Home » Lemon Chilli Rituals: ನಿಂಬೆಕಾಯಿ ಮೆಣಸಿನಕಾಯಿಯಿಂದ ನಿಮ್ಮ ಭಾಗ್ಯದ ಬಾಗಿಲು ಈ ರೀತಿ ತೆರೆಯುತ್ತೆ!

Lemon Chilli Rituals: ನಿಂಬೆಕಾಯಿ ಮೆಣಸಿನಕಾಯಿಯಿಂದ ನಿಮ್ಮ ಭಾಗ್ಯದ ಬಾಗಿಲು ಈ ರೀತಿ ತೆರೆಯುತ್ತೆ!

0 comments
Lemon Chilli Rituals

Lemon Chilli Rituals: ಮನೆ ಬಾಗಿಲಿಗೆ ಅಥವಾ ಅಂಗಡಿಯ ಮುಂಬಾಗದಲ್ಲಿ ನಿಂಬೆಹಣ್ಣು (lemon) ಮತ್ತು ಮೆಣಸಿನಕಾಯಿಗಳನ್ನು (chilli) ಕಟ್ಟಿರುವುದನ್ನು ನೀವು ನೋಡಿರುತ್ತೀರಿ. ನಕಾರಾತ್ಮಕ ಶಕ್ತಿ (negative energy) ಒಳಪ್ರವೇಶಿಸದಿರಲು ಅವುಗಳನ್ನು ಮನೆಯ ಬಾಗಿಲಿಗೆ ಕಟ್ಟಲಾಗುತ್ತದೆ. ಅಲ್ಲದೆ, ವಾಹನಗಳಿಗೂ (vehicle) ಮೆಣಸಿನ ಕಾಯಿ ಹಾಗೂ ನಿಂಬೆಯನ್ನು ಕಟ್ಟುತ್ತಾರೆ. ವಾಹನ ಸಂಚಾರದ ವೇಳೆ ದುಷ್ಟಶಕ್ತಿಗಳಿಂದ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕಟ್ಟಲಾಗುತ್ತದೆ ಎಂದು ಹೇಳಲಾಗುತ್ತದೆ.

ಆದರೆ, ʼಮೆಣಸಿನಕಾಯಿ, ನಿಂಬೆಹಣ್ಣುʼ (Lemon Chilli Rituals) ನಕಾರಾತ್ಮಕ ಶಕ್ತಿಯನ್ನು ಓಡಿಸೋದು ಮಾತ್ರವಲ್ಲ, ನಿಮಗೆ ಅದೃಷ್ಟವನ್ನೂ ತರುತ್ತದೆ. ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಮಲಗುವ ಸಮಯದಲ್ಲಿ ನಿಂಬೆ ಹಣ್ಣಿನಿಂದ ತಲೆಯಿಂದ ಮೊಣಕಾಲಿನ ವರೆಗೆ 7 ಬಾರಿ ನಿವಾರಿಸಿ ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ ಎರಡೂ ದಿಕ್ಕುಗಳಲ್ಲಿ ಎಸೆದರೆ ಅದೃಷ್ಟ ಒಲಿದು ಬರುತ್ತದೆ ಎನ್ನಲಾಗಿದೆ.

ನಿಂಬೆಯನ್ನು ಕತ್ತರಿಸಿ ಅದರಲ್ಲಿ 4 ಲವಂಗವನ್ನು ಹಾಕಿ ಮತ್ತು ʼಓಂ ಶ್ರೀ ಹನುಮದೇ ನಮಃʼ ಎಂಬ ಮಂತ್ರದಿಂದ ಪೂಜಿಸಿ. ಇದರಿಂದ ನಿಮಗೆ ವ್ಯವಹಾರದಲ್ಲಿ ಯಶಸ್ಸು ಲಭಿಸುತ್ತದೆ.

ನಿಮಗೆ ಕೆಲಸವಿಲ್ಲದೆ ಮನೆಯಲ್ಲೇ ಇದ್ದೀರಾ ಎಂದಾದರೆ ನಿಂಬೆಹಣ್ಣು ಮತ್ತು ಮೆಣಸು ನಿಮ್ಮ ಸಹಾಯಕ್ಕೆ ಬರಲಿದೆ. ಹೇಗೆ ಅಂತೀರಾ!!.
ಮಧ್ಯಾಹ್ನ 12:00 ಗಂಟೆಗೆ ನಿಂಬೆಯನ್ನು ತೆಗೆದುಕೊಂಡು ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ನಾಲ್ಕು ತುಂಡುಗಳನ್ನು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಎಸೆಯಿರಿ. ಇದರಿಂದ ನಿಮಗೆ ಬೇಗನೆ ಕೆಲಸ ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

You may also like

Leave a Comment