Home » Dakshina Kannada: ಕಾರು-ತೂಫಾನ್‌ ಮಧ್ಯೆ ಭೀಕರ ಅಪಘಾತ! ಘಟನಾ ಸ್ಥಳದಲ್ಲೇ ನಾಲ್ವರ ಸಾವು!!!

Dakshina Kannada: ಕಾರು-ತೂಫಾನ್‌ ಮಧ್ಯೆ ಭೀಕರ ಅಪಘಾತ! ಘಟನಾ ಸ್ಥಳದಲ್ಲೇ ನಾಲ್ವರ ಸಾವು!!!

0 comments
Kadaba Accident

Kadaba Accident: ಕಡಬ ನೆಟ್ಟಣದಲ್ಲಿ ಭೀಕರ ಅಪಘಾತವೊಂದು ಜರುಗಿದ ಘಟನೆ ಬೆಳಕಿಗೆ ಬಂದಿದೆ. ಕಾರು ಮತ್ತು ತೂಫಾನ್ ವಾಹನ ನಡುವಣ ಅಪಘಾತ ಜರುಗಿದ್ದು, ಈ ಸಂದರ್ಭ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದರೆ (Death), ಹೆಚ್ಚಿನ ಮಂದಿ ಗಾಯಗೊಂಡಿರುವ ಘಟನೆ ನೆಟ್ಟಣದಲ್ಲಿ ವರದಿಯಾಗಿದೆ.

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಡಬ ಠಾಣಾ ಪೊಲೀಸರು (Police)ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತ( Kadaba Accident) ನಡೆದ ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಕರಿಸಿದ್ದು, ಸದ್ಯ, ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment