ಚಿನ ಮಾಹಿತಿ ಇಲ್ಲಿದೆ

Health Insurance : ನವವಿವಾಹಿತರೇ, ನಿಮಗಾಗಿ ಈ ಯೋಜನೆ ; ಹೆಚ್ಚಿನ ಮಾಹಿತಿ ಇಲ್ಲಿದೆ

0 comments
Health Insurance

Health Insurance: ಆರೋಗ್ಯಕ್ಕೆ (health) ಎಷ್ಟು ಸುರಕ್ಷತೆ ಇದ್ದರೂ ಸಾಲದು. ಅನಾರೋಗ್ಯ ಯಾವಾಗಲಾದರೂ ಬರಬಹುದು. ಅದಕ್ಕೆಂದು (Health Insurance) ಇದ್ದರೆ ಒಳ್ಳೆಯದು. ಇಲ್ಲಿದೆ ನೋಡಿ. ನವವಿವಾಹಿತರಿಗೆ ಆರೋಗ್ಯ ವಿಮೆ. ನೀವು ಇತ್ತೀಚೆಗೆ ಮದುವೆಯಾಗಿದ್ದರೆ ಅಥವಾ ಶೀಘ್ರದಲ್ಲೇ ಮದುವೆಯಾಗಲು ಬಯಸಿದರೆ ನಿಮಗಾಗಿ ಈ ಸಿಹಿಸುದ್ದಿ. ಕುಟುಂಬ ಆರೋಗ್ಯ ವಿಮಾ ಯೋಜನೆಯ ಮೂಲಕ ನೀವು ಹಲವು ಲಾಭ ಪಡೆಯಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಗಂಡ ಮತ್ತು ಹೆಂಡತಿ (husband and wife) ಈ ಆರೋಗ್ಯ ವಿಮಾ ಯೋಜನೆಯನ್ನು ಆರಿಸಿಕೊಳ್ಳಬೇಕು. ಈ ಯೋಜನೆಯಿಂದ ಪತಿ-ಪತ್ನಿ ತಲಾ 10 ಲಕ್ಷ ರೂ.ಗಳ ವಿಮಾ ಮೊತ್ತವನ್ನು ಪಡೆಯುತ್ತೀರಿ. ದಂಪತಿಗಳು 25 ಲಕ್ಷ ರೂ.ಗಳ ಹೆಚ್ಚುವರಿ ಕವರ್ ಹೊಂದಿರುವ ಫ್ಯಾಮಿಲಿ ವೋಟರ್ ಯೋಜನೆಯನ್ನು ಖರೀದಿಸುವ ಆಯ್ಕೆಯನ್ನು ಹೊಂದಿದ್ದಾರೆ. ನೀವು 1 ಕೋಟಿ ರೂ.ಗಳವರೆಗೆ ರಕ್ಷಣೆಯನ್ನು ಒದಗಿಸುವ ಆರೋಗ್ಯ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು.

ಕೇವಲ ವಿವಾಹಿತರು ಗರ್ಭಧಾರಣೆಯ ಪ್ರಯೋಜನಗಳನ್ನು ಹೊಂದಿರುವ ಆರೋಗ್ಯ ಪಾಲಿಸಿಯನ್ನು ಆಯ್ಕೆ ಮಾಡಬೇಕು. ಗರ್ಭಧಾರಣೆ ಮತ್ತು ಪ್ರಸವದ ಸಮಯದಲ್ಲಿ ಮಾಡಿದ ವೆಚ್ಚಗಳನ್ನು ಹೆರಿಗೆ ಪ್ರಯೋಜನಗಳಿಂದ ಭರಿಸಲಾಗುತ್ತದೆ. ನೀವು ಈಗಾಗಲೇ ವಿಮೆ ಹೊಂದಿದ್ದರೆ, ಮದುವೆಯಾದ ನಂತರ ಹೆರಿಗೆ ಆಡ್-ಆನ್ ಸೇರಿಸಬಹುದು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 (ಡಿ) ಪ್ರಕಾರ, ತೆರಿಗೆ ಕಡಿತಗಳು ಲಭ್ಯವಿದ್ದು, ನೀವು ಕುಟುಂಬ ಆರೋಗ್ಯ ವಿಮಾ ಪಾಲಿಸಿಗಳನ್ನು ಪಡೆಯುವಾಗ, ಆಯ್ಕೆ ಮಾಡಿದ ಪಾಲಿಸಿಯ ನಿಖರವಾದ ರೂಪವನ್ನು ಅವಲಂಬಿಸಿ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರಬಹುದು. ಫ್ಯಾಮಿಲಿ ಮೆಡಿಸ್ಟ್ರಿಮ್ ಪಾಲಿಸಿಯೊಂದಿಗೆ, ನೀವು ಸಮಗ್ರ ಆರೋಗ್ಯ ವಿಮಾ ರಕ್ಷಣೆಯನ್ನು ಖಾತರಿಪಡಿಸಬಹುದು ಮತ್ತು ಹಣವನ್ನ ಉಳಿಸಬಹುದು.

ಒಂದು ವೇಳೆ ನೀವು ನಿಮ್ಮ ಹೆತ್ತವರ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದರೆ ಮದುವೆಯಾದ ನಂತರ ನಿಮ್ಮ ಆರೋಗ್ಯ ವಿಮೆಯನ್ನು ನಿರ್ವಹಿಸಬಹುದು. ಹೆಚ್ಚುವರಿಯಾಗಿ, ಕವರೇಜ್ ನಿರ್ವಹಿಸಲು ನೀವು ನಿಮ್ಮ ಪೋಷಕರೊಂದಿಗೆ ವಾಸಿಸಬೇಕಿಲ್ಲ.

 

ಇದನ್ನು ಓದಿ : Prakash Raj: ವಿನೋದ್ ‘ರಾಜ್’ ಹುಟ್ಟಿನ ಗುಟ್ಟಿನ ಚರ್ಚೆಗೆ ಅಂದು ದ್ವಾರಕೀಶ್ ಅವರ ಆ ಹೇಳಿಕೆಯೇ ಕಾರಣ – ಪ್ರಕಾಶ್ ರಾಜ್ ಮೆಹು!!

You may also like

Leave a Comment