Home » Heat wave: ಈ ಶಾಲೆಗಳ ರಜೆಯನ್ನು ಏಪ್ರಿಲ್ 23 ರವರೆಗೆ ವಿಸ್ತರಿಸಿದ ಸರ್ಕಾರ, ಹೀಟ್ ವೇವ್ ಹಿನ್ನೆಲೆ

Heat wave: ಈ ಶಾಲೆಗಳ ರಜೆಯನ್ನು ಏಪ್ರಿಲ್ 23 ರವರೆಗೆ ವಿಸ್ತರಿಸಿದ ಸರ್ಕಾರ, ಹೀಟ್ ವೇವ್ ಹಿನ್ನೆಲೆ

0 comments
heat wave

Heat Wave: ರಾಜ್ಯದ ಹಲವು ಭಾಗಗಳಲ್ಲಿ ಜನರು ಬಿಸಿಲು ಬೇಗೆಗೆ ತತ್ತರಿಸಿಹೋಗಿದ್ದಾರೆ. ದಕ್ಷಿಣ ಕನ್ನಡದಲ್ಲಿ (dakshina Kannada) ದಿನೇ ದಿನೇ ಬಿಸಿಲ ತಾಪ ಹೆಚ್ಚುತ್ತಿದೆ. ರೈತರು (former) ಬೆಳೆದ ಬೆಳೆಗಳು ನಾಶದತ್ತ ಮುಖಮಾಡಿವೆ. ಭೂಮಿ ನೀರಿಗಾಗಿ ಹಪಹಪಿಸುತ್ತಿದೆ. ಈ ಮಧ್ಯೆ ಹೀಟ್ ವೇವ್ (Heat Wave) ಹಿನ್ನೆಲೆ ಇಲ್ಲೊಂದು ಶಾಲೆಯಲ್ಲಿ ರಜೆಯನ್ನು (school holiday) ನೀಡಲಾಗಿದೆ.

ಹೌದು, ಈಶಾನ್ಯ ರಾಜ್ಯ ತ್ರಿಪುರದಲ್ಲಿ ಬಿಸಿಗಾಳಿ ಹೆಚ್ಚುತ್ತಿದೆ. ಬಿಸಿಲಿನ ಝಳ ಹೆಚ್ಚಾಗಿದ್ದು, ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತೀವ್ರ ತಾಪವನ್ನು ಎದುರಿಸುತ್ತಾರೆ. ಈ ಹಿನ್ನೆಲೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ಬಿಸಿಲಿನ ತಾಪವು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಬಿಸಿಗಾಳಿಯ ಹಿನ್ನಲೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು (school) ಏಪ್ರಿಲ್ 18 ರಿಂದ 23 ರವರೆಗೆ ಮುಚ್ಚಲಾಗುವುದು ಎಂದು ಸಿಎಂ ಸಹಾ ಹೇಳಿದ್ದಾರೆ.

ಈ ಬಗ್ಗೆ ಅವರು ಫೇಸ್‌ಬುಕ್ ನಲ್ಲಿ ಪೋಸ್ಟ್‌ ಮಾಡಿದ್ದು, ಎಲ್ಲಾ ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಖಾಸಗಿ ಶಾಲೆಗಳಿಗೂ ಇದೇ ರೀತಿ ಮಾಡುವಂತೆ ಅವರು ಮನವಿ ಮಾಡಿದರು. ಆದರೆ, ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.

ತ್ರಿಪುರಾದಲ್ಲಿ (tripura) ಕಳೆದ ಮೂರು ದಿನಗಳಿಂದ ಪಾದರಸವು ಸುಮಾರು 37 ಡಿಗ್ರಿ ಸೆಲ್ಸಿಯಸ್ ಇತ್ತು. ಏಪ್ರಿಲ್ 20ರವರೆಗೆ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ತ್ರಿಪುರಾದಲ್ಲಿ 4,226 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಇದ್ದು, ಅಲ್ಲಿ ಒಟ್ಟು 7.02 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅತಿಯಾಗಿ ನೀರು ಕುಡಿದ್ರೆ ಕೋಮಾಗೆ ಹೋಗ್ಬೋದು ಹುಷಾರ್!

You may also like

Leave a Comment