Home » Ecuador Beach: ಟ್ರಿಪ್ ಹೋಗಿದ್ದ ಮೂವರು ಸುಂದರಿಯರ ಭೀಕರ ಹತ್ಯೆ! ಅಷ್ಟಕ್ಕೂ ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

Ecuador Beach: ಟ್ರಿಪ್ ಹೋಗಿದ್ದ ಮೂವರು ಸುಂದರಿಯರ ಭೀಕರ ಹತ್ಯೆ! ಅಷ್ಟಕ್ಕೂ ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

by ಹೊಸಕನ್ನಡ
1 comment
Ecuador Beach

Ecuador Beach :ʻಇಲ್ಲೇನೋ ಆಗಲಿದೆ ಅಂತಾ ಅನಿಸುತ್ತಿದೆ. ನನಗೆ ಏನಾದ್ರೂ ಸಂಭವಿಸಬಹುದು. ಆದ್ರೆ ನೆನಪಿರಲಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆʼ ಅಂತಾ ಸಂದೇಶ ಕಳುಹಿಸಿದ ಗೆಳತಿ ಮತ್ತೆ ಸಿಕ್ಕಿದ್ದೇ ಹೆಣವಾಗಿ. ಹೌದು, ಪ್ರವಾಸಕ್ಕೆ ತೆರಳಿದ್ದ ಮೂವರು ಸುಂದರಿಯರು ಅಮೆರಿಕದ (USA) ಈಕ್ವೆಡಾರ್‌ ಬೀಚ್‌ನಲ್ಲಿ (Ecuador Beach) ಹೆಣವಾಗಿ ಪತ್ತೆಯಾಗಿರೋ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಅವರು ಕಳುಹಿಸಿರೋ ಸಂದೇಶ ಬಹಿರಂಗವಾಗಿದೆ.

ಅಂದಹಾಗೆ ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಎಂಬ ಮೂವರು ಸುಂದರ ಯುವತಿಯರು ಅಮೆರಿಕಾ ಪ್ರವಾಸಕ್ಕೆಂದು ತೆರಳಿದ್ದರು. ಬಳಿಕ ಏಪ್ರಿಲ್‌ 4ರಂದು ನಾಪತ್ತೆಯಾಗಿದ್ದರು. ನಂತರ ಏಪ್ರಿಲ್‌ 5 ರಂದು ಭೀಕರವಾಗಿ ಹತ್ಯೆಯಾಗಿ, ಹೆಣವಾಗಿ ಪತ್ತೆಯಾಗಿದ್ದರು. ಆದ್ರೆ ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ಅಂದಹಾಗೆ ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದರು, ಮೃತ ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್‌ ರೆಯ್ನಾ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದುಬಂದಿದೆ.

ಅಂದಹಾಗೆ ದೊರೆತ ಮಾಹಿತಿ ಪ್ರಕಾರ ಟ್ರಿಪ್ ಹೋಗಿದ್ದ ಮೂವರು ಯುವತಿಯರನ್ನು ಇದೇ ಏಪ್ರಿಲ್‌ 5 ರಂದು ಯಾರೋ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿ ನಂತರ ಈಕ್ವೆಡಾರ್‌ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ. ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಗುರುತಿಸಿದೆ. ಇದನ್ನು ಕಂಡ ಮೀನುಗಾರರ ಗುಂಪು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ.

ಅವರನ್ನ ಸಮಾಧಿ ಮಾಡಿ ಹೂತುಹಾಕುವುದಕ್ಕೂ ಮುನ್ನ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಅವರು ಮೃತಪಟ್ಟ ಸ್ಥಳದಲ್ಲಿ ಅವರ ಬೀಚ್ ಉಡುಪುಗಳು, ಸ್ನಾನದ ಸೂಟ್‌ಗಳು, ಲಘು ಉಡುಪುಗಳು, ಶಾರ್ಟ್ಸ್‌ಗಳನ್ನ ಕ್ವಿನಿಂಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ಸಾವಿಗೂ ಮುನ್ನ ಏಪ್ರಿಲ್‌ 4ರಂದು ಸಂತ್ರಸ್ತೆ ತಫಿಯಾ ತನ್ನ ಸಹೋದರನಿಗೆ ತಾನಿರುವ ಲೈವ್‌ ಲೊಕೇಶನ್‌ ಕಳಿಸಿ ಹಾಗೆ ಸುಮ್ಮನೆ ಕಳುಹಿಸಿರುವುದಾಗಿ ವಾಟ್ಸಪ್‌ ಸಂದೇಶ ಕಳುಹಿಸಿದ್ದಾಳೆ. ಅಲ್ಲದೆ ಮೃತ ರೇನಾ ಸಹ ತಾನು ನಾಪತ್ತೆಯಾಗುವ ಗಂಟೆಗಳಿಗೂ ಮೊದಲು ತನ್ನ ಸ್ನೇಹಿತನಿಗೆ ʻಇಲ್ಲೇನೋ ಆಗಲಿದೆ ಅಂತಾ ಅನಿಸುತ್ತಿದೆ. ನನಗೆ ಏನಾದ್ರೂ ಸಂಭವಿಸಬಹುದು. ಆದ್ರೆ ನೆನಪಿರಲಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆʼ ಅಂತಾ ಸಂದೇಶ ಕಳುಹಿಸಿದ್ದಾಳೆ. ಇದು ಆಕೆಯ ಹತ್ಯೆಯ ನಂತರ ಬೆಳಕಿಗೆ ಬಂದಿದೆ.

You may also like

Leave a Comment