Home » Siddaramaiah : ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ, 5 ವರ್ಷಗಳಲ್ಲಿ ಹೆಚ್ಚಿದ ಆಸ್ತಿ! ಸಿದ್ದು ಸಾಲ ಕೊಟ್ಟದ್ಯಾರಿಗೆ, ಪಡೆದದ್ಯಾರಿಂದ ಗೊತ್ತಾ?

Siddaramaiah : ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ, 5 ವರ್ಷಗಳಲ್ಲಿ ಹೆಚ್ಚಿದ ಆಸ್ತಿ! ಸಿದ್ದು ಸಾಲ ಕೊಟ್ಟದ್ಯಾರಿಗೆ, ಪಡೆದದ್ಯಾರಿಂದ ಗೊತ್ತಾ?

by ಹೊಸಕನ್ನಡ
1 comment
Siddaramaiah

Siddaramaiah wife : ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಒಬ್ಬರ ಹಿಂದೆ ಒಬ್ಬರಂತೆ ನಾಮಪತ್ರ ಸಲ್ಲಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಾಮಪತ್ರ ಸಲ್ಲಿಸುವಾಗ ವೈಯಕ್ತಿಕ ವಿವರಗಳನ್ನು ಹಾಗೂ ತಾವು ಹೊಂದಿರುವ ಆಸ್ತಿ ಬಗ್ಗೆ ಜನರಿಗೆ ತಿಳಿಸುವುದು ವಾಡಿಕೆ ಮತ್ತು ಆಯೋಗದ ನಿಯಮ. ಈಗಾಗಲೇ ನಾಮಪತ್ರ ಸಲ್ಲಿಸಿ ತಮ್ಮ ವಿವರಗಳನ್ನೆಲ್ಲ ಘೋಷಿಸಿದ ನಾಯಕರ ಆಸ್ತಿಗಳು ಜನಸಾಮಾನ್ಯರು ಹುಬ್ಬೇರುವಂತೆ ಮಾಡಿದೆ. ಅಂತೆಯೇ ಇದೀಗ ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನಾಮಪತ್ರ ಸಲ್ಲಿಕೆ ಮಾಡಿದ್ದು, ಸಿದ್ದುಗಿಂತ ಅವರ ಪತ್ನಿ (Siddaramaiah wife) ಪಾರ್ವತಿ ಅವರೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.

ಹೌದು, ಸಿದ್ದರಾಮಯ್ಯ (Siddaramaiah) ಅವರಿಗಿಂತ ಅವರ ಪತ್ನಿ ಪಾರ್ವತಿ ಅವರೇ ಹೆಚ್ಚು ಶ್ರೀಮಂತೆಯಾಗಿದ್ದು, ಸಿದ್ದರಾಮಯ್ಯ ಅವರ ಬಳಿ 19 ಕೋಟಿ ರೂ. ಆಸ್ತಿ ಇದ್ದರೆ, ಅವರ ಪತ್ನಿ 32.12 ಕೋಟಿ ರೂ. ಒಡತಿಯಾಗಿದ್ದಾರೆ.

ಅಂದಹಾಗೆ ಸಿದ್ದರಾಮಯ್ಯ ಅವರು 9,58 ಕೋಟಿ ಚರಾಸ್ತಿ, 9.43 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 11.26 ಕೋಟಿ ರೂ. ಚರಾಸ್ತಿ, 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, 1.29 ಕೋಟಿ ರೂ. ಪಿತ್ರಾರ್ಜಿತವಾಗಿ ಬಂದಿದೆ. 16.24 ಕೋಟಿ ರೂ. ಸಾಲ ಇದೆ. ಸಿದ್ದರಾಮಯ್ಯ ಅವರು ಕೂಡ 6.84 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು 2018ರ ಚುನಾವಣೆ ಕಾಲಕ್ಕೆ 18.55 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಆದರೆ ಈ ಚುನಾವಣೆಯಲ್ಲಿ ಅದು 50ಕೋಟಿಯನ್ನು ದಾಟಿದೆ. ಅಲ್ಲದೆ 2013ರ ಚುನಾವಣೆ ವೇಳೆ 13.61ಕೋಟಿ ಆಸ್ತಿ ಹೊಂದಿರುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು.

ಇಷ್ಟೇ ಅಲ್ಲದೆ ಸಿದ್ದರಾಮಯ್ಯ ಸಾಲ ನೀಡಿರುವ ಬಗ್ಗೆಯೂ ಮಾಹಿತಿ ದೊರಕಿದೆ. ಅವರು ಪತ್ನಿ ಪಾರ್ವತಿ ಅವರಿಗೆ 6 ಕೋಟಿ ಹಾಗೂ ಪುತ್ರ ಯತೀಂದ್ರ ಅವರಿಗೆ 1.83 ಕೋಟಿ ಸಾಲ ನೀಡಿದ್ದಾರೆ. ಸಿದ್ದರಾಮಯ್ಯ ಬಳಿ 28ಲಕ್ಷದ ಟೊಯೊಟಾ ಕಾರು ಇದೆ. ಇದರೊಂದಿಗೆ ಮಾಜಿ ಸಚಿವ ಕೆ.ಜೆ ಜಾರ್ಜ್ ಅವರಿಂದ 4ಕೋಟಿ ಸಾಲ ಪಡೆದಿದ್ದಾರೆ.

ಇನ್ನು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಬುಧವಾರ ನಾಮಪತ್ರ ಸಲ್ಲಿಸಿದರು. ಬೃಹತ್‌ ರ‍್ಯಾಲಿಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಮಾಜಿ ಸಚಿವ ಹೆಚ್‌.ಸಿ.ಮಹದೇವಪ್ಪ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಸಿದ್ದುಗೆ ಸಾಥ್‌ ನೀಡಿದರು.

ಇದನ್ನೂ ಓದಿ: Bhavani Revanna: ‘ಸ್ವರೂಪ್​​ ನನ್ನ ಮಗ, ಅವನಿಗೆ ನನ್ನ ಪೂರ್ಣ ಬೆಂಬಲವಿದೆ, ಆತ ಗೆದ್ದೇ ಗೆಲ್ತಾನೆ’ ! ಹಾಸನ JDS ಅಭ್ಯರ್ಥಿಗೆ ಭವಾನಿ ರೇವಣ್ಣ ಆಶೀರ್ವಾದ

You may also like

Leave a Comment