Home » Divorce for a cat: ಸಾಕು ಬೆಕ್ಕಿಗೋಸ್ಕರ ಗಂಡನಿಗೆ ಡಿವೋರ್ಸ್ ನೀಡಲು ಮುಂದಾದ ಹೆಂಡತಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Divorce for a cat: ಸಾಕು ಬೆಕ್ಕಿಗೋಸ್ಕರ ಗಂಡನಿಗೆ ಡಿವೋರ್ಸ್ ನೀಡಲು ಮುಂದಾದ ಹೆಂಡತಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

by ಹೊಸಕನ್ನಡ
0 comments
Divorce for a cat

Divorce for a cat: ಸಾಕು ಪ್ರಾಣಿಗಳಲ್ಲಿ ಬೆಕ್ಕು ನಾಯಿಗಳೆಂದರೆ ಹಲವರಿಗೆ ಬಲು ಪ್ರೀತಿ. ಈಗಂತೂ ಪ್ರತೀ ಮನೆಗಳಲ್ಲೂ ಬೆಕ್ಕು ಅಥವಾ ನಾಯಿ ಇಲ್ಲ ಎರಡೂ ಪ್ರಾಣಿಗಳೂ ಇದ್ದೇ ಇರತ್ತವೆ. ಇವುಗಳನ್ನು ಅತಿಯಾಗಿ ಮುದ್ದಿಸುವ ಕೆಲವರು ಅವುಗಳನ್ನು ಮನೆಯ ಸದಸ್ಯರಂತೆ ನೋಡೊಳ್ತಿರ್ತಾರೆ. ಆದರೆ ಈ ಸಾಕು ಪ್ರಾಣಿಗಳಿಗೋಸ್ಕರ ತನ್ನ ಸಂಸಾರವನ್ನೇ ಹಾಳುಮಾಡಿಕೊಂಡದನ್ನು ನೀವೇನಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಆದರೆ ಇಲ್ಲೊಬ್ಬಳು ಮಾರಾಯ್ತಿ ಬೆಕ್ಕಿಗೋಸ್ಕರ (Divorce for a cat)ಗಂಡನನ್ನೇ ಬಿಡೋದಕ್ಕೆ ರೆಡಿಯಾಗಿದ್ದಾಳೆ.

ಗಂಡ ಹೆಂಡಿರ ನಡುವೆ ಬೇರೆ ಬೇರೆ ವಿಚಾರವಾಗಿ ಜಗಳಗಳಾಗೋದು ಸಹಜ. ಆದರೆ ಸಾಕು ಪ್ರಾಣಿಗಳಿಗೋಸ್ಕರ ಕಿತ್ತಾಡಿ, ಅದು ಡೈವೋರ್ಸ್ ಕೊಡುವ ಹಂತ ತಲುಪಿದೆ ಎಂದರೆ ಎಂತಹ ವಿಪರ್ಯಾಸ ಅಲ್ವಾ?
ಅಂದಹಾಗೆ ಇಲ್ಲೊಬ್ಬಳು ಮಹಾತಾಯಿ ತನ್ನ ಮುದ್ದಿನ ಬೆಕ್ಕಿಗಾಗಿ ಪತಿಗೆ ವಿಚ್ಛೇದನ ಕೊಡುವುದಕ್ಕೆ ರೆಡಿಯಾಗಿದ್ದಾಳೆ.

ಬೆಕ್ಕಿನ ವಿಚಾರದ ಗಲಾಟೆ ಈ ಡೈವೋರ್ಸ್ ಹಂತಕ್ಕೆ ತಲುಪಲು ಅಲ್ಲಿ ನಡೆದಿದ್ದೇನೆಂದರೆ, ಪತಿ ಮಹಾರಾಯ ಮನೆಯಲ್ಲಿ ತನ್ನ ಹೆಂಡತಿ ಸಾಕಿದ್ದ ಬೆಕ್ಕನ್ನ ಕೋಪದಿಂದ ಹೊರಗೆ ಎಸೆದಿದ್ದಾನೆ. ಇದೇ ಕಾರಣಕ್ಕಾಗಿ ಮುನಿಸಿಕೊಂಡಿರುವ ಪತ್ನಿ, ಡಿವೋರ್ಸ್ ಕೊಡುವುದಕ್ಕೆ ರೆಡಿಯಾಗಿದ್ದಾಳೆ.

ಅಂದಹಾಗೆ ಅಸಲಿಗೆ ಮಹಿಳೆ ಪಾಲಿಗೆ ಬೆಕ್ಕು ತನ್ನ ತಂದೆಯ ಪುನರ್ಜನ್ಮ ಎಂಬ ನಂಬಿಕೆ ಇದೆ. ಆ ಬೆಕ್ಕಿನ ಕಣ್ಣುಗಳನ್ನ ನೋಡಿದಾಗಲೆಲ್ಲಾ ತನ್ನ ತಂದೆಯ ನೆನಪಾಗುತ್ತೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅದೇ ನಂಬಿಕೆಯಿಂದ ಚಿಕ್ಕವಳಿದ್ದಾಗಿನಿಂದಲೂ ಮುದ್ದಿನಿಂದ ಸಾಕಿದ್ದಾಳೆ. ಹೆಂಡತಿಯ ಹುಚ್ಚಾಟವನ್ನ ನೋಡಿ ರೋಸಿ ಹೋಗಿದ್ದ ಗಂಡ, ಆಕೆ ಮನೆಯಿಂದ ಹೊರಗೆ ಹೋದಾಗ ಮನೆಯ ಹೊರಗಡೆ ಎಸೆದಿದ್ದಾನೆ. ಇದರಿಂದ ನೊಂದಿರುವ ಪತ್ನಿ ಈಗ ಗಂಡನ ಸಹವಾಸವೇ ಬೇಡ ಎಂದು ಡಿವೋರ್ಸ್ ಕೇಳುತ್ತಿದ್ದಾಳೆ.

ಇದನ್ನೂ ಓದಿ: ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ವೇಶ್ಯಾವಾಟಿಕೆ!!

You may also like

Leave a Comment