Home » Long dirve : ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್ ಸುದ್ದಿ : ಹೊಸ ಕಾರಿನಲ್ಲಿ ಲಾಂಗ್‌ ಡ್ರೈವ್‌ ಹೋಗೋದ್ರಿಂದ ಆರೋಗ್ಯಕ್ಕಿದೆ ಅಪಾಯ!

Long dirve : ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್ ಸುದ್ದಿ : ಹೊಸ ಕಾರಿನಲ್ಲಿ ಲಾಂಗ್‌ ಡ್ರೈವ್‌ ಹೋಗೋದ್ರಿಂದ ಆರೋಗ್ಯಕ್ಕಿದೆ ಅಪಾಯ!

0 comments
Long dirve

Long dirve in new car : ಹೊಸ ವಾಹನವನ್ನು ಖರೀದಿಸುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಅದರಂತೆ, ಹೊಸ ಕಾರು ಬಂದ ಕೂಡಲೇ ಲಾಂಗ್ ಡ್ರೈವ್ ಪ್ಲಾನ್ ಹಾಕಿಕೊಂಡು ಎಂಜಾಯ್ ಮಾಡುತ್ತಾರೆ. ಆದ್ರೆ, ಹೊಸ ಕಾರಿನಲ್ಲಿ ಲಾಂಗ್‌ ಡ್ರೈವ್‌ ( Long dirve in new car )ಹೋಗೋ ಮುಂಚೆ ಯೋಚಿಸೋದು ಉತ್ತಮ. ಯಾಕಂದ್ರೆ, ಹೊಸ ಕಾರಿನಲ್ಲಿ ಲಾಂಗ್ ಡ್ರೈವ್ ಹೋದ್ರೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತದೆ.

ಹೌದು. ಹೊಸ ಕಾರಿನ ರಾಸಾಯನಿಕಗಳ ವಾಸನೆಯನ್ನು ಗ್ರಹಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು. ಈ ಕುರಿತು ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಚೀನಾದ ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರ ತಂಡವು ಹೊಸ ಅಧ್ಯಯನವೊಂದನ್ನು ನಡೆಸಿದ್ದು, ಹೊಸ ಕಾರುಗಳಲ್ಲಿ ಲಾಂಗ್ ಡ್ರೈವ್ ಮಾಡುವುದು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ.

ದೀರ್ಘಕಾಲದವರೆಗೆ ಹೊಸ ಆಟೋಮೊಬೈಲ್‌ಅನ್ನು ಚಾಲನೆ ಮಾಡುವುದರಿಂದ ಕ್ಯಾನ್ಸರ್ ಬರುವುದಷ್ಟೇ ಅಲ್ಲದೆ, 20 ನಿಮಿಷಗಳ ಕಾಲ ವಾಹನ ಚಲಾಯಿಸುವುದರಿಂದ ಕೂಡ ಅಪಾಯಕಾರಿ ಹಾನಿಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಈ ಹೊಸ ವಾಹನಗಳಲ್ಲಿ U.S. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯು ಕ್ಯಾನ್ಸರ್ಗೆ ಕಾರಣವಾಗಬಹುದೆಂದು ಹೇಳುವ ಫಾರ್ಮಾಲ್ಡಿಹೈಡ್, ಚೀನಾದ ರಾಷ್ಟ್ರೀಯ ಸುರಕ್ಷತೆಯ ಅಗತ್ಯತೆಗಳಿಗಿಂತ 34.9% ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ. ಈ ಬಾಷ್ಪಶೀಲ ಸಾವಯವ ಸಂಯುಕ್ತಗಳ ಮಿಶ್ರಣದಿಂದ “ಹೆಚ್ಚಿನ ಸಂಭಾವ್ಯ ಆರೋಗ್ಯ ಅಪಾಯ” ಎಂದು ಹೇಳಲಾಗಿದೆ. ಆದ್ದರಿಂದ ಹೊಸ ಕಾರುಗಳಿಗೆ ವಿಶಿಷ್ಟವಾದ ವಾಸನೆಯನ್ನು ನೀಡುವ ರಾಸಾಯನಿಕಗಳು ಚಾಲಕರಿಗೆ ಹೆಚ್ಚಿನ ಆರೋಗ್ಯ ಅಪಾಯವನ್ನು ಉಂಟುಮಾಡುತ್ತವೆ.

ಹೊಸ ಕಾರಿನಲ್ಲಿ ಪ್ರಯಾಣಿಕರಿಗೆ ಕ್ಯಾನ್ಸರ್ ಅಪಾಯ ಹೆಚ್ಚಾಗುವಲ್ಲಿ ಇನ್ಹಲೇಷನ್ ಮಾರ್ಗವು ಮಹತ್ವದ್ದಾಗಿದ್ದು, ತಾಪಮಾನವು ಏರಿದಾಗ ಸಂಯುಕ್ತಗಳ ಸಾಂದ್ರತೆಯು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಅಲ್ಲದೇ ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್ ಪ್ರಾಪ್ 65 ಪಟ್ಟಿಯಲ್ಲಿರುವುದರಿಂದ, ವಾಹನಗಳಲ್ಲಿ ಪ್ರಯಾಣದ ಸಮಯ ಮತ್ತು ಈ ಎರಡೂ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರ ಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

You may also like

Leave a Comment